Advertisements

ಪುತ್ರಿ ಐರಾ ಕೊಟ್ಟ ಚಮಕ್ ಗೆ ರಾಕಿ ಬಾಯ್ ಫುಲ್ ಹ್ಯಾಪಿ! ಐರಾ ಮಾಡಿದ್ದೇನು ನೋಡಿ.

Cinema

ಕನ್ನಡದ ಜನಪ್ರಿಯ ನಟ ಸ್ಯಾಂಡಲ್ವುಡ್ ಹೀರೋ ಎಂದೆಲ್ಲಾ ಕರೆಯುವ ರಾಕಿಂಗ್ ಸ್ಟಾರ್ ಯಶ್ ರವರು ಈಗ ತಮ್ಮ ಮಗಳು ಐರಾ ಕೊಟ್ಟ ಚಮಕ್ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ..

Advertisements
Advertisements

ಹೌದು ಸ್ಯಾಂಡಲ್ವುಡ್ ನ ಹೀರೋ ರಾಕಿ ಬಾಯ್ ರವರು ತಮ್ಮ ಮಗಳ ವೀಡಿಯೊವನ್ನು ಅಪ್ಲೋಡ್ ಮಾಡಿ ಶೇರಿಂಗ್ ಮತ್ತು ಕೇರಿಂಗ್ ಎಂಬ ಸಾಲುಗಳನ್ನು ಬರೆದಿದ್ದಾರೆ. ಇನ್ನು ಯಶ್ ರವರು ತಮ್ಮ ಮುದ್ದು ಮುದ್ದಾದ ಮಗಳ ಜೊತೆ ಕಳೆದ ಸವಿ ನೆನಪುಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ಹಲವಾರು ವೀಡಿಯೋಗಳನ್ನು ನಾವು ನೋಡಿದ್ದೇವೆ. ಆದರೆ ಮತ್ತೆ ಮಗಳು ಐರಾ ಜೊತೆ ಮಾಡಿರುವ ವೀಡಿಯೋ ಈಗ ಬಹಳ ವೈರಲ್ ಹಾಗಿದೆ.

ಹೌದು ಯಶ್ ಮಾಡಿರುವ ಈ ವೀಡಿಯೋದಲ್ಲಿ ಮಗಳು ಐರಾ ಟೇಬಲ್ ಮೇಲೆ ಕುಳಿತು ಐಸ್ ಕ್ರೀಮ್ ತಿನ್ನುತ್ತಿದ್ದಾಗ, ಯಶ್ ನನಗೂ ಒಂದು ಸ್ಪೂನ್ ಐಸ್ ಕ್ರೀಮ ತಿನ್ನಿಸು ಎಂದು ಕೇಳುತ್ತಾರೆ ಆದರೆ ಐರ್ ತನ್ನ ಜಾಣತನದಿಂದ ಐಸ್ ಕ್ರೀಮ್ ತಿನಿಸುವಂತೆ ತಂದೆ ಬಳಿ ಸ್ಪೂನ್ ತೆಗೆದುಕೊಂಡು ಹೋಗಿ ಮತ್ತೆ ತಾನೇ ತಿನ್ನುವ ಹಾಗೆ ಯಶ್ ಗೆ ಚಮಕ್ ನೀಡುತ್ತಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.