Advertisements

ಏಳು ಜನರಿಗೆ ಜೀವ ಕೊಟ್ಟು ತನ್ನ ಜೀವ ಕ’ಳೆದುಕೊಂಡ ನಟ ಸಂಚಾರಿ ವಿಜಯ್! ಆದರೆ ವಿಜಯ್ ಅವರು ವೈಯಕ್ತಿಕ ಜೀವನದಲ್ಲಿ ಪಟ್ಟ ಕಷ್ಟಗಳೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ರಾಷ್ಟ್ರ ಪ್ರಶಸ್ತಿ ಪ್ರಕೃತ ಸಂಚಾರಿ ವಿಜಯ್ ಅವರು ನಮ್ಮನೆಲ್ಲ ಬಿಟ್ಟು ಮತ್ತೆ ಬಾರದ ಲೋಕಕ್ಕೆ ಪ್ರಾಯಣ ಬೆಳೆಸಿದ್ದಾರೆ.. ಕೆಲವೇ ಸಿನಿಮಾದಲ್ಲಿ ನಟಿಸಿದಲ್ಲಿ ನಟಿಸಿ ಮನೋಜ್ಞ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ವಿಜಯ್ ಅವರು ಬಡತನದಲ್ಲಿ ಆರಂಭದ ಜೀವನ ನಡೆಸಿ ಇಷ್ಟು ದೊಡ್ಡ ಸಾಧನೆ ಮಾಡಿದರು. ಇವರು ಕಡೂರು ತಾಲೂಕಿನ ರಂಗಪುದರಲ್ಲಿ 1983‌ ಜುಲೈ 17 ರಂದು ಜನಿಸಿದ ವಿಜಯ್ ಅವರ ಪೂರ್ಣ ಹೆಸರು ವೇಳೆ ವಿಜಯ್ ಕುಮಾರ್ ತಂದೆ ಬಸವರಾಜಯ್ಯ ಟೈಲರ್ ಕೆಲಸವನ್ನ ಮಾಡುತ್ತಿದ್ದರು ಇವರ ತಾಯಿ ಗೌರಮ್ಮ ಅವರು ಪಂಚನ ಹಳ್ಳಿಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು.. ತಂದೆ ತಾಯಿ ಇಬ್ಬರು ಜನಪದ ಕಲಾವಿದರು ಆಗಿದ್ದರಿಂದ ಬಾಲ್ಯದಲ್ಲಿಯೇ ಅಭಿನಯದ ಕಲೆ ವಿಜಯ್ ಅವರಿಗೆ ಒಲಿದಿತ್ತು.. ಪಂಚನ ಹಳ್ಳಿಯ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದ ಇವರು. ಹಣೆಗೆರೆಯಲ್ಕಿ ಪ್ರೌಢ ಶಿಕ್ಷಣವನ್ನು ಮುಗಿಸಿದರು..

Advertisements
Advertisements

ತಿಪಟೂರಿನ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸವನ್ನು ಮಾಡಿ ನಂತರ ಬೆಂಗಳೂರಿನ ಬಿಎಮ್ ಎಸ್ ಕಾಲೇಜಿನಲ್ಲಿ ಇಂಜಿನಿಯರ್ ಪದವಿ ಪಡೆದಿದ್ದರು.. ಇವರಿಗೆ ಆರ್ಥಿಕ ಪರಿಸ್ಥಿತಿ ಸರಿ ಇರದೆ ಇದ್ದದ್ದರಿಂದ ಅಣ್ಣ ತಮ್ಮ ಇಬ್ಬರು ಮುಂದೆ ವಿದ್ಯಾಭ್ಯಾಸ ಪಡೆಯಲು ಆಗದ ಪರಿಸ್ಥಿತಿ ಎದುರಾಗುತ್ತು.. ಈಗಾಗಿ ಚನ್ನಾಗಿ ಓದುತ್ತಿದ್ದ ಅಣ್ಣನನ್ನು ಬಿಟ್ಟು ವಿಜಯ್ ಬೆಂಗಳೂರಿನ ಕಡೆ ಪಯಣ ಬೆಳೆಸಿದರು.. ಇನ್ನೂ‌ ಬೆಂಗಳೂರಿನ ರಾಜಾಜಿ ನಗರದ ಮಲೆನಾಡಿನ ಒಂದು ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು.. ಪ್ರತಿ ತಿಂಗಳು ಅಣ್ಣನಿಗೆ ಓದಲು ಹಣ ನೀಡುತ್ತಿದ್ದ ವಿಜಯ್ ಅಣ್ಣೆ ಓದು ಒಂದು ಹಂತಕ್ಕೆ ಬಂದ ನಂತರ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿದರು.. ವಿಜಯ್ ಗೆ ಬಾಲ್ಯದಿಂದಲೇ ರಂಗಭೂಮಿಯ ಕುರಿತು ಅಪಾರವಾದ ಆಸಕ್ತಿ ಹೊಂದಿದ್ದರು ಅಥಿತಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ಇವರು ತಮ್ಮ‌‌ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿ ರಂಗ ಭೂಮಿ ಪ್ರವೇಶ ಮಾಡಿದರು.. ಸಂಚಾರಿ ಥಿಯೇಟರ್ ಜೊತೆ ವರ್ಷಗಳ ನಂಟನ್ನು ಹೊಂದಿದ್ದರು..

ಸಂಚಾರಿ ವಿಜಯ್ ಕಷ್ಟದಿಂದಲ್ಲೆ ಸಿನಿಮಾ ರಂಗವನ್ನು ಪ್ರವೇಶ ಮಾಡಿದರು ರಂಗಭೂಮಿ ಸಿನಿಮಾ ಕಾಲ ಕ್ಷೇತ್ರದಲ್ಲಿ ಸಂಚಲನ ಮೂಡಿಸಿ ಚಿಕ್ಕ ವಯಸ್ಸಿನಲ್ಲೇ ಸಿನಿಮಾದಲ್ಲಿ ಅಭಿನಯಿಸುವ ಕನಸನ್ನು ಕಂಡಿದ್ದರು.. ಶಾಲಾ ದನಗಳಿಲ್ಲೂ ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ ವರ್ಷದ ವಿಜಯ್ ಅವರಿಗೆ ಚಿತ್ರಕಲೆ ಅಭಿನಯ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಳ್ಳುತ್ತಿದ್ದರು.. ವಿಜಯ್ ಇಂಜಿನಿಯರ್ ಓದುತ್ತಿರುವ ಒತ್ತಿನಲ್ಲೆ ರಂಗಭೂಮಿ ಪ್ರವೇಶ ಮಾಡಿದರು. ಸಂಚಾರಿ ಥಿಯೇಟರ್ ಎಂದು ರಂಗತಂಡ‌ ಸೇರಿದ ಬಳಿಕ ಹಲವು ನಾಟಕಗಳಲ್ಲಿ ಅಭಿನಯಿಸಿತ ತೊಡಗಿದರು ಈ ಮೂಲವಾಗಿ ಇವರು ಸಂಚಾರಿ ವಿಜಯ್ ಎಂದೆ ಚಿರಪರಿಚಿತರಾದರು.‌. ರಂಗಭೂಮಿತಲ್ಲಿ ನಟನೆಯ ಜೊತೆ ನಾಟಕಗಳ ನಿರ್ದೇಶನವನ್ನು ಮಾಡಿದರು. ಇವರು ಅಭಿನಯ ಅಲ್ಲದೆ ಶಾಸ್ತ್ರೀಯ ಸಂಗೀತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದರು..

2011 ರಲ್ಲಿ ತೆರೆಕಂಡಿಂದ ‘ರಂಗಪ್ಪ ಹೋಗ್ಬಿಟ್ನಾ’ ಎನ್ನುವ ಸಿನಿಮಾದ ಮೂಲಕ ವಿಜಯ್ ಅವರ ಸುನಿ ಬದುಕು ಆರಂಭವಾಯಿತು.. ರಂಗಪ್ಪ ಹೋಗ್ಬಿಟ್ನಾ, ನಾನು ಅವನಲ್ಲ ಅವಳು, ವಿಲನ್, ಗೋಧಿ ಬಣ್ಣ ಸಾದಾರಣ ಮೈಕಟ್ಟು, ಕಿಲ್ಲಿಂಗ್ ವೀರಪ್ಪನ್, ಅಲ್ಲಮ ಕೃಷ ತುಳಸಿ, ನಾತಿಚರಾಮಿ, ಆ‌್ಯಕ್ಟ್ ೧೯೭೮, ಸಿನಿಮಾಗಳಲ್ಲಿ ವಿಜಯ್ ಅವರು ನಟನೆ ಮಾಡಿದ್ದಾರೆ.. ಇವರು ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು‌ ಹಿಂದೆ ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಎಲ್ಲಾ ಸಿನಿಮಾಗಳಲ್ಲಿ ವಿಭಿನ್ನವಾದ ಪಾತ್ರದ ಮೂಲಕ ಜನ ಮೆಚ್ಚುಗೆಯನ್ನು ಪಡೆದು ಕೊಂಡಿದ್ದಾರೆ.. ನಾನು ಅವನಲ್ಲ ಅವಳು ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿದ್ದಾರೆ ಸಿನಿಮಾ ಮಾತ್ರವಲ್ಲದೆ ಸಾಮಾಜ ಸೇವೆಯಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ವಿಜಯ್ ಅವರು ಉಸಿರು ತಂಡವನ್ನು ಕಟ್ಟಿಕೊಂಡು ಜನ‌ ಸೇವೆಯನ್ನು ಮಾಡುತ್ತಿದ್ದರು ಕೋರೋನ ಸಂಕಷ್ಟದಲ್ಲಿ ಇದ್ದವರ ನೆರವಿಗೆ ನಿಂತಿದ್ದರು.. ಇವರು ನಟನೆ ಮಾಡಿದ ಕೆಲವು ಸಿನಿಮಾಗಳು ಲಾಕ್ ಡೌನ್ ಮುಗಿದ ಮೇಲೆ ತೆರೆಯಮೇಲೆ ಬರಲಿದೆ ಆದರೆ ಸಂಗೀತ ಸಿನಿಮಾ ಬಿಡುಗಡೆಗೆ ಮೊದಲೇ ಸಂಚಾರಿ ವಿಜಯ್ ಅವರು ಇ’ಹಲೋಕ ತ್ಯ’ಜಿಸಿದರು..