Advertisements

ಪೋಲಿಸ್ ಸ್ಟೋರಿ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ ಈ ನಟ ನೆನಪಿದ್ದಾರಾ? ಈಗ ಈ ನಟ ಎಲ್ಲಿದ್ದಾರೆ ಇವರ ಮಗ ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ‌1996 ರಲ್ಲಿ ತೆರೆಕಂಡ ಪೋಲಿಸ್ ಸ್ಟೋರಿ ಸಿನಿಮಾದ ಒಂದು ಅದ್ಭುತವಾದ ಆಕ್ಷನ್ ಸಿನಿಮಾ ಖ್ಯಾತ ಸಹಾಯ ನಿರ್ದೇಶಕ ಥ್ರಿಲ್ಲರ್ ಮಂಜು ಅವರು ಈ‌ ಸಿನಿಮಾವನ್ನ ನಿರ್ದೇಶನ ಮಾಡಿದ್ದರು ಇನ್ನೂ ಈ ಚಿತ್ರಕ್ಕೆ ನಾಯಕರಾಗಿದ್ದ ಸಾಯಿ ಕುಮಾರ್ ತಮ್ಮ ಅದ್ಬುತ ನಟನೆ ಹಾಗು ಪಂಚಿಗ್ ಡೈಲಾಗ್ ಮೂಲಕ ಕನ್ನಡದ ಒಂದು ವರ್ಗದ ಪ್ರೇಕ್ಷಕರಿಗೆ ತುಂಬಾ ಇಷ್ಟ ಪಡುತ್ತಿದ್ದರು..‌ ಇನ್ನೂ ಈ‌ ಸಿನಿಮಾದ ಮತ್ತೊಂದು ವಿಚಾರ ಏನೆಂದರೆ ಆ ಸಿನಿಮಾದಲ್ಲಿ ಬರುವ ಸತ್ಯ ಎನ್ನುವ ವಿಲನ್ ಪಾತ್ರ.. ಹೌದು ಆ ಪಾತ್ರದಲ್ಲಿ ನಟನೆ ಮಾಡಿದ ನಟ ಸತ್ಯ ಪ್ರಕಾಶ್ ಅವರು.. ಹೌದು ಸತ್ಯ ಪ್ರಕಾಶ್ ಅವರು ಮೊದಲು ಕನ್ನಡ ಸಿನಿಮಾ ಒಂದರಲ್ಲಿ ಬಣ್ಣ ಹಚ್ಚಿದರು ಸಿನಿಮಾದಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡ ಸತ್ಯ ಪ್ರಕಾಶ್ ಅವರು

Advertisements
Advertisements

ನಂತರ ಸಿನಿಮಾದಲ್ಲಿ ಬಹು ಬೇಡಿಕೆಯ ಖಳನಟರಾಗಿ ಬೆಳೆದರು ಸತ್ಯ ಪ್ರಕಾಶ್ ಅವರು ಮೂಲತಃ ಒರಿಸ್ಸಾದವರು ಸತ್ಯ ಪ್ರಕಾಶ್ ಅವರು ಕೋಲ್ಕತ್ತಾದಲ್ಲಿ MBA ಪದವಿಯನ್ನು ಮುಗಿಸಿ ಬ್ಯಾಂಕ್ ನಲ್ಲಿ ಕೆಲಸ ಮಾಡಿದ್ದರು.. ನಂತರ ಡಿಫೆನ್ಸ್ ನಲ್ಲಿ ಕೆಲಸ ಮಾಡಿದ ಸತ್ಯ ಪ್ರಕಾಶ್ ಅವರಿಗೆ ಚಿಕ್ಕ ವಯಸ್ಸಿನಲ್ಲೂ ತಾನೊಬ್ಬ ನಟ ಆಗಬೇಕು ಎನ್ನುವ ಕನಸಿತ್ತು ಚಿಕ್ಕ ವಯಸ್ಸಿನಿಂದಲೂ ಅಮಿತಾ ಭಚನ್ ಅವರ ಸಿನಿಮಾಗಳನ್ನು ತುಂಬಾ ಇಷ್ಟ ಪಡುತ್ತಿದ್ದ ಸತ್ಯ ಪ್ರಕಾಶ್ ಅವರು ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾದ ಕನಸ್ಸು ಕಂಡಿದ್ದರು.‌. ಡಿಫೆನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸತ್ಯ ಪ್ರಕಾಶ್ ಅವರು ತಾನೊಬ್ಬ ನಟ ಆಗಬೇಕು ಎನ್ನುವ ನಿರ್ಧಾರ ಮಾಡಿ ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಚೆನ್ನೈಗೆ ಬಂದರು.. ತಮಿಳು ಚಿತ್ರರಂಗವೇ ತನಗೆ ಸರಿಯಾದ ಪ್ಲಾಟ್ ಫಾರಂ ಎಂದು ಭಾವಿಸಿದ

ಸತ್ಯ ಪ್ರಕಾಶ್ ಅವರು ಸತತ ಐದು ವರ್ಷಗಳ ಕಾಲ ಸಿನಿಮಾಗಳಲ್ಲಿ ಅವಕಾಶ ಪಡೆಯಲು ಪರದಾಡಿದ್ದರು ಜೀವನದಲ್ಲಿ ಹೇಗೋ ಕಷ್ಟಪಟ್ಟು ತಮಿಳು ಭಾಷೆಯನ್ನು ಸಹ ಕಲಿತರು ಆದರೆ ತಮಿಳು ಸಿನಿಮಾದಲ್ಲಿ ಅವಕಾಶಗಳು ಅವರಿಗೆ ಸಿಗಲಿಲ್ಲ.. ನಂತರ ಹೇಗೋ ಥ್ರಿಲ್ಲರ್ ಮಂಜು ಅವರ ಕಣ್ಣಿಗೆ ಕಾಣಿಸಿಕೊಂಡ ಸತ್ಯ ಪ್ರಕಾಶ್ ಅವರಿಗೆ ಥ್ರಿಲ್ಲರ್ ಮಂಜು ಅವರು ತಮ್ಮ ಸಿನಿಮಾವಾದ ಪೋಲಿಸ್ ಸ್ಟೋರಿ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟನೆ ಮಾಡುವ ಅವಕಾಶ ನೀಡಿದರು .. ಥ್ರಿಲ್ಲರ್ ಮಂಜು ಅವರ ನಂಬಿಕೆಯನ್ನು ಸತ್ಯ ಮಾಡಿದ ಸತ್ಯ ಪ್ರಕಾಶ್ ಅವರು ತಮ್ಮ ಮೊದಲ‌ ಸಿನಿಮಾದಲ್ಲೇ ನಿರ್ದೇಶಕ ಥ್ರಿಲ್ಲರ್ ಮಂಜು ಅವರಿಂದ ಪ್ರಶಂಸೆಯನ್ನು ಪಡೆದುಕೊಂಡರು.. ನಂತರ ಇವರ ಪ್ರತಿಭೆಯನ್ನು ಗುರುತಿಸಿದ ತಮಿಳು ಹಾಗು ತೆಲುಗು ಚಿತ್ರರಂಗ ಸತ್ಯ ಪ್ರಕಾಶ್ ಅವರಿಗೆ ಸಿನಿಮಾದಲ್ಲಿ ನಟನೆ ಮಾಡುವ ಅವಕಾಶವನ್ನ ನೀಡಿದರು..

ಕನ್ನಡ ತೆಲುಗು ತಮಿಳು ಮಲೆಯಾಳಂ ಹಿಂದಿ ಬೋಜಾಪುರಿ ಬೆಂಗಾಲಿ ಒರಿಸ್ಸಾ ಈಗೆ ಹತ್ತು ಭಾಷೆಗಳಲ್ಲಿ ಸುಮಾರು 540 ಹೆಚ್ಚು ಸಿನಿಮಾಗಳಲ್ಲಿ ಸತ್ಯ ಪ್ರಕಾಶ್ ಅವರು ನಟನೆ ಮಾಡಿದ್ದಾರೆ.. ಕನ್ನಡ ತಮಿಳು ತೆಲುಗಿನಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ನಟನೆ ಮಾಡಿರುವ ಸತ್ಯ ಪ್ರಕಾಶ್ ಕೇವಲ ನಟ ಮಾತ್ರವಲ್ಲದೆ ನಿರ್ದೇಶಕರಾಗಿ ನಿರ್ಮಾಪಕರಾಗಿ ಎಲ್ಲೆಡೆ ಗುರುತಿಸಿಕೊಂಡರು.. ಪ್ರಸ್ತುತ ಸತ್ಯ ಪ್ರಕಾಶ್ ಅವರು ತನ್ನ ಮಗನಾದ ನಟರಾಜ್ ಅವರಿಗೆ ಉಲಾಲ ಉಲಾಲ ಎಂಬ ತೆಲುಗು ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ.. ಇನ್ನೂ ಸತ್ಯ ಪ್ರಕಾಶ್ ಅವರು ಕನ್ನಡದಲ್ಲಿ ನಟನೆ ಮಾಡಿದ ಕೊನೆಯ ಸಿನಿಮಾ‌ ಗಿರಗಿಟ್ಲೆ.. ಸತ್ಯ ಪ್ರಕಾಶ್ ಅವರ ನಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..