Advertisements

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕಟ್ಟಿಸಿದ ಐಶಾರಾಮಿ ಮನೆ ಹೇಗಿದೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಡಾ. ಶಿವರಾಜ್‍ಕುಮಾರ್ ಕನ್ನಡ ಚಿತ್ರರಂಗದ ಪ್ರಸಿದ್ಧ ಖ್ಯಾತ ನಟರಾಗಿದ್ದ ಡಾ. ರಾಜ್‍ಕುಮಾರ್ ಹಿರಿಯಪುತ್ರ ಶಿವಣ್ಣ ಎಂದೇ ಹೆಸರಾದ ಶಿವರಾಜ್‍ಕುಮಾರ್ ಅವರು ನಟಿಸಿದ ಮೊದಲ ಮೂರೂ ಚಿತ್ರಗಳು ೧೦೦ ದಿನ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಬಿರುದು ಪಡೆದ ಹಿರಿಮೆ ಇವರದ್ದು. ಶಿವರಾಜ್‍ಕುಮಾರ್ ಅವರು 1962ರ ಜುಲೈನಲ್ಲಿ ಮದ್ರಾಸ್ ನಗರದಲ್ಲಿ ಡಾ. ರಾಜ್‍ಕುಮಾರ್ ಮತ್ತು ಪಾರ್ವತಮ್ಮ ದಂಪತಿಗಳಿಗೆ ಜನಿಸಿದರು. ಬಾಲ್ಯದಿಂದಲೇ ಶಿಸ್ತು ಮತ್ತು ಸಂಯಮಗಳನ್ನು ರೂಢಿಸಿಕೊಂಡ ಶಿವರಾಜ್‍ಕುಮಾರ್, ಕ್ರೀಡಾಚಟುವಟಿಕೆಗಳಲ್ಲಿ ಹೆಸರು ಮಾಡಿದರು. ಇನ್ನೂ ಕರುನಾಡ ಚಕ್ರವರ್ತಿ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಈಗಲೂ ಕೂಡ ಯುವಕನ ಹಾಗೆ ಈಗಲೂ ಕಾಣುತ್ತಾರೆ ಇವರ‌ ವಯಸ್ಸು 59 ಆದರೂ ಮುಖದ ಛಾಯೆ ಮುಖದ ಹೊಳಪು ಸ್ವಲ್ಪ ಕೂಡ ಕಡಿಮೆ ಆಗಲಿಲ್ಲ..

Advertisements
Advertisements

ಈಗಲೂ ಕೂಡ ಸಿನಿಮಾ ಚಿತ್ರೀಕರಣ ಎಂದು‌ ಸದಾಕಾಲ ಬ್ಯುಸಿಯಾಗಿರುವ ಶಿವಣ್ಣ ಅವರು ತಮ್ಯ‌ ಸಾಂಸಾರಿಕ ಜೀವನದಲ್ಲಿ ಕೂಡ ಅಷ್ಟೇ ಯಶಸ್ಸನ್ನು ಸಾಧಿಸಿದ್ದಾರೆ.. ಶಿವಣ್ಣ ಅವರ‌ ಜೋಡಿ ಎಷ್ಟು ಮಂದಿ ಸೆಲೆಬ್ರಿಟಿಗಳಿಗೆ ಸ್ಪೂರ್ತಿಯಾಗಿದೆ.. ಶಿವಣ್ಣ ಅವರು ತಮ್ಮ ಅಭಿರುಚಿಗೆ ತಕ್ಕಂತೆ ಕಟ್ಟಿಸಿದ ಮನೆ ಎಲ್ಲಿದೆ ಮತ್ತು ಹೇಗಿದೆ ಎಂದು ನೋಡೋಣ ಬನ್ನಿ.. ನೀವು ಈ ಪೋಟೋದಲ್ಲಿ ನೋಡಬಹುದು ಬೆಂಗಳೂರಿನ ಯಲಹಂಕ ಹೆಬ್ಬಾಳ ರಸ್ತೆಯಲ್ಲಿ ಇರುವ ಈ ಮನೆ ಶಿವಣ್ಣ ಅವರ ಸುಂದರವಾದ ಮನೆ ಇದು ಮನೆಯ ಮುಂಭಾಗದ ನೋಟ ವಿಶಾಲವಾದ ಮನೆಯ ಹಾಲ್ ಇದು ಆಧುನಿಕ ಶೈಲಿಯಲ್ಲಿ ಕಟ್ಟಿಸಿದ ಅಡುಗೆ ಮನೆ ಇನ್ನೂ ಶಿವಣ್ಣ ತಮ್ಮ‌ ಮನೆಯನ್ನ ತುಂಬಾ ವಿಶಾಲವ ನಿರ್ಮಾಣ ಮಾಡಿದ್ದು

ಮನೆಯ ಒಳಗೆ ಮತ್ತು ಹೊರಗೆ ಎರಡು ಕಡೆ ವಿಶಾಲವಾದ ಸಿಟಿಂಗ್ ಕ್ಯಾಬಿನೆಟ್ ಅನ್ನ ಮಾಡಿಕೊಂಡಿದ್ದಾರೆ..‌ ಸಿನಿಮಾದ ಯಾವುದೇ ವಿಚಾರ ಇದ್ದರೂ ಸಹ ಇಲ್ಲಿಯೇ ಕುಳಿತು ಸಿನಿಮಾದ ಮಾತುಕತೆಯನ್ನ‌ ಮಾಡುತ್ತಾರೆ ಇನ್ನೂ ಸೌತ್ ಇಂಡಿಯಾದಲ್ಲಿ ಸಿಕ್ಕಪಟ್ಟೆ ಫೇಮಸ್ ಆಗಿರುವಂತಹ ಶಿವಣ್ಣ ಅವರಿಗೆ ಈಗಲೂ ಕೂಡ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಇನ್ನೂ ಶಿವಣ್ಣ ಅವರ ನೋಟ ಖದರ್ ಸಿನಿಮಾದಲ್ಲಿ ಶಿವಣ್ಣ ಹೇಳುವ ಡೈಲಾಗ್ ಹಾಗು ಡ್ಯಾನ್ಸ್ ಗೆ ಸಾಕಷ್ಟು ಜನ ಫಿದಾ ಆಗಿದ್ದಾರೆ ಶಿವಣ್ಣ ಅವರ ಸಿನಿಮಾಗಳು ಎಂದರೆ ಈಗಲೂ ಕುಟುಂಬದ‌ ಜೊತೆ ಕುಳಿತು ನೋಡಿದ್ರೆ ಪಕ್ಕ ಪೈಸಾ ವಸೂಲಿ ಮಾಡುವಂತಹ ಸಿನಿಮಾ ಅಂತಾನೇ ಹೇಳಬಹುದು.. ಇನ್ನೂ ನಟ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..