Advertisements

ಫೇಮಸ್ ಗಾಯಕಿ ಶ್ರೇಯಾ ಘೋಷಾಲ್ ಅವರ ಮಗ ಈಗ ಹೇಗಿದ್ದಾನೆ ನೋಡಿ! ಇವರ ಮಗನ ಹೆಸರೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಶ್ರೇಯಾ ಘೋಷಾಲ್ ಇವರು ಭಾರತೀಯ ಫೇಮಸ್ ಕಾಯಕಿ ಕೂಡ ಹೌದು.. ಮಾರ್ಚ್ 12/1984 ರಲ್ಲಿ ಬಂಗಾಳದ ‘ಬೆಹ್ರಾಮ್ ಪುರ’ದಲ್ಲಿ ಜನಿಸಿದರು.. ಬಿಸ್ವಜಿತ್ ಘೋಷಾಲ್’, ಪರಮಾಣು ವಿಜ್ಞಾನಿ, ಬಿ .ಎ.ಆರ್.ಸಿಯ ನ್ಯೂಕ್ಲಿಯರ್ ಪವರ್ ಪ್ಲಾಂಟ್ ನಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ತಾಯಿ, ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಗಳಿಸಿದ್ದಾರೆ.. ಇನ್ನೂ ಶ್ರೇಯಾ ಘೋಷಾಲ್ ಅವರು ಹಿನ್ನೆಲೆಗಾಯಕಿಯಾಗಿ ಹಿಂದಿ, ಕನ್ನಡ ಸೇರಿದಂತೆ ಬಹುಪಾಲು ಎಲ್ಲಾ ಭಾರತೀಯ ಭಾಷೆಗಳಲ್ಲಿ ಅದ್ಭುತವಾದ ಹಾಡುಗಳನ್ನ ಹಾಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಮೊದಲ ಚಿತ್ರದ ಹಾಡಿಗೇ ‛ಅತ್ತ್ಯುತ್ತಮ ಗಾಯಕಿಯಾಗಿ ರಾಷ್ಟ್ರೀಯ ಪುರಸ್ಕಾರ’ ಪಡೆದ ಶ್ರೇಯ,

Advertisements
Advertisements

ಇಲ್ಲಿಯ ತನಕ ಒಟ್ಟು ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ..ಗಾಯಕಿ ಶ್ರೇಯಾ ಘೋಷಾಲ್ ಹಿಂದೂಸ್ಥಾನಿ ಸಂಗೀತವನ್ನು ಕೋಟಾದ ‘ಮಹೇಶ್ಚಂದ್ರ ಶರ್ಮಾ’ರ ಬಳಿ ಅಭ್ಯಾಸ ಮಾಡಿದರು. ಶ್ರೇಯಾ ತನ್ನ ಹಾಡುಗಾರಿಕೆಯನ್ನು ಆರಂಭಿಸಿ ಹಾಡಿದ ಪ್ರಥಮ ಗೀತೆ ಹಿಂದಿ ಚಲನಚಿತ್ರದ ‘ದೇವದಾಸ್ ಚಿತ್ರ’ದಲ್ಲಿ ಈ ಒಂದು ಹಾಡುಗಾರಿಕೆಗೆ ‘ರಾಷ್ಟ್ರಪ್ರಶಸ್ತಿ’ಹಾಗೂ ‘ಫಿಲಂ ಫೇರ್ ಪ್ರಶಸ್ತಿ ಕೂಡ ತಮ್ಮದಾಗಿಸಿಕೊಂಡರು.. ಸದ್ಯ ಶ್ರೇಯಾ ಘೋಷಾಲ್ ಅವರು ಫೆಬ್ರವರಿ 5/2015 ರಲ್ಲಿ ತನ್ನ ಬಾಲ್ಯದ ಗೆಳೆಯ ಶಿಲಾಧಿತ್ಯ ಅವರನ್ನ ಸಾಂಪ್ರದಾಯಿಕ ಬಂಗಾಳಿ ಸಮಾರಂಭದಲ್ಲಿ ವಿವಾಹವಾದರು.. ಇನ್ನೂ ಶ್ರೇಯಾ ಘೋಷಾಲ್ ಅವರು ಮದುವೆಯಾದ ಇಷ್ಟು ದಿನಗಳ ಬಳಿಕ ತಮ್ಮ ಮಗನ ಜೊತೆ ಇರುವ ಪೋಟೋವನ್ನ ಶೇರ್ ಮಾಡ್ಕೊಂಡಿದ್ದಾರೆ..

ಹೌದು ಬಾಲಿವುಡ್ ಖ್ಯಾತ ಗಾಯಕಿ ಆಗಿರುವ ಶ್ರೇಯಾ ಘೋಷಾಲ್ 6 ತಿಂಗಳ ತುಂಬಿದ ತಮ್ಮ ಮುದ್ದಿನ ಮಗ ದೇವ್ಯಾನ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮ‌ೂಲಕ ತಮ್ಮ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.. ತಮ್ಮ ಮಧುರವಾದ ಕಂಠದಿಂದಲೇ ಎಲ್ಲರ ಮನ ಗೆದ್ದಿರುವ ಶ್ರೇಯಾ ಘೋಷಲ್ ಪುತ್ರ ದೇವ್‍ಯಾನ್‍ಗೆ 5 ತಿಂಗಳು ತುಂಬಿದ್ದು 6ನೇ ತಿಂಗಳಿಗೆ ಕಾಲಿಟ್ಟಿದ್ದಾನೆ. ಈ ಹಿನ್ನೆಲೆ ಶ್ರೇಯಾ ಘೋಷಾಲ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಮಗನ ಕ್ಯೂಟ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್ನೂ ಮಗನ ಜೊತೆ ಇರುವ ಪೋಟೋವನ ಶೇರ್ ಮಾಡಿಕೊಳ್ಳುವ ಜೊತೆಗೆ, ಈ ರೀತಿ ಬರೆದು ಕೊಂಡಿದ್ದಾರೆ ಎಲ್ಲರಿಗೂ ಹಾಯ್, ನಾನು ದೇವ್‍ಯಾನ್, ನನಗೀಗ 6 ತಿಂಗಳು.

ಪ್ರಸ್ತುತ ನನ್ನ ಸುತ್ತಲಿರುವ ಪ್ರಪಂಚವನ್ನು ಅನ್ವೇಷಿಸುವಲ್ಲಿ ನಾನು ಬ್ಯುಸಿಯಾಗಿದ್ದೇನೆ. ನನ್ನ ನೆಚ್ಚಿನ ಹಾಡಗಳನ್ನು ಕೇಳುತ್ತಿದ್ದೇನೆ, ಎಲ್ಲಾ ರೀತಿಯ ಚಿತ್ರಗಳಿರುವ ಪುಸ್ತಕಗಳನ್ನು ಓದುತ್ತಿದ್ದೇನೆ. ಸಿಲ್ಲಿ ಜೋಕ್‍ಗಳಿಗೆ ಜೋರಾಗಿ ನಗುತ್ತಿರುತ್ತೇನೆ ಮತ್ತು ನನ್ನ ತಾಯಿಯೊಂದಿಗೆ ಸಂಭಾಷಣೆ ನಡೆಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದಕ್ಕಾಗಿ ಧನ್ಯವಾದಗಳು ಎಂದು ಕ್ಯಾಪ್ಷನ್‍ನಲ್ಲಿ ಮಗನ ಪರವಾಗಿ ಶ್ರೇಯಾ ಘೋಷಾಲ್ ಬರೆದುಕೊಂಡಿದ್ದಾರೆ. ಸ್ನೇಹಿತರೆ ನಿಮಗೂ ಕೂಡ ಗಾಯಕಿ ಶ್ರೇಯಾ ಘೋಷಾಲ್ ಅವರ ಹಾಡಿದ ಹಾಡುಗಳಲ್ಲಿ ನಿಮಗೆ ಇಷ್ಟವಾದ ಹಾಡು ಯಾವುದೇ ತಪ್ಪದೆ ಕಾಮೆಂಟ್ ಮಾಡಿ..