Advertisements

ಏಳು ವರ್ಷ ಊಟ ಮಾಡದೆ ಬದುಕಿರುವ ಈ ಜೀವಿ ! ನಿಂತಲ್ಲೇ ನಿಂತಿದೆ ಎಂದು ತಲೆ ಕೆಡಿಸಿಕೊಂಡ ವಿಜ್ಞಾನಿಗಳು.?ನಂತರ ನಡೆದಿದ್ದೇನು ಗೊತ್ತಾ..

Kannada Mahiti

ನಮಸ್ತೆ ಸ್ನೇಹಿತರೆ, ಈ ಪ್ರಪಂಚದಲ್ಲಿ ಯಾವುದೇ ಜೀವಿಯಾಗಲಿ ಅಥವಾ ಮನುಷ್ಯ ಆಗಲಿ ಈ ಭೂಮಿಯ ಮೇಲೆ ಬದುಕಬೇಕು ಎಂದರೆ, ಪ್ರತಿದಿನ ಆಹಾರ ನೀರು ಸೇವನೆ ಮಾಡಲೇಬೇಕು.. ಆದರೂ ಕೂಡ ಒಂದು ಆಥವಾ ಎರಡು ದಿನಗಳ ಕಾಲ ಊಟ‌ ನೀರು ಇಲ್ಲದಿದ್ದರು ಬದುಕಬಹುದು, ಆದರೆ ಅದಕ್ಕಿಂತ ಹೆಚ್ಚು ದಿನಗಳ ಕಾಲ ಜೀವಿಸಲು ಆಗುವುದಿಲ್ಲ.. ಅದರಲ್ಲೂ ಕೆಲವೊಂದು ಪ್ರಾಣಿಗಳು ಮಾತ್ರವೇ ವಾರಗಟ್ಟಲೇ ಆಹಾರ ಇಲ್ಲದೆ ಜೀವಿಸುತ್ತವೆ, ಆದರೆ ಈ ಜೀವಿ ಮಾತ್ರ ಸುಮಾರು ಏಳು ವರ್ಷದಿಂದ ಏನನ್ನು ತಿನ್ನದೆ ನಿಂತ ಜಾಗದಲ್ಲಿ ನಿಂತಿದೆ.. ಅಷ್ಟೇ ಅಲ್ಲದೇ ಆ ಜೀವಿ ಈಗಲೂ ಬದುಕಿದ್ದು, ವಿಜ್ಞಾನ ಲೋಕಕ್ಕೆ ಸವಾಲು ಎಸೆದಿದೆ, ಆ ಜೀವಿ ಯಾವುದು ಎಂದು ಇಲ್ಲಿ ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಇನ್ನು ವಿಜ್ಞಾನಿಗಳು ಕೂಡ ತಲೆ ಕೆಡಿಸಿ ಕೊಳ್ಳುವಂತೆ, ಮಾಡಿದ ಆ ಜೀವಿಯ ಹೆಸರು ‘ಸಲಾಮಾಂಡರ್’ ಇದು ಕೂಡ ಹಲ್ಲಿ ಜಾತಿಗೆ ಸೇರಿದ ಒಂದು ಜೀವಿ, ಹೆಚ್ಚಾಗಿ ಯೂರೋಪಿನ ಬೋಸ್ನಿಯಾ ದೇಶದಲ್ಲಿ, ನೈಸರ್ಗಿಕ ಗುಹೆಗಳಲ್ಲಿ ಈ ಜೀವಿ ವಾಸಿಸುತ್ತದೆ, ಅಲ್ಲದೆ ಈ ಹಲ್ಲಿಗಳ ಹಾಗೆ ಇರುವ ಸಲಾಮಾಂಡರ್ ಜೀವಿಗಳು ತುಂಬಾನೇ ವಿಚಿತ್ರವಾದವು, ಅದಕ್ಕೆ ಕಾರಣ ಇವುಗಳು ಚಲಿಸುವಂತಹ ದೂರ, ಈ ಹಲ್ಲಿಗಳನ್ನು ಸೋಮಾರಿ ಹಾಗೂ ಲೇಸಿ ಹಲ್ಲಿಗಳು ಎಂದು ಕರೆಯುತ್ತಾರೆ, ಯಾಕೆಂದರೆ ಹತ್ತು ವರ್ಷದಲ್ಲಿ ಈ ಹಲ್ಲಿಗಳು ಚಲಿಸುವ ದೂರ ಕೇವಲ 32 ಮೀಟರ್ ಮಾತ್ರವೇ, ಅದರೆ ಒಂದು ಹಲ್ಲಿ ಮಾತ್ರ ವಿಜ್ಞಾನ ಲೋಕಕ್ಕೆ ಸವಾಲಾಗಿ ನಿಂತಿದೆ, ಅದಕ್ಕೆ ಕಾರಣ ಈ ಹಲ್ಲಿ ಸತತ ಏಳು ವರ್ಷದಿಂದ ನಿಂತಲ್ಲೇ ನಿಂತಿದ್ದು, ನಿಂತ ಜಾಗದಿಂದ ಸ್ವಲ್ಪವೂ ಕೂಡ ಅಲುಗಾಡದೆ, ಹಾಗು ಆಹಾರ ನೀರನ್ನು ಸೇವಿಸದೆ ಎಂದು ಬದುಕಿದೆ ಎಂದು ವಿಜ್ಞಾನ ತಜ್ಞರು ತಿಳಿಸಿದ್ದಾರೆ..

[widget id=”custom_html-2″]

ಸತತ ಏಳು ವರ್ಷದಿಂದ ಆಹಾರ ನೀರು ಸೇವಿಸದೆ ಈ ಹಲ್ಲಿ ಹೇಗೆ ಬದುಕಿದೆ ಎಂದು ತಿಳಿಯಲು ವಿಜ್ಞಾನಿಗಳು ಎಷ್ಟೇ ಪ್ರಯತ್ನ ಪಟ್ಟರು, ಅದಕ್ಕೆ ಉತ್ತರ ಮಾತ್ರ ಸಿಕ್ಕಲಿಲ್ಲ.. ಕೇಲವು ವಿಜ್ಞಾನಿಗಳ‌ ಸಂಶೋಧನೆಯ ಪ್ರಕಾರ ‘ಸಲಾಮಾಂಡರ್’ ಎಂಬ ಈ ಹಲ್ಲಿಗಳು ಹತ್ತಾರು ವರ್ಷ ಬದುಕುತ್ತದೆ ಒಮ್ಮೆಲೇ ನೂರು ವರ್ಷ ಕೂಡ ಬದುಕುತ್ತವೆ ಎಂದಿದ್ದಾರೆ.. ಆದರೆ ಆಹಾರ ಸೇವಿಸದೆ, ನಿಂತಲ್ಲೇ ನಿಂತಿರುವ ಈ ಹಲ್ಲಿ ಈಗ ಒಂದು ದಾಖಲೆಯನ್ನು ನಿರ್ಮಿಸಿದೆ, ನನಗೆ ಎಲ್ಲಾ ಗೊತ್ತು ಎಂದು ಗರ್ವ ಪಡುವ ಮಾನವನಿಗೆ, ಈ‌ ಒಂದು ಹಲ್ಲಿ ಮೂಲಕ ಪ್ರಕೃತಿಯು ಕೂಡ ಸವಾಲು ಎಸೆಯುತ್ತಿದೆ.. ಸ್ನೇಹಿತರೆ ಆಹಾರ ಸೇವಿಸದೆ ಸುಮಾರು ವರ್ಷಗಳಿಂದ ಜೀವಿಸುತ್ತಿರುವ ಸಲಾಮಾಂಡರ್ ಎಂಬ ವಿಚಿತ್ರ ಹಲ್ಲಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ…