Advertisements

ಮಗ‌ ಸೆಂಟ್ರಲ್ ಮಿನಿಸ್ಟರ್ ಆದರೆ ಇವರ ತಂದೆ ತಾಯಿ ಮಾಡುತ್ತಿರುವ ಕೆಲಸವೇನ್ನು ಗೊತ್ತಾ? ನಿಜಕ್ಕೂ ಗ್ರೇಟ್‌ ಅಂತಾನೇ ಹೇಳಬಹುದು..

Inspire

ನಮಸ್ತೆ ಸ್ನೇಹಿತರೆ, ಗುದ್ದಲಿ ಹಿಡಿದುಕೊಂಡು ಕೆಲಸ ಮಾಡುತ್ತಿರುವ 68 ವರ್ಷ ವಯಸ್ಸಿನ ಈ ವ್ಯಕ್ತಿ ಹೆಸರು ಲೋಕನಾಥ್ ಅಂತ‌.. ಇವರು‌ ತೊಟ್ಟಿರುವ ಉಡುಗೆ ತೊಡುಗೆ ನೋಡಿದ್ರೆ ಇವರ ಮಗ ಕೇಂದ್ರ ಸಚಿವ ಅಂತಾ ಹೇಳಿದ್ರೆ ಯಾರು ನಂಬುವುದಿಲ್ಲ.. ಆದರೆ ಇವರ ಮಗ ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತ್ರತ್ವದಲ್ಲಿ ಸರ್ಕಾರಿ ಸಚಿವ ಆಗಿದ್ದಾರೆ.. ಹಾಗೆಂದ ಮಾತ್ರಕ್ಕೆ ಇವರ ಅಪ್ಪ ಅಮ್ಮ ಮನೆಯಲ್ಲಿ ಆರಾಮವಾಗಿ ಕುಳಿತು ಐ’ಶಾರಾಮಿ ಜೀವನ ಮಾಡುತ್ತಿಲ್ಲ.. ಹೊಲಕ್ಕೆ ಹೋಗಿ ಗಿಡ ಗಟ್ಟಿಗಳನ್ನ ಕಿತ್ತು ಸ್ವಚ್ಛ ಗೊಳಿಸಿ ಕೃಷಿ ಕೆಲಸವನ್ನ ಮಾಡುತ್ತಿದ್ದಾರೆ. ಹೌದು ಸ್ನೇಹಿತರೆ ತಮ್ಮ ಮಗ ಕೆಂದ್ರ ಸಚಿವನಾಗಿದ್ದಾನೆ ಎಂದು ಈ ವೃದ್ಧ ದಂಪತಿ ಯಾವತ್ತೂ ಸಂಭ್ರಮ ಪಟ್ಟಿರಲಿಲ್ಲ ಮಗ ಸಂಸದನಕ್ಕೆ ಸಚಿವರಾದರು ತಮ್ಮ‌ ದುಡಿಮೆಗೆ ಆತನನ್ನ ಅವಲಂಬಿಸಿಲ್ಲ..

Advertisements
Advertisements

ಕೇಂದ್ರದಲ್ಲಿ ಮೀನುಗಾರಿಕೆ ಖಾತೆಯ ರಾಜ್ಯದ ಸಚಿವರಾಗಿ ತಮಿಳುನಾಡಿನ ಬಿಜೆಪಿ ಸಂಸದ ಎಲ್.ಮುರುಗನ್ ಅವರು ನೇಮಕರಾಗಿದ್ದಾರೆ.. ಆದರೆ ಇದು ಇತ್ತೀಚಿನ ದಿನಗಳಲ್ಲಿ ತಮಿಳು ನಾಡಿನ ಏಕೈಕ ಬಿಜೆಪಿ ಸಂಸದ 44 ವರ್ಷ ವಯಸ್ಸಿನ ಎಲ್.ಮುರುಗನ್ ಅವರ ಪೋಷಕರ ಸ್ಟೋರಿಯಾಗಿದೆ.. ಹೌದು ಸಣ್ಣ ಗುಡಿಸಲು ಒಂದರಲ್ಲಿ ಜೀವನ ಮಾಡುತ್ತಿರುವ ಈ ದಂಪತಿ ತಮ್ಮ ಮಗ ಸಚಿವರಾದರು ಈಗಲೂ ಕೂಡ ಕೂ’ಲಿ ಕೆಲಸ ಮಾಡಿ ಜೀವನ ಮಾಡುತ್ತಿದ್ದಾರೆ.. ಎಲ್ಲಿ ಕೆಲಸ ಸಿಗುತ್ತದೋ ಆ ಜಾಗದಲ್ಲಿ ಹೋಗಿ ದುಡಿದು ದಿನ‌ ಕೂ’ಲಿ ಪಡೆಯುತ್ತಿದ್ದಾರೆ. ಮಗ ಕೆಂದ್ರ ಮಂತ್ರಿ ಮಂಡಲದಲ್ಲಿ ಸಚಿವರಾಗಿ ಆಯ್ಕೆ ಮಾಡಲಾಗಿದೆ ಎನ್ನುವ ಸುದ್ದಿಯನ್ನ ಅಕ್ಕ ಪಕ್ಕದ ಜನರು ಈ ದಂಪತಿಗಳಿಗೆ ತಿಳಿಸಿದ್ದರು..

ಇನ್ನೂ 2020 ಮಾರ್ಚ್ ತಿಂಗಳಲ್ಲಿ ಮುರುಗನ್ ಅವರನ್ನ‌ ತಮಿಳು ನಾಡಿನ ಬಿಜೆಪಿ‌ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು.. ಕೊಲ್ಲೂರಿಗೆ ಆಗಮಿಸಿದಾಗ ಇವರ ಸುತ್ತಲೂ ಅಪಾರ ಅಭಿಮಾನಿಗಳು ಹಾಗು ಪೋಲಿಸ್ ಭದ್ರತೆ ಹೊಂದಿದ್ದರು.. ಆಗಲು ಸಹ ತನ್ನ ಮಗನ ಬೆಳೆವಣಿಗೆಯನ್ನು ಕಂಡು ಹಾಗು ಅಪಾರ ಅಭಿಮಾನಿಗಳನ್ನ ನೋಡಿ ತಂದೆ ತಾಯಿ ಅಷ್ಟೇನೂ ಸಂತೋಷ ಪಟ್ಟಿರಲಿಲ್ಲ ಮಗನನ್ನ ತಾವು ಬೆಳಸಿದ ರೀತಿಯಲ್ಲಿ ನೋಡಿಕೊಂಡರು.. ಮಗನ ಸಾಧನೆಯ ಬಗ್ಗೆ ಅವರಲ್ಲಿ ಹೆಮ್ಮೆ ಇದ್ದೇ.. ಇನ್ನೂ ಚೆನ್ನೈಗೆ ಬಂದು ನೆಲೆಸುವಂತೆ ಸಚಿವ ಮುರುಗನ್ ಅವರು ತಂದೆ ತಾಯಿ ಬಳಿ ಎಷ್ಟೇ ಮ’ನವಿ ಮಾಡಿಕೊಂಡಿದ್ದರು ಮಗ ಇರುವ ಜಾಗಕ್ಕೆ ಹೋಗಲಿಲ್ಲ..

ಆದರೆ‌ ಇವರು ಮಾತ್ರ ಚೆನ್ನೈಗೆ ಹೋಗಿ ಮೂರು ನಾಲ್ಕೈದು ದಿನ ಮಗನ ಜೊತೆಗೆ ಸಮಯ ಕಳೆದು ನಂತರ ತಮ್ಮ‌ ‌ಊರಿಗೆ ಮರಳಿ ಬರುತ್ತಿದ್ದರು.. ಅಲ್ಲದೆ ಐದು ವರ್ಷಗಳ ಹಿಂದೆ ತೀ’ರಿಹೋ’ದ ತಮ್ಮ ಕಿರಿಯ ಮಗನ ಮಕ್ಕಳು ಮತ್ತು ಸೊಸೆಯನ್ನ ಇವರೆ ನೋಡಿಕೊಳ್ಳುತ್ತಿದ್ದಾರೆ.. ಈ ದಂಪತಿಗಳ ಸರಳತೆ ನೋಡಿ ಇಡೀ ಊರಿಗೆ ಊರೇ ಕೊಂಡಾಡುತ್ತಿದ್ದಾರೆ.. ಇನ್ನೂ ಒಂದು ಎಕರೆ ಭೂಮಿಯನ್ನು ಹೊಂದಿಲ್ಲದ ಇವರು ಈಗಲೂ ಕೂಡ ಸಾ’ಯು’ವವರೆಗೂ ತಮ್ಮ‌ ಕಾಲಿನ ಮೇಲೆ ತಾವು ನಿಲ್ಲಬೇಕು ಮಗನ ಮೇಲೆ ಅವಲಂಭಿತವಾಗದೆ ಇಂದಿಗೂ ಛಲದಿಂದ ಕೂ’ಲಿ ಕೆಲಸ ಮಾಡುತ್ತಾ ಜೀವನ ಮಾಡುತ್ತಿರುವ ಈ ದಂಪತಿಗಳ ಆ’ತ್ಮಸ್ಥೈ’ರ್ಯವನ್ನ ಮೆಚ್ಚಲೇಬೇಕು..