Advertisements

ಸಾರಿಗೆ ನೌಕರರ ಪರವಾಗಿ ಪತ್ರ ಬರೆದು ಅವರ ಬೆಂಬಲಕ್ಕೆ ನಿಂತ ನಟ ರಾಕಿಂಗ್ ಸ್ಟಾರ್ ಯಶ್.? ಯಶ್ ಯಾವ ರೀತಿ ಪತ್ರ ಬರೆದಿದ್ದಾರೆ ಗೊತ್ತಾ.?

News

ನಮಸ್ತೆ ಸ್ನೇಹಿತರೆ, ನಮಗೆಲ್ಲ ತಿಳಿದಿರುವ ಹಾಗೆ ಕರ್ನಾಟಕ ಸರ್ಕಾರದ BMTC ಮತ್ತು KSRTC ಬಸ್ ಚಾಲಕರು ಹಾಗು ನಿರ್ವಾಹಕರು ತಮ್ಮ ಹಲವಾರು ಬೇಡಿಕೆಯನ್ನು ಸರ್ಕಾರದ ಮುಂದಿಟ್ಟ ಅ’ನಿರ್ದಿಷ್ಟಾವಾಧಿ ಮು’ಷ್ಕರವನ್ನ ಕೈಗೊಂಡಿದ್ದಾರೆ.. ಇನ್ನೂ ಈ ಒಂದು ಪ್ರ’ತಿಭಟನೆಗೆ ನಟ ಯಶ್ ಅವರು ಕೂಡ ಸಾರಿಗೆ ನೌಕರರಿಗೆ ಬೆಂಬಲ ನೀಡಬೇಕು ಎಂದು ಸಾರಿಗೆ ನೌಕರರ ಒಕ್ಕೂಟ ಯಶ್ ಅವರಿಗೆ ಬರೆದ ಪತ್ರ ಈಗ ಸೋಶಿಯಲ್ ಮೀಡಿಯಾದಲ್ಲಿ‌ ಸಕ್ಕತ್ ವೈ’ರಲ್ ಆಗದೆ.. ಏಳು ದಿನಗಳಿಂದ ಮು’ಷ್ಕರ ಮುಂದುವರೆದಿದ್ದು. ಕಳೆದೆರಡು ದಿನಗಳಿಂದ ತೀ’ವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇನ್ನೂ ನಟ ಯಶ್ ಅವರಿಗೆ ನಿಮ್ಮ ತಂದೆ ಕೂಡ ಸಾರಿಗೆ ನೌಕರರಾಗಿದ್ದರು. ಈ ಕುರಿತು ನಿಮ್ಮ ಜೊತೆ ಅನುಭವ, ನೋ’ವು ಹಂಚಿಕೊಂಡಿರಬಹುದು. ನೀವು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದೀರಿ, ಅದೇ ರೀತಿ ನಮಗೆ ನೀವು ಬೆಂಬಲಿಸಿ ಎಂದು ಸಾರಿಗೆ ನೌಕರರ ಒಕ್ಕೂಟ ಪತ್ರದ ಮೂಲಕ ಮನವಿ ಮಾಡಿಕೊಂಡಿದೆ.

[widget id=”custom_html-2″]

Advertisements
Advertisements

ಆದರೆ ಸಾರಿಗೆ ನೌಕರರ ಮನವಿಗೆ ನಟ ಯಶ್ ಅವರು ಒಂದು ಪತ್ರವನ್ನು ಬರೆದು ಅವರೊಂದಿಗೆ ಮಾತಾನಾಡಿದ್ದಾರೆ‌, ಇನ್ನೂ ಯಶ್ ಬರೆದ ಪತ್ರದಲ್ಲಿ ಈ ರೀತಿಯಾಗಿದೆ.. ರವರಿಗೆ , ಕರ್ನಾಟಕ ರಾಜ್ಯ ಸಾರಿಗೆ ನೌಕರರ ಒಕ್ಕೂಟ ಕರ್ನಾಟಕ ಪ್ರೀತಿಯ ಸಾರಿಗೆ ಸಂಸ್ಥೆ ನೌಕರರ ಕುಟುಂಬಕ್ಕೆ ನಿಮ್ಮ ಯಶ್ ಮಾಡುವ ನಮಸ್ಕಾರಗಳು.. ಇಂದು ನಿಮ್ಮ ಯಶ್ ಏನೇ ಆಗಿರಬಹುದು … ಆದರೆ ಅದಕ್ಕೂ ಮೊದಲು ನಾನು ನಿಮ್ಮ ಸಂಸ್ಥೆಯ ಪ್ರಾಮಾಣಿಕ ಚಾಲಕನ ಪುತ್ರ , ಮನೆಯಲ್ಲಿ ನಾನು ತಡ ಮಾಡಿದ್ರೆ ದಿನಾಲೂ ನನ್ನ ಬಸ್ಸಿನಲ್ಲಿಯೇ ಬರೋ ಪ್ರಯಾಣಿಕರಿಗೆ ಟೈನ್ ಮಿಸ್ ಆಗುತ್ತೇನೋ.. ಆಫೀಸ್ ಗೆ ಲೇಟ್ ಆಗುತ್ತೇನೋ..ಅಂತ ನಮ್ಮಪ್ಪ ಎಷ್ಟೋ ದಿನ ಬೆಳಗ್ಗೆ ಮನೆಯಲ್ಲಿ ತಿಂಡಿ ಕೂಡ ತಿನ್ನದೇ ಗಡಿಬಿಡಿಯಲ್ಲಿ ನಡೆಯುತ್ತಿದ್ದ ಆ ದಿನಗಳು ಈಗಲೂ ನೆನಪಾಗುತ್ತೆ . ಬಹುಶಃ ಇದು ನನ್ನ ಅಪ್ಪನ ಕತೆ ಮಾತ್ರವಲ್ಲ.. ಕರ್ತವ್ಯ ನಿಷ್ಠೆ ಮೆರೆವ ಸಾವಿರಾರು ಸಾರಿಗೆ ನೌಕರರುಗಳ ದಿನಚರಿ ಹೀಗೆ ಇರುತ್ತೆ.. ಸಾರಿಗೆ ಸಂಸ್ಥೆಯ ನೌಕರರು ಮತ್ತು ಪ್ರಯಾಣಿಕರ ನಡುವಿನ ಸಂಬಂಧ ಮತ್ತು ಸಹಕಾರ ಲೆಕ್ಕವಿಲ್ಲದಷ್ಟು ಗೆಳೆತನಗಳಿಗೆ ಸಾಕ್ಷಿಯಾಗಿವೆ.. ಆದರೆ ನಮ್ಮ ಸಾರಿಗೆ ಸಂಸ್ಥೆಯ ನೌಕರರ ಸಂಬಳದ ತಾರತಮ್ಯ ವಿರಬಹುದು..

[widget id=”custom_html-2″]

ರಜೆಗಳಿಗಾಗಿ ನಡೆಯುವ ತಕರಾರುಗಳಿರಬಹುದು… ಓವರ್ ಡ್ಯೂಟಿಗಾಗಿ ನಡೆಯುವ ಜ’ಟಾಪಟಿಗಳಿರಬಹುದು.. ಎಲ್ಲವನ್ನೂ ನಾನು ಹತ್ತಿರದಿಂದ ಬಲ್ಲವನು, ನ್ಯಾಯ ಕೊಡಿ ಎಂದು ಪ್ರಾಮಾಣಿಕವಾಗಿ ಹೋ’ರಾಟಕ್ಕಿಳಿದಿರುವ ಸಾರಿಗೆ ನೌಕರರ ಕೂಗು ಮತ್ತು ಸಾರಿಗೆ ಬಸ್ಸುಗಳ ಮೇಲೆಯೇ ಅವಲಂಬಿತವಾಗಿರುವ ಮಧ್ಯಮ ವರ್ಗದ ಜನರ ಅಳಲು.. ಈ ಎರಡು ಕೂಡ ನನ್ನನ್ನು ಬಹುವಾಗಿ ಕಾಡುತ್ತಿವೆ .. ದೊಡ್ಡ ಸಮಸ್ಯೆಯೊಂದರ ಪರಿಹಾರಕ್ಕೆ ಚಿಕ್ಕ ಪ್ರಯತ್ನವೆಂಬಂತೆ ಸನ್ಮಾನ್ಯ ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ ಅವರೊಂದಿಗೆ ಈ ಬಗ್ಗೆ ವಿವರವಾಗಿ ಮಾತನಾಡಿ ಸಾರಿಗೆ ನೌಕರರ ಸಮಸ್ಯೆಗಳನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇನೆ.. ಸಮಾಧಾನದ ವಿಷಯ ಅಂದ್ರೆ ಸನ್ಮಾನ್ಯ ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ ಅವರಿಗೆ ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಇದ್ದ ಅರಿವು ಮತ್ತು ಕಳಕಳಿ,

ಜೊತೆಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಾರಿಗೆ ನೌಕರರ ಬಹುಮುಖ್ಯ ಬೇಡಿಕೆಯಾದ ವೇತನ ತಾರತಮ್ಯವನ್ನು ತಪ್ಪದೆ ಈಡೇರಿಸುವ ಮಾತನ್ನು ನನಗೆ ಕೊಟ್ಟಿದ್ದು ಮತ್ತಷ್ಟು ಖುಷಿ ಕೊಡ್ತು.. ಸಮಸ್ಯೆಗೆ ಮತ್ತೊಂದು ಸಮಸ್ಯೆ ಎಂದಿಗೂ ಪರಿಹಾರವಲ್ಲ.. ಬದಲಿಗೆ ಮುಕ್ತ ಮನಸ್ಸುಗಳ ಬಿಚ್ಚುಮಾತು ಈ ಸ’ಮಸ್ಯೆಗೆ ಪರಿಹಾರವಾಗಬಲ್ಲದು ಎಂಬುದು ನನ್ನ ದೃಢ ವಿಶ್ವಾಸ. ವಿರಸ ಬಿಟ್ಟು ಸಾಮರಸ್ಯದೊಂದಿಗೆ ಮುನ್ನಡೆಯೋಣ … ವಂದನೆಗಳೊಂದಿಗೆ ನಿಮ್ಮ ಪ್ರೀತಿಯ ಯಶ್ ಬರೆದು ಪೋಸ್ಟ್ ಮಾಡಿದ್ದಾರೆ.. ನಿಮ್ಮ ಪ್ರಾಕಾರ ನಟ ಯಶ್ ಅವರು ನೀಡಿದ ಹೇ’ಳಿಕೆ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..