Advertisements

ಸ್ವಂತ ಅಣ್ಣನ ಹೆಂಡತಿಯನ್ನ ಮದುವೆಯಾಗಿ ಹೊಸ ಜೀವನ ಕೊಟ್ಟ ತಮ್ಮ! ಅಸಲಿಗೆ ಈ ಮದುವೆ ಆಗಲು ಕಾರಣ ಏನು ಗೊತ್ತೇ? ಇಲ್ಲಿದೆ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಸಂಬಂಧಗಳು ಬಾಂಧವ್ಯ ಬೆಸೆಯುವ ಸೇತುವೆ ಅನ್ನೋ ನಂಬಿಕೆ ಇದೇ.. ಅಪ್ಪ ಅಮ್ಮ ಅಣ್ಣ ತಮ್ಮ ಅಕ್ಕ ತಂಗಿ ಈಗೆ ಕೆಲವೊಂದು ಸಂಬಂಧಗಳು ಹುಟ್ಟಿದಾಗಿನಿಂದಲ್ಲೂ ಜೊತೆಗಾದವರು ದೊಡ್ಡವರಾಗುತ್ತಾ ದೊಡ್ಡವರಾಗುತ್ತಾ ಗಂಡ ಹೆಂಡತಿ, ಅತ್ತಿಗೆ ನಾದಿನಿ, ಬಾವ ಬಾಮೈದಾ, ಅತ್ತೆ ಮಾವ ಈಗೆ ಮತ್ತಷ್ಟು ಸಂಬಂದಗಳು ಜೀವನದಲ್ಲಿ ಸಂತೋಷವನ್ನ ಹೆಚ್ಚು ಮಾಡುವುದ ಜೊತೆಗೆ ಕುಟುಂಬವನ್ನ ದೊಡ್ಡದಾಗಿ ಮಾಡುತ್ತದೆ.. ಅಂತಹ ಸಂಬಂಧಗಳು ಪವಿತ್ರತೆಯಿಂದ ಕೂಡಿರುತ್ತದೆ.. ಆದ್ರೆ ಇಲ್ಲೊಬ್ಬ ಸ್ವಂತ ಅಣ್ಣನ ಹೆಂಡತಿಯನ್ನ ಮದುವೆಯಾದ ಘಟನೆ ನಡೆದಿದೆ.. ಕಾರಣ ಕೇಳಿ ಒಂದಷ್ಟು ಜನರು ಆತನನ್ನ ಪ್ರಶಂಸೆ ಮಾಡಿ ಮತ್ತೆ ಕೆಲವರು ಅ’ಸಮಾಧಾನ ವ್ಯಕ್ತ ಪಡಿಸಿದ್ದು ಉಂಟು.. ಈತನ ಹೆಸರು ಸಮಾಧಾನ್ ಅಂತ.. ಇತನ ವಯಸ್ಸು 26, ಈತನ ಅಣ್ಣನ ಹೆಸರು ನೀಲೇಶ್ ಆತನ ವಯಸ್ಸು 31 ವರ್ಷ..

Advertisements
Advertisements

ಇನ್ನು ನೀಲೇಶ್ ಪತ್ನಿ ಈ ಹೆಣ್ಣು ಮಗಖ ಹೆಸರು ಪೂನಂ ವಯಸ್ಸು 23 ವರ್ಷ.. ಕೆಲ ವರ್ಷದ ಹಿಂದೆ ನೀಲೇಶ್ ಮತ್ತು ಪೂನಂ ನ ವಿವಾಹ ನಡೆದಿತ್ತು.. ಇವರಿಗೆ ಒಂದೂವರೆ ವರ್ಷದ ಪುಟ್ಟ ಕಂದಮ್ಮನೂ ಇದೆ.. ಸುಂದರ ಸಂಸಾರ ಇವರದ್ದಾಗಿತ್ತು.. ಆದ್ರೆ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ನೀಲೇಶ್ ಗೆ ಕೋ’ರೋನ ಸೊಂ’ಕು ತಗುಲಿ ಸಾ’ವನ್ನಪ್ಪಿದನ್ನು.. ಇತ್ತ ಪುಟ್ಟ ಮಗುವನ್ನ ಪೂನಂ ನೋಡಿಕೊಳ್ಳುತ್ತಿದ್ದಳು.. ಕೇವಲ 23 ವರ್ಷದ ಪೂನಂ ಗಂಡನನ್ನ ಕಳೆದುಕೊಂಡು ಪುಟ್ಟ ಮಗುವಿನ ಜವಬ್ದಾರಿಯನ್ನ ಹೊತ್ತು ಸಾಕಷ್ಟು ನೋವು ಅನುಭವಿಸುತ್ತಿದ್ದರು.. ಇದನ್ನೆಲ್ಲಾ ನೋಡಿದ ನೀಲೇಶ್ ತಮ್ಮ ಸಮಾಧಾನ್ ತನ್ನ ಅತ್ತಿಗೆಯನ್ನ ಮದುವೆ ಆಗುವ ನಿರ್ಧಾರ ಮಾಡಿದನ್ನು.. ಹೌದು ಪುಟ್ಟ ಮಗು ಇರುವ ಅತ್ತಿಗೆಗೆ ಹೊಸ ಜೀವನ ಕೊಡುವ ನಿರ್ಧಾರ ಮಾಡಿದ ಸಮಾಧಾನ್ ತನ್ನ ನಿರ್ಧಾರವನ್ನ ತನ್ನ ಕುಟುಂಬಕ್ಕೂ ಹಾಗು ಅತ್ತಿಗೆಯ ಕುಟುಂಬಕ್ಕೆ ತಿಳಿಸಿದ್ದಾರೆ..

ಎರಡು ಕುಟುಂಬದವರು ಈ ಮದುವೆಗೆ ಒಪ್ಪಿಗೆಯನ್ನು ನೀಡಿದ್ರು.. ಎರಡು ದಿನಗಳ ಹಿಂದೆಯಷ್ಟೇ ಸಮಾಧಾನ್ ಹಾಗು ಪುನಾಂ ನ್ನ ವಿವಾಹ ಆ ಊರಿನ ಗ್ರಾಮದ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು.. ಇಬ್ಬರು ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ.. ಈ ಘಟನೆ ಮಹಾರಾಷ್ಟ್ರದ ಅಹಮದ್ ನಗರದ ಅಕೋಲೆ ತಾಲೂಕಿನ ಧೋಕ್ರಿಯ ಎಂಬ ಗ್ರಾಮದಲ್ಲಿ ನಡೆದಿದೆ.. ಅತ್ತಿಗೆಯ ಕೈಹಿಡಿದು ಹೊಸ ಜೀವನ ಕೊಟ್ಟು ಆದರ್ಶ ಮದುವೆಯಾದ ಸಮಾಧಾನ್ ನ ನಡೆಗೆ ಸಾಕಷ್ಟು ಜನ ಮೆಚ್ಚುಗೆ ವ್ಯಕ್ತ ಪಡಿಸಿದರೆ ಮತ್ತೆ ಕೆಲವರು ಅತ್ತಿಗೆಯನ್ನು ಬೇರೆ ಯಾರದ್ದಾದರು ಜೊತೆ ಮದುವೆ ಮಾಡಿಸಬಹುದಿತ್ತು.. ಅತ್ತಿಗೆ ತಾಯಿಯ ಸಮಾನ.. ಅವರನ್ನು ಮದುವೆಯಾಗಬಾರದಿತ್ತು ಎಂದಿದ್ದಾರೆ. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…