Advertisements

ಲಾಕ್ ಡೌನ್ ಸಮಯದಲ್ಲಿ ಶಿವಮೊಗ್ಗದ ರೈತ ಕಲ್ಲಂಗಡಿ ಹಣ್ಣಿಗೆ ಬಳಸಿದ ಐಡಿಯಾ ಈಗ ಇಡೀ ದೇಶವೇ ಸಕ್ಕತ್ ವೈರಸ್ ಆಗಿದೆ.! ಐಡಿಯಾ ಯಾವುದು ನೀವೇ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ದೇಶದಲ್ಲಿ ಹೆಚ್ಚಾಗುತ್ತಿರುವ ಕೋ’ರೋನ ವೈ’ರಸ್ ನಿಂದಾಗಿ ನಮ್ಮ ರೈತ ಬಾಂಧವರು ತುಂಬಾನೇ ಕಷ್ಟದ ಪರಿಸ್ಥಿತಿಯನ್ನ ಎದುರಿಸುತ್ತಿದ್ದಾರೆ. ಇನ್ನೂ ಹಗಲು ರಾತ್ರಿ ಎನ್ನದೇ ಬೆವರು ಸುರಿಸಿ ಬೆಳೆದ ಹಣ್ಣು, ತರಕಾರಿ, ಹೂವುಗಳನ್ನ ಕಣ್ಣೀರು ಹಾಕುತ್ತಾ ಬೆಳೆದ ಬೆಳೆಗೆ ಒಳ್ಳೆಯ ಬೆಲೆ ಸಿಗದೆ ಅದನ್ನೆಲ್ಲ ಚರಂಡಿಗೆ ರಸ್ತೆಯ ಪಕ್ಕದಲ್ಲಿ ಬಿಸಾಡುವಂತಹ ಪರಿಸ್ಥಿತಿ ಇಂದು ಎದುರಾಗಿದೆ.. ಆದರೆ ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ತನ್ನ ವಿಭಿನ್ನ ಆಲೋಚನೆಯ ಮೂಲಕ ಶಿವಮೊಗ್ಗದ ಈ ರೈತ ತಾನು ಬೆಳೆದ ಬೆಳೆಗೆ ಹೊಸ ಐಡಿಯಾ ಮಾಡಿ ಅದರಲ್ಲಿ ಈಗ ಯಶಸ್ಸು ಕೂಡ ಸಾಧಿಸಿ ಇಡೀ ದೇಶಕ್ಕೆ ಮಾದರಿಯಾಗಿ ನಿಂತಿದ್ದಾರೆ.. ಆದರೆ ಈ ರೈತ ತಾನು ಬೆಳೆದ ಬೆಳೆಗೆ ಮಾಡಿದ ಐಡಿಯಾ ಏನೆಂದು ಇಲ್ಲಿ ನೋಡೋಣ ಬನ್ನಿ.. ಶಿವಮೊಗ್ಗ‌ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಿಟ್ಟೂರು ಗ್ರಾಮದ ರೈತ ಜಯರಾಮು ಅವರು ಮುಂಬೈನಲ್ಲಿ ಸುಮಾರು 30 ವರ್ಷಗಳಿಂದ ಒಂದು ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು..

Advertisements
Advertisements

ಆದರೆ ಈ ಕೋ’ರೋನ ಸೋಂ’ಕಿನ ವೈ’ರಸ್ ಹಾಗು ಲಾಕ್ ಡೌನ್ ನಿಂದಾಗಿ ಹೊಸನಗರದ ತಮ್ಮ ಊರಿಗೆ ಬಂದು ಅಲ್ಲಿಂದ ಸುಮಾರು 8 ಎಕರೆ ಭೂಮಿಯಲ್ಲಿ ವ್ಯವಸಾಯ ಮಾಡುವುದಕ್ಕೆ ತನ್ನ ಜಮೀನಿಗೆ ಕಲ್ಲಂಗಡಿ ಬೆಳೆಯನ್ನು ಹಾಕಿದರು.. ಅದರೆ ಜಮೀನಿನಲ್ಲಿ ಬೆಳೆ‌ ತುಂಬಾನೇ ಸೊಗಸಾಗಿ ಬಂತು ಆದರೆ ಮತ್ತೆ ಈ‌ ಕೋ’ರೋನ ವೈ’ರಸ್ ಹೆಚ್ಚಾಗಿ ಕಲ್ಲಂಗಡಿ ಹಣ್ಣಿಗೆ ಬೆಲೆ ಇಲ್ಲದಂತೆ ಆಗಿ ಕಲ್ಲಂಗಡಿ ಹಣ್ಣನ್ನು ಒಂದು ರೂಪಾಯಿಗೆ ಒಂದು ಕೆಜಿ ಕೇಳಿದ್ರು ಇದರಿಂದ ಬೇಸತ್ತ ಜಯರಾಮು ಅವರು ಒಂದು ವಿಭಿನ್ನ ರೀತಿಯಲ್ಲಿ ಆಲೋಚನೆ ಮಾಡಿದರು ಆಗ ಜಯರಾಂ ಅವರು ಅದರ ಪ್ರಕಾರ ಕಲ್ಲಂಗಡಿಯಿಂದ ಬೆಲ್ಲ ತಯಾರು ಮಾಡಲು ಮುಂದಾದರು.. ಆದರೆ ಮೊದಲು ಸ್ವಲ್ಪ ಬೆಳೆಯಿಂದ ಬೆಲ್ಲವನ್ನು ತಯಾರಿಸಿ ನೋಡಿದ ಜಯರಾಮು ಅವರಿಗೆ ಆಶ್ಚರ್ಯ ಆಯಿತು.. ಕಾರಣ ಏನೆಂದರೆ ಕಲ್ಲಂಗಡಿ ಹಣ್ಣಿನಿಂದ ಮಾಡಿದ ಬೆಲ್ಲಕ್ಕೆ ಒಳ್ಳೆಯ ರುಚಿ ಬಂತು

ಆಗ ತಮ್ಮ‌ ಜಮೀನಿನಲ್ಲಿ ಬೆಳೆದ ಪೂರ್ತಿ ಕಲ್ಲಂಗಡಿ ಹಣ್ಣಿನಿಂದ ಬೆಲ್ಲವನ್ನು ತಯಾರು ಮಾಡಿದ ಜಯರಾಮು ಅವರು ಅದರಿಂದ ಯಶಸ್ಸು ಸಾಧಿಸಿದ್ದರು. ಮೊದಲು ಕಲ್ಲಂಗಡಿಯಿಂದ ಜ್ಯೂಸ್ ತೆಗೆದು ಎರಡು ಬಾರಿ ಫಿಲ್ಟರ್ ಮಾಡಿ ಅನಂತರ ಆ ಜ್ಯೂಸ್ ಅನ್ನ‌ ನಾಲ್ಕು ಗಂಟೆಗಳ ಕಾಲ ಮಂದ ಬರುವವರೆಗೂ ಚನ್ನಾಗಿ ಕುದಿಸಿದ ಜಯರಾಮು ಅವರು ಒಂದು ಟನ್ ಕಲ್ಲಂಗಡಿಯಿಂದ ಸುಮಾರು 75 ಕೆಜಿ ಬೆಲ್ಲವನ್ನು ತಯಾರಿಸಬಹುದು ಎಂದು ತೋರಿಸಿ ಕೊಟ್ಟಿದ್ದಾರೆ.. ಈಗ ಸುಮಾರು 200‌ ಕೆಜಿ ಬೆಲ್ಲವನ್ನ‌ ಕಲ್ಲಂಗಡಿ ಹಣ್ಣಿನಿಂದ ತಯಾರು ಮಾಡಿ ದಾಸ್ತಾನು ಮಾಡಿದ್ದಾರೆ ಜಯರಾಮು ಅವರು. ಇನ್ನೂ ಕಲ್ಲಂಗಡಿಗೆ ಬೆಲೆ ಇಲ್ಲ ಎಂದು ಚರಂಡಿಗೆ ಬಿಸಾಡುವ ಬದಲು ಒಂದು ಆಲೋಚನೆ ಮಾಡಿ ಅದರಲ್ಲಿ ಯಶಸ್ಸು ಸಾಧಿಸಿದ ಶಿವಮೊಗ್ಗ ಜಿಲ್ಲೆಯ ನಿವಾಸಿಯಾಗಿರುವ ಜಯರಾಮು ಅವರ ಐಡಿಯಾ ಹಾಗು ಅವರ ಸೃಜನಶೀಲತೆಯನ್ನು ನಾವು ಮೆಚ್ಚಲೇಬೇಕು.. ಸ್ನೇಹಿತರೆ ಬೆಳೆದ ಬೆಳೆಯನ್ನು ಬಿಸಾಡುವ ಬದಲು ಈ ರೀತಿ ಮಾಡಿದ್ದರೆ ಒಳ್ಳೆಯ ಲಾಭ ಸಿಗುತ್ತದೆ ಎಂದು ಜನತೆಗೆ ತೋರಿಸಿಕೊಟ್ಟ ಜಯರಾಮು ಅವರ‌ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..