ನಮಸ್ತೆ ಸ್ನೇಹಿತರೆ ಕನ್ನಡದ ಜನಪ್ರಿಯ ನಟ ಜನ ಮೆಚ್ಚಿದ ಹಿರಿಯ ನಟ ನಮ್ಮ ಮಂಡ್ಯದ ಗಂಡು ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನು ಬಿಟ್ಟು ಇಂದಿಗೆ ಎರಡು ವರ್ಷವಾಗಿದೆ.. ಅಂಬರೀಶ್ ರವರಿಗೆ ತಮ್ಮ ತಂದೆ ತಾಯಿ ಈಟ್ಟ ಹೆಸರು (ಮಳವಳ್ಳಿ ಹುಚ್ಚೇಗೌಡ ಅಮರನಾಥ್) ಅಂಬಿ ೧೯೫೭-ಮೇ-೨೯ ಇವರ ಜನನವಾಯಿತು.. ಚಿತ್ರ ರಂಗಕ್ಕೆ ರೆಬಲೆ ಸ್ಟಾರ್ ಅಂಬರೀಶ್ ರವರು ೧೯೭೩ ರಲ್ಲಿ ಪುಟ್ಟಣ್ಣ ಕಣಗಾಲ್ ರವರ ನಿರ್ದೇಶನದ ನಾಗರಹಾವು ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಬರುತ್ತಾರೆ..
[widget id=”custom_html-2″]

ಕುರುಕ್ಷೇತ್ರ ಇವರ ಕೊನೆಯ ಸಿನಿಮಾವಾಗಿತ್ತು.. ಅಂಬಿ ಸುಮಾರು ೨೦೫ ಸಿನಿಮಾಗಳಲ್ಲಿ ನಟಿಸಿದ್ದಾರೆ, ಇಂದು ನಮ್ಮ ರೆಬೆಲ್ ಸ್ಟಾರ್ ಅಂಬಿ ರವರ ಎರಡನೇ ವರ್ಷದ ಪುಣ್ಯ ಸ್ಮರಣೆ ಅವರ ಸಮಾಧಿಗೆ ಶಾಸ್ತ್ರೀಯವಾಗಿ ಪುಣ್ಯ ಸ್ಮರಣೆ ನಡೆದಿದೆ.. ಅಂಬರೀಶ್ ರವರ ಪುಣ್ಯ ಸ್ಮರಣೆಯಲ್ಲಿ ಅಂಬಿಸುಮಲತಾ ಮತ್ತು ಮಗ ಅಭಿಷೇಕ್ ರವರು ತಮ್ಮ ತಂದೆಯ ಎರಡನೇ ವರ್ಷದ ಪುಣ್ಯ ಸ್ಮರಣೆ ದಿನ ತಂದೆಗೆ ಪೂಜೆ ಸಲ್ಲಿಸಿದ್ದಾರೆ.. ಸ್ಯಾಂಡಲ್ವುಡ್ ಖ್ಯಾತ ನಟ ದರ್ಶನ್ ರವರು ಕೂಡ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ ದರ್ಶನ್ ರವರು ಅಂಬರೀಶ್ ರವರ ಬಗ್ಗೆ ಈ ರೀತಿ ಹೇಳಿದರೆ..
[widget id=”custom_html-2″]

‘ನನ್ನ ಪ್ರೀತಿಯ ಸೀನಿಯರ್ ಅಂಬಿ ಅಪ್ಪಾಜಿ ಇಂದಿಗೆ ದೈಹಿಕವಾಗಿ ಅಗಲಿ ೨ ಸಂವತ್ಸರಗಳು ಕಳೆದಿವೆ. ಆದರೆ ನಮ್ಮೆಲರ ಮನಗಳಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅವರ ನೇರನುಡಿಯ ವ್ಯಕ್ತಿತ್ವ, ಮಾಡಿರುವ ಸಹೃದಯಿ ಕಾರ್ಯಗಳು ಸದಾ ಕನ್ನಡಿಗರ ಮನಸ್ಸಲ್ಲಿ ಜೀವಂತವಾಗಿರುತ್ತವೆ’ ಇನ್ನು ಅಪ್ಪಾಜಿ ತಮ್ಮ ಮನೆಯಲ್ಲಿ ದೊಡ್ಡ ಮಗನಂತೆ ನನ್ನನ್ನು ನೋಡಿಕೊಳ್ಳುತ್ತಿದ್ದರು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಅಂಬಿ ಅವರನ್ನು ಅಪ್ಪಾಜಿ ಅಂತಲೇ ಕರೆಯುತ್ತಿದ್ದರು..

ಅಂಬಿ ಅಗಲಿದ ಕ್ಷಣದಲ್ಲಿ ದರ್ಶನ್ ವಿದೇಶದಲ್ಲಿ ಶೂಟಿಂಗ್ ನಿಲ್ಲಿಸಿ ಅಂಬಿ ಅಂತ್ಯಸಂಸ್ಕಾರದ ದಿನ ಸಮಯ ಇಲ್ಲದಿದ್ದರೂ ಅಂಬಿಯ ಅಂತ್ಯ ಸಂಸ್ಕಾರದ ಕಾರ್ಯದಲ್ಲಿ ಪಾಲ್ಗೊಂಡಿದ್ದರು.. ಇನ್ನು ಅಂಬಿಯ ಈ ಎರಡನೇ ವರ್ಷದ ಪುಣ್ಯ ಸ್ಮರಣೆ ದಿನ ಅನೇಕ ಚಿತ್ರ ರಂಗದ ಕಲಾವಿದರು ಕೂಡ ಅಂಬಿ ಸಮಾಧಿ ಬಳಿ ಬಂದು ಗೌರವ ಸಲ್ಲಿಸಿದ್ದಾರೆ…