Advertisements

ಕೊಟ್ಟ ಮಾತಿನಂತೆ ನಡೆದುಕೊಂಡ ಜೀ ಕುಟುಂಬ.! ಕಣ್ಣಿಲ್ಲದ ರತ್ನಮ್ಮ ಮತ್ತು ಮಂಜಮ್ಮ ಇವರಿಬ್ಬಗೆ ಜೀ ಕನ್ನಡ ಮಾಡಿದ ಸಹಾಯವೇನು ಗೊತ್ತಾ.?

Kannada Mahiti

ನಮಸ್ತೆ ಸ್ನೇಹಿತರೆ, ಕನ್ನಡದ ಪ್ರಖ್ಯಾತ ಸಂಗೀತ ಕಾರ್ಯಕ್ರಮ ಎಂದರೆ ಅದು ಜೀ ಕನ್ನಡದ ಸರಿಗಮಪ, ಇಂದಿಗ ಸರಿಗಮಪ ಸೀಸನ್ 17 ಮುಕ್ತಾಯಗೊಂಡಿದೆ.. ಈ ಸೀಸನ್ 17ರ ಗ್ರಾಂಡ್ ಪೀನಲೇಯಲ್ಲಿ ಶ್ರೀನಿಧಿಶಾಸ್ತ್ರಿರವರು ವಿಜೇತರಾಗಿದ್ದಾರೆ, ಈ ಸರಿಗಮಪ ಸೀಸನ್17 ರ ವಿಶೇಷತೆ ಏನೆಂದರೆ, ಕಣ್ಣು ಕಾಣದ ರತ್ನಮ್ಮ ಮತ್ತು ಮಂಜಮ್ಮರವರಿಗೆ ಜೀ ಕನ್ನಡದಲ್ಲಿ ಹಾಡು ಹಾಡಲು ಅವಕಾಶ ನೀಡಲಾಯಿತು, ಇಷ್ಟೇ ಅಲ್ಲದೇ ಈ ಕಾರ್ಯಕ್ರಮದಲ್ಲಿ ಕೊನೆಯವರೆಗೂ ಹಾಡಲು ಅವಕಾಶ ಕೊಟ್ಟಿದ್ದಾರೆ, ಅಲ್ಲದೆ ಜನರ ಸಹಾಯದಿಂದ ಎಷ್ಟು ಹಣ್ಣು ಸಿಗುತ್ತದೊ ಅಷ್ಟು ಹಣವನ್ನು ಕೊಡುತ್ತವೆ ಎಂದು ತಿಳಿಸಿದರು..

Advertisements
Advertisements

ಇಂದಿಗ ಸರಿಗಮಪ ಸೀಸನ್ 17ರ ಸಂಚಿಕೆ ಮುಗಿಸಿದ ಬಳಿಕ ಜೀ ಕನ್ನಡ ಇವರಿಗೆ ಕೊಟ್ಟ ಮಾತು‌ ನೆರವೇರಿಸಿದೆಯಾ? ಇವರಿಗೆ ಸರಿಗಮಪದಿಂದ ಕೊಟ್ಟ ಹಣವೇಷ್ಟು ನೋಡೋಣ ಬನ್ನಿ.. ವರ್ಷದ ಆರಂಭದಲ್ಲಿ ಶುರುವಾದ ಸರಿಗಮಪ ಈ ಬಾರಿ 10 ರಿಂದ 12 ತಿಂಗಳುಗಳ ಕಾಲ ನಡೆಯಿತು, ಆದರೆ ಈ ಕೋ’ರೋನ ಕಾರಣದಿಂದ ಈ ಕಾರ್ಯಕ್ರಮ ಮದ್ಯದಲ್ಲಿ ಪ್ರಸಾರವಾಗಲಿಲ್ಲ, ನಂತರ ಅವಕಾಶ ಸಿಕ್ಕ ಬಳಿಕ ಸರಿಗಮಪ ಸೀಸನ್17 ಶುರುಮಾಡಿ ಜನಮನವನ್ನು ಗೆಲ್ಲುವಲ್ಲಿ ಯಶಸ್ವಿಯಾದರು, ಇದೀಗ ರತ್ನಮ್ಮ ಮತ್ತು ಮಂಜಮ್ಮ ರವರಿಗೆ ಸಹಾಯ ಮಾಡಿದ ಜೀ‌ ಕನ್ನಡ ತನ್ನ ದೊಡ್ಡತನವನ್ನು ಜನತೆಗೆ ತೋರಿಸಿಕೊಟ್ಟಿದೆ..

ತುಮಕೂರಿನ ದೇವಸ್ಥಾನದಲ್ಲಿ ಹಾಡು ಹೇಳುವ ಮೂಲಕ ಜನರಿಂದ ಹಣವನ್ನು ಪಡೆದು ತಮ್ಮ ಜೀವನ ನಡೆಸುತ್ತಿದ್ದ ಈ‌ ಇಬ್ಬರೂ ಕಾಯಕಿಯರನ್ನು‌ ಸರಿಗಮಪ ಕಾರ್ಯಕ್ರಮಕ್ಕೆ ಆಯ್ಕೆಮಾಡಿ, ಸ್ಪರ್ಧೆಯಿಂದ ಹೊರಗಿಟ್ಟು ಇಬ್ಬರನ್ನು ವಿಶೇಷ ಸ್ಪರ್ಧಿಯಾಗಿ ಸರಿಗಮಪ ಕಾರ್ಯಕ್ರಮದಲ್ಲಿ ಪೂರ್ತಿಯಾಗಿ ಹಾಡಲು ಅವಕಾಶ ನೀಡಲಾಯಿತು.. ಮೊದಲ ಸಂಚಿಕೆಯಲ್ಲೇ ಇವರ ಕಷ್ಟಗಳನ್ನು ನೋಡಿದ ಜನರು ಇವರಿಗೆ ಸಹಾಯ ಮಾಡಲು ಮುಂದಾದರು.. ಸಹಾಯ ಮಾಡಲು ಬಂದ ಜನರಿಂದ ಸುಮಾರು 5 ಲಕ್ಷ ರೂಪಾಯಿಯಷ್ಟು ಹಣವನ್ನು ಸಂಗ್ರಹಣೆ ಮಾಡಿ ಅಷ್ಟು ಹಣವನ್ನು ಸರಿಗಮಪ ಸೀಸನ್‌ 17 ಕೊನೆಯ ಸಮಯದಲ್ಲಿ ಇಬ್ಬರಿಗು ನೀಡಲಾಯಿತು, ಇದರಲ್ಲಿ 2.5 ಲಕ್ಷ ರೂಪಾಯಿ ಹಣ ಜನರಿಂದ ಪಡೆಯಲಾಯಿತು, ಇನ್ನು ಉಳಿದ 2.5 ಲಕ್ಷ ರೂಪಾಯಿ ಹಣವನ್ನು ಜೀ ಕನ್ನಡದ ಕೊಡುಗೆಯಾಗಿ ನೀಡಿದ್ದಾರೆ..

ಈ ಹಣವನ್ನು ಇವರಿಗೆ ಕೊಡದೆ, ಬ್ಯಾಂಕಿನಲ್ಲಿ ಇವರ ಹೆಸರಿನಲ್ಲಿ ಎಪ್ ಡಿ ಮಾಡಲಾಯಿತು, ಇದರಿಂದ ಬರುವ ಬಂಡಿ ಹಣ ಇವರ ಜೀವನದ ಸಹಾಯಕ್ಕೆ ನೀಡಲಾಗಿದೆ.. ನಟ ಜಗೇಶ್ ರವರು ಕೂಡ ಇವರಿಗೆ ಹೊಸ ಮನೆ ನೀಡಿದ್ದಾರೆ, ‌ ಅಲ್ಲದೆ ಅರ್ಜುನ ಜನ್ಯರವರು ಕೂಡ ಇವರಿಬ್ಬರಿಗೂ ಪ್ರತಿ ತಿಂಗಳ ರೇಷನ್ ನೀಡುತ್ತೇನೆ ಎಂದು ಒಪ್ಪಿಕೊಂಡಿದ್ದಾರೆ.. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ..