Advertisements

ಸಿದ್ದರಾಮಯ್ಯ ಅವರು ತಮ್ಮ ಹಳ್ಳಿಯಲ್ಲಿ ಕಟ್ಟಿಸಿದ ಮನೆ ಹೇಗಿದೆ ಗೊತ್ತಾ? ಮೊದಲ ಬಾರಿಗೆ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಸಿದ್ದರಾಮಯ್ಯ ಅವರು ಕರ್ನಾಟಕದಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷದ ಸಂಸದೀಯ ಪಕ್ಷದ ನಾಯಕರಾಗಿ ಮತ್ತು ಕರ್ನಾಟಕದ ೨೨ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಅನುಭವಿ ರಾಜಕಾರಣಿಯಾಗಿ‌ ಕಾರ್ಯ ನಿರ್ವಹಿಸಿದ್ದಾರೆ.. ಇನ್ನೂ ಜಾತಿ ಧರ್ಮ ಮತ ಭೇದವನ್ನು ಬಿಟ್ಟು ಮಾತಾನಾಡುವ ಅಂದರೆ ಯಾವುದೇ ರೀತಿಯ ಆ’ಕ್ರಮ ಆಸ್ತಿಗಳ ಯೋಚನೆ ಇಲ್ಲದೆ, ಇನ್ ಕಮ್ ಟ್ಯಾಕ್ಸ್ ಬಗ್ಗೆ ಯೋಚನೆ ಇಲ್ಲದೆ ಕರ್ನಾಟಕ ರಾಜ್ಯದಲ್ಲಿ ನೆಮ್ಮದಿಯಿಂದ ಜೀವನ ಮಾಡುವ ಕೆಲವೇ ಕೆಲವು ರಾಜಕೀಯ ನಾಯಕರಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು.. ಇನ್ನೂ ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಮನಸಾಕ್ಷಿ ಹಾಗು ಪ್ರಾಮಾಣಿಕತೆಯಿಂದ ಕೆಲಸ ಮಾಡುವವರಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು..

[widget id=”custom_html-2″]

Advertisements
Advertisements

ಇವರ ಮಾತು ಮಾತ್ರ ಒರಟಾದರೂ ಇವರ ಮನಸ್ಸು ಮಾತ್ರ ಹೂವಿನಂತೆ ಇರುತ್ತದೆ, ಇನ್ನೂ ಸಿದ್ದರಾಮಯ್ಯ ಅವರು ತಮ್ಮ ಹಳ್ಳಿಯಲ್ಲಿ ಕಟ್ಟಿರುವ ಮನೆ ಹೇಗಿದೆ ಗೊತ್ತಾ? ನೋಡೋಣ ಬನ್ನಿ.. ಮೈಸೂರು ಜಿಲ್ಲೆ ವರುಣ ಹೋಬಳಿಯ ಸಿದ್ದರಾಮನಹುಂಡಿ ಎನ್ನುವ ಒಂದು ಸಣ್ಣ ಹಳ್ಳಿಯಲ್ಲಿ ರೈತನ ಮಗನಾಗಿ ಜನಿಸಿದ ಸಿದ್ದರಾಮಯ್ಯ ತಮ್ಮ‌ ಹತ್ತು ವರ್ಷ ವಯಸ್ಸಿನವರೆಗೂ ವಿದ್ಯಾಭ್ಯಾಸಕ್ಕಾಗಿ ಶಾಲೆಗೆ ಹೋಗಲಿಲ್ಲ.. ಅನಂತರ ಶಾಲೆಗೆ ಹೊರಟ ಇವರು‌ ಮೈಸೂರಿನ ವಿಶ್ವ ವಿದ್ಯಾನಿಲಯದಲ್ಲಿ LLB ಮಾಡಿ ಜೂನಿಯರ್ ವಕೀಲರಾಗಿ ಕೆಲಸ ಆರಂಭಿಸಿದರು.. ನಂತರ ಕೆಲವರ ಪ್ರಭಾವದಿಂದ ರಾಜಕೀಯ ಕ್ಷೇತ್ರದ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡ, ನಂತರ ರಾಜಕೀಯದಲ್ಲಿ ಏಳು ಬೀಳು ಕಂಡು ಕೊನೆಗೂ ತನ್ನ ಛಲದಿಂದ,

[widget id=”custom_html-2″]

ಯಶಸ್ವಿಯಾಗಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು ಸಿದ್ದರಾಮಯ್ಯ ಅವರು.. ಇನ್ನೂ ಇವರಲ್ಲಿ ಜನರು ಮೆಚ್ಚುವಂತಹ ಗುಣ ಏನೆಂದರೆ ‘ ನಾನು ನಿಮ್ಮ ರಕ್ತ ಸಂಬಂಧಿ ದೂರ‌‌ ಸಂಬಂಧಿ ಎಂದು ಆ‌ ಕೆಲಸ ಈ ಕೆಲಸ ಮಾಡಿಕೊಡಿ ಎಂದು ಅವರ ಬಳಿ ಕೇಳಿದ್ರೆ ಸಿದ್ದರಾಮಯ್ಯ ಖಂಡಿತ ಮಾಡೋದಿಲ್ಲ, ಯಾಕೆಂದರೆ‌ ಸಂಬಂಧಗಳ ಮೇಲೆ ಯಾವತ್ತೂ ಕೂಡ ತಮ್ಮ‌ ಅಧಿಕಾರವನ್ನ ದುರುಪಯೋಗ ಪಡಿಸಿಕೊಳ್ಳುವುದಿಲ್ಲ.. ಆದರೆ ಕಷ್ಟ ಅಂತ ಅವರ ಬಳಿ ಬಂದ್ರೆ ತಮ್ಮ‌ ಕೈ ಮೀರಿ ಸಹಾಯ ಮಾಡುತ್ತಾರೆ, ಇಲ್ಲಿ‌ ನೋಡ್ತಿರೋ ಮನೆ ಸಿದ್ದರಾಮಯ್ಯ ಹುಟ್ಟಿ ಬೆಳೆದ ಸ್ವಂತ ಮನೆ‌ ಈ ಮನೆಯನ್ನು ಸಿದ್ದರಾಮಯ್ಯ ತಮ್ಮ‌ ಊರಿನಲ್ಲಿ ಪ್ರೀತಿಯಿಂದ ಕಟ್ಟಿಸಿದಂತ ಮನೆ, ಸಮಯ ಸಿಕ್ಕಾಗೆಲ್ಲಾ,

ಸಿದ್ದರಾಮನಹುಂಡಿಗೆ ಕುಟುಂಬ ಸಮೇತವಾಗಿ ಹೋಗುವ ಇವರು ಆ ಮನೆಯಲ್ಲಿ ಒಂದೆರಡು ದಿನ ಕಾಲ ಇದ್ದು ಬರುತ್ತಾರೆ.. ಸಿದ್ದರಾಮಯ್ಯ ಕುಟುಂಬದ ವಿಶೇಷ ಏನೆಂದರೆ ಯಾರು ಕ್ಯಾಮರಾ ಮುಂದೆ ಹೆಚ್ಚಾಗಿ ಬರೋದಿಲ್ಲ, ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಒಂದು ಬಾರಿ ಕೂಡ ಮೀಡಿಯಾದ ಮುಂದೆ ಬಂದಿರಲಿಲ್ಲ.. ಗಂಡ ಅಧಿಕಾರದಲ್ಲಿ ಇದ್ದಾಗ ತಮ್ಮದೇ ಮತ್ತೊಂದು ಅಧಿಕಾರ ನಡೆಸುವ ಎಷ್ಟೋ ರಾಜಕೀಯ ಹೆಂಡತಿಯರ ಮಧ್ಯೆ ಸಾಮಾನ್ಯ ಮಹಿಳೆಯಂತೆ ಜೀವನ ನಡೆಸುವ ಪಾರ್ವತಿ ಅವರು ಮಾದರಿಯಾಗಿದ್ದಾರೆ.. ಸ್ನೇಹಿತರೆ ಸಿದ್ದರಾಮಯ್ಯ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನ ತಿಳಿಸಿ..