Advertisements

ಹಿರಿಯ ನಟ ಕಲ್ಯಾಣ್ ಕುಮಾರ್ ಅವರ ಮಗ ಕೂಡ ಫೇಮಸ್ ನಟ, ಆದರೆ ಈ ವಿಷಯ ಯಾರಿಗೂ ತಿಳಿದಿಲ್ಲ! ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಹಿರಿಯ ನಟ ಹಾಗು ಹೆಸರಾಂತ ಮೇರು ನಟ ಅಂದ್ರೆ ಅದು ಕಲ್ಯಾಣ್ ಕುಮಾರ್ ಅವರು.. ಇವರು 1954‌ರಲ್ಲಿ ಶೇಖರ್ ಎಂಬ ಕನ್ನಡ ಸಿನಿಮಾ ಮೂಲಕ ನಟ‌ ಕಲ್ಯಾಣ್ ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.. ನಂತರ ಸದಾರಮೆ, ರಾಯರ ಸೊಸೆ, ಬದುಕುವ ದಾರಿ, ಮಾವನ ಮಗಳು, ಪ್ರೇಮಕ್ಕೂ ಪರ್ಮಿಟ್ಟೇ , ಅರಿಶಿನ ಕುಂಕುಮ ಈಗೆ ಹಲವಾರು ಸಿನಿಮಾಗಳಲ್ಲಿ ಕಲ್ಯಾಣ್ ಕುಮಾರ್ ಅವರು ನಾಯಕ ನಟರಾಗಿ ನಟನೆ ಮಾಡಿದ್ದರು..‌1963 ರಲ್ಲಿ ಕನ್ನಡದ ಮೊದಲ ಕಾಲರ್ ಸಿನಿಮಾ‌ ಎನ್ನುವ ಹೆಗ್ಗಳಿಕೆ ಪಡೆದಿದ್ದ ಇವರು ಅಮರಶಿಲ್ಪಿ ಜಕಣಾಚಾರಿ ಎಂಬ ಚಿತ್ರದಲ್ಲಿ ನಾಯಕ ನಟರಾಗಿ ನಟನೆ ಮಾಡಿದ್ದರು.

Advertisements
Advertisements

ಇನ್ನೂ ಕನ್ನಡ ಚಿತ್ರರಂಗವನ್ನಾಳಿದ ಕುಮಾರತ್ರಯರಲ್ಲಿ ಕಲ್ಯಾಣ್ ಕುಮಾರ್ ಮೊದಲನೆಯವರು ಇನ್ನಿಬ್ಬರು ಮೇರು ನಟಿ ಡಾ ರಾಜ್ ಕುಮಾರ್ ಮತ್ತು ಉದಯ್ ಕುಮಾರ್.. ಕಲ್ಯಾಣ್ ಕುಮಾರ್ ಅವರು ಕನ್ನಡ ಹಾಗು ತಮಿಳಿನಲ್ಲಿ ಸುಮಾರು 200ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಇನ್ನೂ ಬಿ.ಸರೋಜಾದೇವಿ, ಸಾಹುಕಾರ್ ಜಾನಕಿ, ಕಲ್ಪನಾ, ಜಯಂತಿ, ಭಾರತಿ, ವಂದನಾ, ಚಂದ್ರಕಲಾ, ಆರತಿ, ಮೈನಾವತಿ, ಬಿ.ವಿ.ರಾಧ, ಜಯಲಲಿತಾ ಸೇರಿದಂತೆ ಇನ್ನೂ ಮುಂದಾದ ಮೇರು ನಟಿಯರ ಜೊತೆ ಕಲ್ಯಾಣ್ ಕುಮಾರ್ ಅವರು ನಾಯಕ ನಟರಾಗಿ ನಟನೆ ಮಾಡಿದ್ದಾರೆ..

ಇನ್ನೂ ನಟಿ ರೇವತಿ ಅವರನ್ನ ಮದುವೆಯಾಗಿದ್ದ ಕಲ್ಯಾಣ್ ಕುಮಾರ್ ಅವರಿಗೆ ಭಾರತ್ ಕಲ್ಯಾಣ್ ಹಾಗೂ ದೀಪಕ್ ಕಲ್ಯಾಣ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.. ಇನ್ನೂ ಭರತ್ ಕಲ್ಯಾಣ್ ಅವರು 2010‌ರಲ್ಲಿ ಕನ್ನಡ ಚಿತ್ರರಂಗದಲ್ಲಿ ಯಕ್ಷ ಎಂಬ ಚಿತ್ರದಲ್ಲಿ ನಾಯಕ ನಟರಾಗಿ ನಟನೆ ಮಾಡಿದ್ದರು. ಇನ್ನೂ ಭಾರತ್ ಅವರು‌ ತೆಲುಗು ತಮಿಳಿನ ಹಲವು ಸಿನಿಮಾ‌ ಹಾಗು ಸೀರಿಯಲ್ ಗಳಲ್ಲಿ ನಟನೆ ಮಾಡಿದ್ದಾರೆ.. ಕಲ್ಯಾಣ್ ಕುಮಾರ್ ಅವರು 1999 ರಲ್ಲಿ ಕಾರಣಾಂತರಗಳಿಂದ ನಿಧನ ಹೊಂದಿದ್ದರು.. ಇನ್ನೂ ಇವರ ಪತ್ನಿ ರೇವತಿ ಅವರು ‌2017 ಚೆನೈ ನಲ್ಲಿ ನಿಧನರಾದರು.. ಸಿನಿಮಾದಲ್ಲಿ ನಟಿ ಕಲ್ಯಾಣ್ ಕುಮಾರ್ ಅವರ ನಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನು?