ನಮಸ್ತೆ ಸ್ನೇಹಿತರೆ, ನಮಗೆಲ್ಲ ಗೊತ್ತಿರುವ ಹಾಗೆ ಹೊರಗಡೆ ಹೋದಾಗ ಅಲ್ಲಿನ ತಿಂಡಿಗಳು ವಿಭಿನ್ನವಾಗಿ ಇರುತ್ತದೆ ಅಲ್ಲದೆ ಅದರ ಮೊತ್ತ ಕೂಡ ವಿಭಿನ್ನವಾಗಿ ಇರುತ್ತದೆ.. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಮಾಲ್ ಗಳಲ್ಲಿ ಹಾಗೂ ಚಿತ್ರ ಮಂದಿರಗಳಲ್ಲಿ ತಿನ್ನುವ ಪದಾರ್ಥಗಳ ಬೆಲೆ ಕೇಳಿದರೆ ಅಚ್ಚರಿಯಾಗುತ್ತದೆ. ಎರಡು ಪಟ್ಟು ಬೆಲೆ ಹೆಚ್ಚಾಗಿರುತ್ತದೆ.. ಆದರೆ ಹೊರಗಡೆ ಒಂದು ಪಾಪ್ ಕಾರ್ನ್ ಬೆಲೆ15ರೂ ಇದ್ದಾರೆ ಚಿತ್ರ ಮಂದಿರಗಳಲ್ಲಿ ಮಾತ್ರ ಅದೆ ಪಾಪ್ ಕಾರ್ನ್ ಬೆಲೆ ಕನಿಷ್ಠ 150 ಕ್ಕೆ ಮಾರಾಟ ಮಾಡುತ್ತಾರೆ.. ಅದರೆ ಇದನ್ನೆ ಹವ್ಯಾಸವಾಗಿ ಮಾಡಿಕೊಂಡು ಮಾರಾಟ ಮಾಡುವಂತ ಹಲವಾರು ಜನರನ್ನು ನೋಡಿರುತ್ತೆವೆ..

ಇನ್ನು ಅದೇರೀತಿ ಇಲ್ಲೊಬ್ಬ ವ್ಯಕ್ತಿ ಕೇವಲ 20 ರೂ ಬೆಲೆ ಇರುವ ನೀರಿನ ಬಾಟಲ್ ಅನ್ನ 150 ರೂಗೆ ಮಾರಾಟ ಮಾಡಿದ್ದಾರೆ, ಹೌದು ಈ ಘಟನೆ ಅಹಮದಾಬಾದ್ ನಲ್ಲಿ ಎಸ್ ಜಿ ಹೆದ್ದಾರಿಯಲ್ಲಿ ಇರುವ ಹೋಟೆಲ್ ಒಂದರಲ್ಲಿ ರೋಹಿತ್ ಅವರು ತಮ್ಮ ಸ್ನೇಹಿತರ ಸೇರಿಕೊಂಡು ತಮಗೆ ಇಷ್ಟವಾದ ಪದಾರ್ಥವನ್ನು ಹಾಗೆಯೇ ವಾಟರ್ ಬಾಟಲ್ ಅನ್ನು ಆರ್ಡರ್ ಮಾಡಿದರು.. ನಂತರ ಅವರ ಊಟವನ್ನು ಮುಗಿಸಿದ ಬಳಿಕ ಆ ಹೋಟೆಲ್ ನವರು ಕೊಟ್ಟ ಬಿಲ್ ನೋಡಿ ಒಂದು ಕ್ಷಣ ರೋಹಿತ್ ಆರ್ಶ್ವಯ ಕೊಂಡರು, ಆದರೆ ಒಂದು ನೀರಿನ ಬಾಟಲ್ ಗೆ 164 ರೂ ಬಿಲ್ ಮಾಡಲಾಗಿದೆ.. ಅದನ್ನು ನೋಡಿದ ರೋಹಿತ್.. ನಂತರ ಹೋಟೆಲ್ ಮಾಲಿಕರಿಗೆ ಈ ಬಿಲ್ ನಮ್ಮದಲ್ಲ ಬೇರೆ ಯಾರಾದೋ ಅಥವಾ ತಪ್ಪಾಗಿ ನಮಗೆ ಬಿಲ್ ನೀಡಿರಬೇಕು ಎಂದು ಮಾಲಿಕರ ಬಳಿ ಸ್ವಲ್ಪ ಸಮಯ ಕಾಲ ಜಗಳ ಮಾಡಿದರು,

ಆದರೂ ಇವರು ಎಷ್ಟೇ ಜಗಳ ಮಾಡಿದರು ಪ್ರಯೋಜನವಾಗದೆ ಬಿಲ್ ಪಾವತಿಸ ಅಲ್ಲಿಂದ ಮರಳಿದರು.. ಆದರೆ ರೋಹಿತ್ ಅಷ್ಟಕ್ಕೇ ಸುಮನಾಗಲಿಲ್ಲ.. ಗ್ರಾಹಕರ ಕೋರ್ಟ್ ಗೆ ಹೋಟೆಲ್ ಮೇಲೆ ದೂರನ್ನು ಸ್ವೀಕರಿಸಿದರು.. ನಂತರ ಆ ಕೋರ್ಟ್ ಮುಖಾಂತರ ಆ ಹೋಟೆಲ್ ಮಾಲೀಕನಿಗೆ ಲೀಗಲ್ ನೋಟೀಸ್ ನೀಡಲಾಯಿತು, ಆದರೆ ರೋಹಿತ್ ಗೆ ಕೇವಲ ಒಂದು ಬಾಟಲ್ ನೀರಿನ ಬಗ್ಗೆ ತೀರ್ಪು ನೀಡುವುದಕ್ಕೆ ಐದು ವರ್ಷ ಹಿಡಿಯುತ್ತದೆ ಎಂದು ತಿಳಿದಿರಲಿಲ್ಲ, ಇದರಿಂದ ರೋಹಿತ್ ತಾಳ್ಮೆಯಿಂದ ಪ್ರತಿಬಾರಿ ಕೋರ್ಟ್ ಗೆ ಬರುತ್ತಿದ್ದರು, ಕಡೆಗೂ ರೋಹಿತ್ ಪರವಾಗಿ ತೀರ್ಪು ನೀಡಿದ ನ್ಯಾಯಾಲಯ,

ಹೋಟೆಲ್ ಮಾಲೀಕನಿಗೆ MRPಗಿಂತ ಹೆಚ್ಚು ದರ ವಿಧಿಸಿದ್ದು ಅಲ್ಲದೆ ರೋಹಿತ್ ಗೆ ಹಣವನ್ನು ಪಾವತಿ ಮಾಡಲೇಬೇಕು ಎಂದು ಕಿರುಕುಳ ನೀಡಿದಕ್ಕೆ , ನ್ಯಾಯಾಲಯದ ಪರವಾಗಿ 5,500 ರೂ ಪರಿಹಾರ ನೀಡಬೇಕು ಎಂದು ಆ ಹೋಟೆಲ್ ಮಾಲೀಕನಿಗೆ ಆದೇಶ ನೀಡಿತು. ನಂತರ ರೋಹಿತ್ ಕೋರ್ಟ್ ನೀಡಿದ ಆದೇಶ ನನಗೆ ಸಮ್ಮತಿ ಇದೆ, ಇದು ನನ್ನ ಮೊದಲ ಕೇಸ್ ಅಲ್ಲ ಇದೇ ರೀತಿ ಹಲವು ಬಾರಿ ದೂರು ನೀಡಿದೆ.. ಅದರೆ ಈ ರೀತಿ ಗ್ರಾಹಕರನ್ನು ದುರುಪಯೋಗ ಪಡಿಸಿಕೊಳ್ಳದೆ ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕು.. ದರೋಡೆ ಮಾಡಬಾರದು ಎಂದು ರೋಹಿತ್ ಹಾಗು ಸ್ನೇಹಿತರೆ ಕೋರ್ಟ್ ಮೂಲಕ ತಿಳಿಸಿದರು.. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ..