Advertisements

ಮನೆ ಮನೆಗೂ ಹೋಗಿ ಸೊಪ್ಪು ಮಾರುತ್ತಿದ್ದ ಈ ಅಜ್ಜಿ ಮಾಡಿದ ಕೆಲಸ ನೋಡಿದ್ರೆ ಶಾಕ್ ಆಗುತ್ತದೆ! ಅಷ್ಟಕ್ಕೂ ಈ ಅಜ್ಜಿ ಮಾಡಿದ್ದೇನೆ ಗೊತ್ತಾ?

Inspire

ನಮಸ್ತೆ ಸ್ನೇಹಿತರೆ ಈಗಿನ ಪ್ರಪಂಚದಲ್ಲಿ ನಮಗೆಲ್ಲ ಗೊತ್ತಿರುವ ಹಾಗೆ ಮೋ’ಸ, ದ್ರೋ’ಹ, ವಂ’ಚನೆ, ಮತ್ತೊಬ್ಬರ ಬಳಿ ಕಳ್ಳತನ ಮಾಡಿ ಬದುಕುವವರು, ಇನ್ನು ಕೆಲಸ ವಿಲ್ಲದೆ ಸೋಂಬೇರಿಗಳಾಗಿ ಸುತ್ತಾಡುವ ಜನಗಳೇ ಜಾಸ್ತಿ ಹಾಗಿದ್ದರೆ.. ಅಜ್ಜಿ ಗ 80 ವರ್ಷ ವಯಸ್ಸಾದರು ಕೂಡ ಮತ್ತೊಬ್ಬರ ಬಳಿ ಬೇಡದೆ ಇಂದಿಗೂ ಕೂಡ ಕಷ್ಟಪಟ್ಟು ದುಡಿದು ತಿನ್ನುವ ಈ ಅಜ್ಜಿಯ ಬಗ್ಗೆ ತಿಳಿಯೋಣ, ಈ ಅಜ್ಜಿಯ ಸ್ಟೊರಿ ಕೇಳಿದರೆ ಎಂಥವರಿಗೂ ಕೂಡ ಮೈ ರೋಮಾಂಚನ ಗೊಳ್ಳುತ್ತದೆ..

Advertisements
Advertisements

ಹೌದು ಈ ಅಜ್ಜಿಯ ಹೆಸರು ಶಾರದಮ್ಮ ಇವರ ವಯಸ್ಸು 80 ವರ್ಷ, ಇವರಿಗೆ ಇಷ್ಟು ವಯಸ್ಸಾದರೂ ಕೂಡ ತನ್ನ ಕುಟುಂಬವನ್ನು ನಿಭಾಯಿಸಲು ಇಂದಿಗೂ ಕೂಡ ಸೊಪ್ಪಿನ ವ್ಯಾಪಾರ ಮಾಡಿ ತನ್ನ ಕುಟುಂಬವನ್ನು ನಿಭಾಯಿಸುತ್ತಿದ್ದಾರೆ.. ಈ ಅಜ್ಜಿ ಸುಮಾರು 10 ವರ್ಷಗಳಿಂದ ಮನೆ ಮನೆಗೂ ಹೋಗಿ ಸೊಪ್ಪು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು, ಪ್ರತಿನಿತ್ಯ ಅಜ್ಜಿ ಮಾಡುವ ಈ ಸೊಪ್ಪಿನ ವ್ಯಾಪಾರದಿಂದ ತಮ್ಮ ಕುಟುಂಬ ಹಾಗೂ ತನ್ನ ಜೀವನವನ್ನು ನಡೆಸುತ್ತಿದ್ದಾರೆ.. ಇನ್ನು ನಿತ್ಯ ಸೊಪ್ಪಿನ ವ್ಯಾಪಾರ ಮಾಡುತ್ತಿದ್ದ ಈ ಅಜ್ಜಿ ಒಂದು ದಿನ ಒಬ್ಬ ಮಹಿಳೆ ಈ ಅಜ್ಜಿಯ ಬಳಿ ಸೊಪ್ಪು ಖರೀದಿ ಮಾಡಲು ಬಿಲ್ಡಿಂಗ್ ನ ಮೂರನೇ ಮಹಡಿಯಿಂದ ಕರೆಯುತ್ತಾರೆ.. ನಂತರ ಅಜ್ಜಿ ತನಗೆ ವಯಸ್ಸಾಗಿದ್ದರೂ ಕೂಡ ಆ ಬಿಲ್ಡಿಂಗ್ ನ ಮೂರನೇ ಮಹಡಿಯ ಮೇಲೆ ಹೋಗಿ ತಾನು ತಂದಿದ ಸೊಪ್ಪಿನಲ್ಲಿ ಎರಡು ಕಟ್ಟು ಸೊಪ್ಪನ್ನು 20 ರೂಪಾಯಿಗೆ ಮಾರಾಟ ಮಾಡುತ್ತಾರೆ..

ಇನ್ನು ಇಪ್ಪತ್ತು ರೂಪಾಯಿಯ ಸೊಪ್ಪು ಖರೀದಿ ಮಾಡಿದ ಮಹಿಳೆ ಅಜ್ಜಿಗೆ 100 ರೂಪಾಯಿ ನೋಟು ನೀಡುತ್ತಾರೆ.. ನಂತರ ಅಜ್ಜಿ ನನ್ನ ಬಳಿ ನೂರು ರೂಪಾಯಿಗೆ ಚಿಲ್ಲರೆ ಇಲ್ಲ ಇವತ್ತಿನ ದಿನ ನನ್ನ ಮೊದಲ ವ್ಯಾಪಾರ ನಿಮ್ಮ ಬಳಿ ಎಂದು ಹೇಳುತ್ತಾರೆ.. ಆಗ ಆ ಮಹಿಳೆ ಅಜ್ಜಿ ನೀವು ಪ್ರತಿನಿತ್ಯ ಇದೇ ರಸ್ತೆಯಲ್ಲಿ ಹೋಗುತ್ತೀರಿ ಅಲ್ಲವೇ ನಾಳೆ ನನಗೆ ಕೊಡುವಿರಂತೆ ಬಿಡಿ ಎನ್ನುತ್ತಾರೆ.. ನಂತರ ಅಜ್ಜಿ ತಲೆ ಅಲ್ಲಾಡಿಸುತ್ತಾ ಮನೆಯಿಂದ ಹೊರಡುತ್ತಾರೆ.. ನಂತರ ಅಜ್ಜಿ ಒಂದು ಗಂಟೆಯಾದ ಮೇಲೆ ವ್ಯಾಪಾರ ಮಾಡಿದ ಸೊಪ್ಪಿನಿಂದ ಬಂದ ಹಣದಿಂದ ತನ್ನ ಸೊಪ್ಪನ್ನು ಮೊದಲು ಖರೀದಿ ಮಾಡಿದವರಿಗೆ ಚಿಲ್ಲರೆ ಹಿಂತಿರುಗಿಸಲು ಮಹಿಳೆ ಇರುವ ಮೂರನೇ ಮಹಡಿಗೆ ಅಜ್ಜಿ ಬಂದು ಅವರು ಕೊಟ್ಟ ನೂರು ರೂಪಾಯಲ್ಲಿ 80 ರೂಪಾಯಿ ಚಿಲ್ಲರೆಯನ್ನು ಪುನಃ ಅವರಿಗೆ ವಾಪಸ್ಸು ನೀಡಿದ್ದಾರೆ..

ನಂತರ ಅಜ್ಜಿ ಪುನಃ ಮನೆಗೆ ಬಂದಿದ್ದನ್ನು ಕಂಡು ಮಹಿಳೆ ಅಜ್ಜಿ ನನಗೆ ಸಧ್ಯ ಚಿಲ್ಲರೆಯ ಅವಶ್ಯಕತೆ ಇರಲಿಲ್ಲ ನೀನು ಯಾವಾಗಲಾದರೂ ಕೊಡಬಹುದಿತ್ತು, ನೀವು ಯಾಕೆ ಈ ವಯಸ್ಸಿನಲ್ಲಿ ಮಹಡಿಯನ್ನು ಅತ್ತಿ ಬರಬೇಕಿತ್ತು ಎಂದು ಆ ಮಹಿಳೆ ಕೇಳುತ್ತಾರೆ.. ಅದಕ್ಕೆ 80 ವರ್ಷದ ಶಾರದ ಅಜ್ಜಿ ಕೊಟ್ಟ ಉತ್ತರವೇನೆಂದರೆ ನಾನು ಇವತ್ತು ಇಲ್ಲವೋ ನಾಳೆ ಬ’ದುಕಿರುತ್ತೇನೋ ನನಗೆ ಗೊತ್ತಿಲ್ಲ ಆದರೆ ಬಾಕಿ ಹಣವನ್ನು ಉಳಿಸಿ ಕೊಳ್ಳಬಾರದು.. ಬೇರೆಯವರ ಬಾಕಿ ಹಣವನ್ನು ನಾನು ನನ್ನ ಬಳಿ ಉಳಿಸಿಕೊಂಡರೆ ನಾನು ಸ’ತ್ತ ಬಳಿಕ ನನಗೆ ನೆಮ್ಮದಿ ಸಿಗುವುದಿಲ್ಲ, ಅದಕ್ಕಾಗಿ ಅಜ್ಜಿ ಅವರ ಚಿಲ್ಲರೆ ಹಣವನ್ನು ಕೊಟ್ಟು ನೀವು ನಿಮ್ಮ ಸಂಸಾರವನ್ನು ಸಂತೋಷವಾಗಿ ನೋಡಿಕೊಳ್ಳಿ ಎಂದು ಹೇಳಿ ಅಲ್ಲಿಂದ ಹೊರಡುತ್ತಾರೆ..

ನಂತರ ಅಜ್ಜಿಯ ಮಾತುಗಳನ್ನು ಕೇಳಿದ ಈ ಮಹಿಳೆ ಅಜ್ಜಿ ಒಂದು ನಿಮಿಷ ಅಲ್ಲೇ ನಿಲ್ಲಿ ಎಂದು ಹೇಳುತ್ತಾರೆ.. ಆಗ ವಯಸ್ಸಿನಲ್ಲಿ ಹಿರಿಯರಾದ ಅಜ್ಜಿ ಕಾಲಿಗೆ ಬಿದ್ದು ನಮಸ್ಕರಿಸಿ, ಅಮ್ಮ ನೀವು ತುಂಬಾ ಗ್ರೇಟ್ ಯಾಕೆಂದರೆ ಬೇರೆಯವರು ಸಂಪಾದಿಸಿದ ಹಣವನ್ನು ಕದ್ದು ಸಂತೋಷವಾಗಿ ಇರುವ ಈ ಕಾಲದಲ್ಲಿ, ನಿಮ್ಮಂತವರು ಇಂದಿಗೂ ಇದ್ದೀರಲ್ಲ ಎಂದು ಹೇಳಿ ಅರ್ಜಿಯನ್ನು ಹೊಗಳುತ್ತಾರೆ.. ಸ್ನೇಹಿತರೆ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ..