ನಮಸ್ತೆ ಸ್ನೇಹಿತರೆ, ಸ್ಯಾಂಡಲ್ವುಡ್ ನ ರಾಕಿಂಗ್ ಜೋಡಿ ರಾಧಿಕಾ ಪಂಡಿತ್ ಹಾಗು ಯಶ್ ತಮ್ಮ ಮಗಳಿಗೆ ಎಂದು ಖರೀದಿ ಮಾಡಿದ ಮನೆಯ ಗೃಹ ಪ್ರವೇಶವನ್ನ ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ.. ಹೌದು ಇಂದು ಈ ಜೋಡಿ ತಮ್ಮ ಕನಸಿನ ಮನೆಯಗೆ ಪ್ರವೇಶ ಮಾಡಿರುವ ಸಂಭ್ರಮದಲ್ಲಿ ಇದ್ದಾರೆ ಹಾಗಾದರೆ ರಾಕಿಂಗ್ ಜೋಡಿಗಳ ಕನಸಿನ ಮನೆ ಹೇಗಿದೆ ಮತ್ತು ಇವತ್ತಿನ ಗೃಹ ಪ್ರವೇಶ ಕಾರ್ಯಕ್ರಮ ಹೇಗಿತ್ತು ಯಾರೆಲ್ಲ ಈ ಗೃಹ ಪ್ರವೇಶಕ್ಕೆ ಭಾಗಿಯಾಗಿದ್ದರು ಎನ್ನುವುದನ್ನು ನೋಡೋಣ ಬನ್ನಿ..

ಇಂದು ಯಶ್ ಅವರು ತಮ್ಮ ನೂತನ ಮನೆಯ ಗೃಹಪ್ರವೇಶವನ್ನು ಅತ್ಯಂತ ಸಿಂಪಲ್ ಆಗಿ ಮಾಡಿದ್ದಾರೆ. ಈ ಮೂಲಕ ಇಂದು ಹೊಸ ಮನೆಗೆ ಅವರ ಕುಟುಂಬದ ಸಮೇತ ಕಾಲಿಟ್ಟಿದ್ದಾರೆ. ಯಶ್ ಅವರ ನೂತನ ನಿವಾಸ ಪ್ರೆಸ್ಟಿಜ್ ಗಾಲ್ಫ್ ಅಪಾರ್ಟ್ ಮೆಂಟ್ ನಲ್ಲಿದ್ದು ತಮ್ಮ ಮಕ್ಕಳಿಗಾಗಿ ಖರೀದಿ ಮಾಡಿದ್ದು ಕಳೆದ ಎರಡು ವರ್ಷಗಳ ಹಿಂದೆ ಯಶ್ ಸಿಲಿಕಾನ್ ಸಿಟಿಯಲ್ಲಿ ಹೊಸ ಮನೆ ಖರೀದಿ ಮಾಡಿದ್ದರು. ಇಷ್ಟು ದಿನ ಮನೆಯ ವಿನ್ಯಾಸ ಕೆಲಸ ನಡೆಯುತ್ತಿತ್ತು ಇದೀಗ ಆಷಾಡ ಮಾಸದ ಆರಂಭಕ್ಕೂ ಮುನ್ನ ಮನೆ

ಪ್ರವೇಶ ಮಾಡಬೇಕು ಅಂದುಕೊಂಡಂತೆ ಇದೀಗ ಇಂದು ಸಿಂಪಲ್ ಆಗಿ ರಾಕಿಭಾಯ್ ಕುಟುಂಬ ಮುಹೂರ್ತ ನಿಗಧಿ ಮಾಡಿ ಮನೆಯೊಳಗೆ ಕಾಲಿಟ್ಟಿದ್ದಾರೆ. ಇನ್ನೂ ದೇಶದಲ್ಲಿ ಕೊರೋನ ಇದ್ದ ಕಾರಣ ಯಾರಿಗೂ ಕೂಡ ಗೃಹ ಪ್ರವೇಶದ ಆಮಂತ್ರಣ ನೀಡಿರಲಿಲ್ಲ.. ಈಗಾಗಿ ಕೇವಲ ಮನೆಯ ಕುಟುಂಬದವರ ಮಾತ್ರವೇ ಈ ಒಂದು ಹೊಸ ಮನೆಯ ಗೃಹ ಪ್ರವೇಶಕ್ಕೆ ಪಾಲ್ಗೊಂಡಿದ್ದು ಅತಿ ಸರಳ ರೀತಿಯಲ್ಲಿ ಯಾರಿಗೂ ತೊಂದರೆ ನೀಡದೆ ಲಾಕ್ ಡೌನ್ ನಿಯಮವನ್ನು ಅನುಸರಿಸಿ ಇಂದು ಕನ್ನಡ ಚಿತ್ರರಂಗದ ಖ್ಯಾತ ನಟ ರಾಕಿ ಬಾಯ್ ಅವರು ಮನೆಯ ಗೃಹ ಪ್ರವೇಶವನ್ನು ಮಾಡಿ ಮುಗಿಸಿದ್ದಾರೆ..