ನಮಸ್ತೆ ಸ್ನೇಹಿತರೆ, ನಾವು ಪ್ರತಿ ನಿತ್ಯ ಒಂದಲ್ಲ ಒಂದು ವಿಚಾರದ ಬಗ್ಗೆ ಸರ್ಕಾರಿ ಕಛೇರಿಗಳಿಗೆ ಹೋಗುವ ಪರಿಸ್ಥಿತಿ ಎದುರಾಗುತ್ತದೆ.. ಹೌದು ಯಾವುದಾದರೂ ಕಾಗದ ಪತ್ರಗಳನ್ನ ಮಾಡಿಸಲು ಒಬ್ಬ ಅಧಿಕಾರಿಯ ಸಹಿ ಬೇಕಾಗುತ್ತದೆ.. ಈ ಕಾರಣಗಳಿಗೆ ಸಾವು ಸರ್ಕಾರಿ ಕಛೇರಿಗಳಿಗೆ ಹೋಗಬೇಕಾಗುತ್ತದೆ.. ಅದು ಮೊದಲು ಚಿಕ್ಕ ಅಧಿಕಾರಿಗಳು ನಂತರ ದೊಡ್ಡ ಅಧಿಕಾರಿಗಳು ಈಗೆ ಪ್ರತಿಯೊಬ್ಬರ ಮುಂದೆ ಸಹಿಗಾಗಿ ಕೇಳಿಕೊಳ್ಳುಬೇಕು ಆಗಲು ಕೂಡ ಸಹಿ ಸುಲಭವಾಗಿ ಸಿಗುತ್ತದೆ ಎಂತ ಹೇಳುವುದು ಸಾಧ್ಯವಿಲ್ಲ ಒಂದು ಸಹಿಗಾಗಿ ಸರ್ಕಾರಿ ಕಛೇರಿಗಳ ಸುತ್ತಾ ಇರುವ ತನ್ನ ತಂದೆ ಸುತ್ತಾಡುವುದನ್ನು ನೋಡಿ ಬೇಸತ್ತ ಮಗಳು ತನ್ನ ತಂದೆಯ ಪರಿಸ್ಥಿತಿಗೆ ಮರುಕಪಟ್ಟು ತನ್ನೊಂದು ದೃಢವಾದ ನಿರ್ಧಾರ ಮಾಡಿ

ತನ್ನ ತಂದೆಯನ್ನ ಇತರರು ಪಡುವಂತಹ ಕಷ್ಟವನ್ನು ಕಂಡು ತಾನು ಐಎಎಸ್ ಅಧಿಕಾರಿ ಆದ ಸ್ಪೂರ್ತಿಯ ಕಥೆಯೊಂದನ್ನ ನೋಡೋಣ ಬನ್ನಿ.. ಹೌದು ರೋಹಿಣಿ ಬಾಜಿ ಬಾಕ್ರೆ ಎನ್ನುವವರು ಅಂತಹುದೇ ಒಂದು ಸಾಧನೆ ಮಾಡಿರುವ ಮಹಿಳೆ ಹೌದು ರೋಹಿಣಿ ಮಹಾರಾಷ್ಟ್ರದ ಸೊಲ್ಲಾಪುರ ಬಿಳಿಯ ಉಪಲಾಯಿ ಎನ್ನುವ ಸಣ್ಣ ಗ್ರಾಮದಲ್ಲಿ ಹುಟ್ಟಿದವರು ಅವರ ತಂದೆ ಒಬ್ಬ ಸಣ್ಣ ರೈತ ರೋಹಿಣಿ 12ನೇ ತರಗತಿ ವರೆಗಿನ ವಿಧ್ಯಾಭ್ಯಾಸವನ್ನ ಸೊಲ್ಲಾಪುರದಲ್ಲಿ ಮಾಡುತ್ತಿದ್ದರು ಇನ್ನೂ ರೋಹಿಣಿ ಶಾಲೆಯಲ್ಲಿ ಟಾಪ್ ಆಗಿದ್ದರು.. 12 ನೇ ತರಗತಿಯ ನಂತರ ಇವರು ಇಂಜನಿಯರಿಂಗ್ ಪದವಿಯನ್ನು ಪಡೆದರು.. ರೋಹಿಣಿ ಅವರ ತಂದೆ ಎರಡು ಎಕರೆ ಜಮೀನು ಹೊಂದಿರುವ ಸಣ್ಣ ರೈತರಾಗಿದ್ದರು ಅವರಿಗೆ ಭೂಮಿ ಹಾಗು ಫಸಲಿಗೆ ಸಂಭಂದಿಸಿದಂತೆ ಅಧಿಕಾರಿಗಳಿಂದ ಸೂಕ್ತ ನೆರವು ಸಿಕ್ಕರಲಿಲ್ಲ.

ಆಗ ಅವರು ತನ್ನ ಮಗಳಿಗೆ ಜಿಲ್ಲಾ ಅಧಿಕಾರಿ ಹುದ್ದೆಯನ್ನು ಪ್ರಯತ್ನ ಪಟ್ಟರೆ ಜನ ನಿಯೋಗಿ ಯೋಜನೆಯನ್ನು ಮಾಡಿ ಅಭಿವೃದ್ಧಿ ಸಾಧಿಸಬಹುದು ಎನ್ನುವ ವಿಚಾರಗಳು ತನ್ನ ಮಗಳಿಗೆ ತಿಳಿ ಹೇಳುತ್ತಿದ್ದರು.. ಅಲ್ಲದೆ ರೋಹಿಣಿ ತನ್ನ ಒಂಬತ್ತನೇ ವಯಸ್ಸಿನಲ್ಲೇ ಸರ್ಕಾರ ರೈತರಿಗೆ ಎಂದು ಯೋಜನೆ ಒಂದನ್ನ ಸಿದ್ದಪಡಿಸಿದಾಗ ಅದಕ್ಕಾಗಿ ರೋಹಿಣಿ ಅವರ ತಂದೆ ಸರ್ಕಾರಿ ಕಛೇರಿಗಳಿಗೆ ಅಲೆದಾಡಿದ್ದ ದಿನಗಳನ್ನು ನೆನೆದು ತನ್ನ ಅಪ್ಪನ ಬಗ್ಗೆ ಕೇಳಿದ್ರು ಅವರ ತಂದೆ ಹಾಗ ಪ್ರಮುಖ ಪತ್ರಗಳಿಗೆ ಅಧಿಕಾರಿಗಳ ಸಹಿ ಬೇಕಾಗಿದೆ ಅದಕ್ಕಾಗಿ ಕಲೆಕ್ಟರ್ ಆಫೀಸಿನ ಸುತ್ತಾ ತಿರುಗಾಡ ಬೇಕಾಗಿತ್ತು ಎಂದು ಹೇಳಿದಾಗ ಆ ಚಿಕ್ಕ ವಯಸ್ಸಿನಲ್ಲೇ ಐಎಎಸ್ ಆಗುವ ಕನಸನ್ನ ಕಟ್ಟಿಕೊಂಡು ಬೆಳೆದು ದೊಡ್ಡವಳಾದಂತೆ ಅದನ್ನ ತನ್ನ ಗುರಿಯಾಗಿ ಇಟ್ಟುಕೊಂಡರು..

ರೋಹಿಣಿ ಇಂಜಿನಿಯರಿಂಗ್ ಮುಗಿಸಿದ ನಂತರ ಯುಪಿಎಸ್ ಸಿ ಪರೀಕ್ಷೆ ಬರೆಯುವಂತಹ ನಿರ್ಧಾರ ಮಾಡಿದರು ಅಲ್ಲದೆ ಅದಕ್ಕಾಗಿ ಎಲ್ಲಾ ರೀತಿಯ ತಾನೇ ಸಿದ್ದತೆ ಮಾಡಿಕೊಂಡಿರು ಯಾವುದೇ ಕೋಚಿಂಗ್ ನಲ್ಲಿ ಕೂಡ ಸೇರಿರಲಿಲ್ಲ ಸ್ವಯಂ ಕೃಷಿಯಿಂದ ಯುಪಿಎಸ್.ಸಿ ಪರೀಕ್ಷೆಗೆ ಸಜಾದರು ಯುಪಿಎಸ್.ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿ ಕಲೆಕ್ಟರ್ ಆದರೂ ರೋಹಿಣಿ ಅವರು ತಮಿಳು ನಾಡಿನ ಸೇಲಂ ನಲ್ಲಿ 170 ಜನ ಪುರುಷ ಕಲೆಕ್ಟರ್ ಗಳ ಬಳಿಕ ಮೊದಲ ಮಹಿಳ ಕಲೆಕ್ಟರ್ ಹುದ್ದೆಯಲ್ಲಿ ನೇಮಕಗೊಂಡು ರೈತರಿಗಾಗಿ ಒಂದು ಹೋಸ ಇತಿಹಾಸವನ್ನೇ ಮಾಡುವ ಬರೆದರು.. ರೈತರ ಕಷ್ಟವನ್ನು ನಿವಾರಣೆ ಮಾಡಲು ಐಎಎಸ್ ಅಧಿಕಾರಿ ಆದ ಈ ಮಹಿಳೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..