ಪವರ್ ಸ್ಟಾರ್ ಪವನ್ ಕಲ್ಯಾಣ್ ರವರು ಒಂದು ದೊಡ್ಡ ಗ್ಯಾಪ್ ನ ನಂತರ ಸಿನಿಮಾ ರಂಗಕ್ಕೆ ಮತ್ತೆ ಬಂದಿದ್ದಾರೆ.. ಪವನ್ ಕಲ್ಯಾಣ್ ಅಭಿನಯಿಸುವ ಈ ಸಿನಿಮಾದಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.. ಈ ಸಿನಿಮಾದಲ್ಲಿ ಅನೇಕ ನಾಯಕ ನಟಿಯರು ಅಭಿನಯಿಸಲಿದ್ದಾರೆ.. ಇನ್ನು ಪವನ್ ಕಲ್ಯಾಣ್ ನಟಿಸುತ್ತಿರುವ ವಕೀಲ್ ಸಾಬ್ ಸಿನಿಮಾದಲ್ಲಿ ಇನ್ನೊಂದು ಸುದ್ದಿ ಕೂಡ ಹೊರಬಂದಿದೆ.. ಈ ಸಿನಿಮಾದಲ್ಲಿ ನಟಿ ಕಮಲ ಹಾಸನ್ ಪುತ್ರಿ ಶ್ರುತಿ ಹಾಸನ್ ರವರು ನಟಿಸಲಿದ್ದಾರೆ..

ದಕ್ಷಿಣ ಭಾರತ ಮಾತ್ರವಲ್ಲದೆ ಬಾಲಿವುಡ್ ನಲ್ಲಿ ಕೂಡ ಹೆಸರು ಮಾಡಿರುವ ಶ್ರುತಿ ಹಾಸನ್ ಒಂದು ಸಿನಿಮಾಗೆ ಬಾರಿ ಪ್ರಮಾಣದ ಸಂಭಾವನೆಯನ್ನು ಪಡೆಯುತ್ತಾರೆ ಎಂದು ಈ ಹಿಂದೆ ಚರ್ಚೆಯಾಗಿತ್ತು.. ಇನ್ನು ಕೋ’ರೋನ ಲಾಕ್ಡೌನ್ ಸಮಯದಲ್ಲಿ ಖರ್ಚುಗಳು ಜಾಸ್ತಿಯಾಗಿ ಹಣದ ಕೊರತೆ ಹೆಚ್ಚಾಯ್ತು.. ಶೃತಿ ಹಾಸನ್ ಮಾಡಿದ ಸಾಲ ತಿರಿಸುತ್ತಿದ್ದಾರೆ ಎಂದು ಗಾಸಿಪ್ ಹರಿದಾಡಿತ್ತು.. ಇನ್ನು ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯಿಸಿದ ವಕೀಲ್ ಸಾಬ್ ಚಿತ್ರವನ್ನು ವೇಣು ಶ್ರೀರಾಮ್ ರವರು ನಿರ್ದೇಶನ ಮಾಡುತ್ತಿದ್ದು ಈ ಚಿತ್ರದಲ್ಲಿ ಶೃತಿಹಾಸನ್ ಒಂದು ಚಿಕ್ಕ ಪಾತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದರು..

ಇನ್ನೂ ಶೃತಿಹಾಸನ್ ಕೇಳಿರುವ ಸಂಭಾವನೆ ಕೇಳಿ ನಿರ್ದೇಶಕರಿಗೆ ತಲೆ ತಿರುಗುವಂತಾಗಿದೆ.. ಶೃತಿ ಹಾಸನ್ ರವರು ಒಂದು ಗಂಟೆಯ ಶೂಟಿಂಗ್ ಗೆ ಒಂದು ಲಕ್ಷದವರೆಗೆ ಸಂಭಾವನೆ ನೀಡಬೇಕೆಂದು ಡಿಮೆಂಡ್ ಮಾಡಿದ್ದಾರಂತೆ.. ಈ ಸಿನಿಮಾ ಏಳು ದಿನಗಳ ಕಾಲ ನಡೆಯಲ್ಲಿದ್ದು ಶೃತಿ ಹಾಸನ್ ರವರು 70ಲಕ್ಷದವರೆಗೆ ಸಂಭಾವನೆ ಕೇಳಿದ್ದಾರೆ ಎಂದು ವರದಿಯಾಗಿದೆ.. ಇನ್ನೂ ಈ ಸಿನಿಮಾದಲ್ಲಿ ಶೃತಿ ಹಾಸನ್ ಕೇವಲ 10 ಗಂಟೆಗಳ ಕಾಲ ಸಮಯ ಕಳೆಯಬೇಕಿದೆ ಆದರೆ ಶ್ರುತಿ ಹಾಸನ್ ಕೇಳಿದ ಸಂಭಾವನೆ ಕೇಳಿ ನಿರ್ದೇಶಕರು ಶ್ರುತಿ ಹಾಸನ್ ರವರನ್ನು ಈ ಪಾತ್ರಕ್ಕೆ ಹಾಕಿಕೊಳ್ಳಲು ಹಿಂದೇಟು ಹಾಕಿದ್ದಾರೆ.. ಇನ್ನು ಈ ಚಿತ್ರಕ್ಕೆ ನಟಿಯಾಗಿ ಯಾರು ಬರಲಿದ್ದಾರೆ ಎಂಬುದು ಸಸ್ಪೆನ್ಸ್ ಆಗೆ ಉಳಿದಿದೆ..