Advertisements

ಶಿಕ್ಷಕ ಕೆಲಸದಿಂದ ನಿವೃತ್ತಿ ಪಡೆದು ಸ್ವಂತ ಭೂಮಿಯಲ್ಲಿ ವರ್ಷಕ್ಕೆ ಈ ರೈತ ಗಳಿಸುತ್ತಿರುವ ಆದಾಯ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತೀರಾ! ಇವರು ಮಾಡಿದ ಐಡಿಯಾ‌ ಏನು ಗೊತ್ತಾ?

Agriculture

ನಮಸ್ತೆ ಸ್ನೇಹಿತರೆ, ಕೆಲಸದಲ್ಲಿ ನಿವೃತ್ತಿ ಆಯಿತು. ಇನ್ನೇನು ನನ್ನ ಕೆಲಸ ಮುಗಿಯಿತು ಅಂತ ಮನೆಯಲ್ಲಿಯೇ ಕುಳಿತು ಸಮಯ ವ್ಯರ್ಥ ಮಾಡುವವರ ಮಧ್ಯೆ ಈ ವ್ಯಕ್ತಿ ಮಾಡಿದ ಕೆಲಸ ನೋಡಿ ಮನೆಯಲ್ಲಿಯೇ ಕುಳಿತು ಸಮಯ ವ್ಯರ್ಥ ಮಾಡುವವರು ಈ ವ್ಯಕ್ತಿ ಮಾಡುತ್ತಿದ್ದ ಕೆಲಸ ನೋಡಿ ಆಶ್ಚರ್ಯ ಪಟ್ಟಿದ್ದಾರೆ‌… ಉಪನ್ಯಾಸಕ ವೃತ್ತಿಯಿಂದ ನಿವೃತ್ತಿ ಪಡೆದು ಈ ವ್ಯಕ್ತಿ ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಅದೆಷ್ಟೋ ಜನ ರೈತರಿಗೆ ಇವರು ಸ್ಪೂರ್ತಿಯಾಗಿದ್ದಾರೆ.. ಹೌದು ನಾಗಮಂಗಲದ ಆದಮಗೆರೆ ಗ್ರಾಮದ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ಶಿಕ್ಷಕ ರಾಮಾಂಜಿನಿ ಎಂಬುವವರು ಮಕ್ಕಳಿಗೆ ಪಾಠ ಮಾಡುವಂತಹ ಕೆಲಸ ಮಾಡುತ್ತಿದ್ದರು.. ಆದರೆ ನಂತರದ ದಿನಗಳಲ್ಲಿ ಉಪನ್ಯಾಸಕ ವೃತ್ತಿಯಿಂದ ನಿವೃತ್ತಿ ಪಡೆದ ಬಳಿಕ ಸುಮ್ಮನೆ ಸಮಯ ವ್ಯರ್ಥ ಮಾಡುವ ಮನಸ್ಸು ಇವರದ್ದಾಗಿಲ್ಲ ಈಗಾಗಿ ಶಿಕ್ಷಣದಿಂದ ನಿವೃತ್ತಿ ಪಡೆದ ಬಳಿಕ ಏನು ಮಾಡಬೇಕೆಂದು

Advertisements
Advertisements

ಸುಮಾರು 8 ವರ್ಷಗಳಿಂದ ಪ್ಲಾನ್ ಮಾಡಿ ಇಂದು ಆ ಯೋಜನೆಯಲ್ಲಿ ಯಶಸ್ಸು ಸಾಧಿಸಿದ್ದಾರೆ.. ಆದರೆ‌ ಇವರ ಬಳಿ ಇದ್ದ ಭೂಮಿ ಫಲವತ್ತಾದ ಭೂಮಿ ಆಗಿರಲಿಲ್ಲ. ಬದಲಿಗೆ ಎರಡೂವರೆ ಎಕರೆ ಒಣಗಿದ ಭೂಮಿ ಆಗಿತ್ತು.‌. ನಂತರ ಭೂಮಿ ತಾಯಿಯನ್ನ ನಂಬಿ ಕೃಷಿ ಕಾಯಕ ಆರಂಭಿಸಿದ ಇವರು‌ ಕರಕಲು ‌ಭೂಮಿಯನ್ಹ ಹದಮಾಡಿ ಅಲ್ಲಿ ಒಂದು ಕೊಳವೆ ಬಾವಿಯನ್ನ ಹಾಕಿಸಿದ್ದರು.. ನಂತರ ತಮ್ಮ ಜಮೀನಿನಲ್ಲಿ ಸುತ್ತಲೂ ತೇಗಾ, ಸಿಲ್ವರ್‌ ಮರಗಳನ್ನ ಬೆಳೆಸಿದ್ದರು. ಆಪ್ತ ಸ್ನೇಹಿತರ ಸಲಹೆಯಂತೆ ತಮ್ಮ ಜಮೀನಿಗೆ ಬೆಟ್ಟದ ನೆಲಿಕಾಯಿ ಹಾಗು ಸಪೋಟೋ ಗಿಡವನ್ನ ಬೆಳೆಸಿದರು.. ಆದರೆ ಸಪೋಟೋ‌ ಕೀಟಗಳ ಬಾದೆಯಿಂದ ಕೈ ಕೊಟ್ಟೂರು ಬೆಟ್ಟದ ನೆಲಿಕಾಯಿ ಇವರ ಕೈ ಹಿಡಿಯಿತು.. ಈಗಾಗಿ ಸಪೋಟ ಗಿಡಗಳನ್ನ ಕಿತ್ತು ಹಾಕಿ ಆ ಜಾಗದಲ್ಲಿ ನೆಲಿಕಾಯಿ ಮತ್ತು ತೆಂಗಿನ ಸಸಿಗಳನ್ನ ಬೆಳೆಸಿದರು.. 100 ಬೆಟ್ಟದ ನೆಲೆಕಾಯಿ ಗಿಡಗಳಿಂದ ವರ್ಷ ಪೂರ್ತಿ ಐದರಿಂದ ಆರು ಟನ್ ನೆಲಿಕಾಯಿ‌ ಸಿಗುತ್ತಿತ್ತು..

ಈ ನಲಿಕಾಯಿಯನ್ನ‌ ಸೃಷ್ಟಿ ಬ್ರಾಂಡ್ ಹೆಸರಿನಲ್ಲಿ ನೆಲಿಕಾಯಿ ಜೂಸ್ ಮಾಡಿ ಮಾರಟ ಮಾಡುತ್ತಿದ್ದರು ಇನ್ನೂ ನೆಲಿಕಾಯಿ ಸಿಪ್ಪೆಯನ್ನು ಔಷಧ ತಯಾರಿಕೆಗೆ ನೀಡುತ್ತಿದ್ದರು.. ಇಷ್ಟೇ ಅಲ್ಲದೆ ಜಂಬು ನೇರಳೆ‌ ಬೆಳೆ ಬೆಳೆದು ತಾವೇ ವೈನ್ ತಯಾರು ಮಾಡಿ ಮಾರಾಟ ಕೂಡ ಮಾಡುತ್ತಿದ್ದರು. ಇದರ ಜೊತೆಗೆ ಸಪೋಟೋ, ಮಾವು, ಚಕೋತ, ನಿಂಬೆ, ಸೀಬೆಹಣ್ಣು, ಹಾಗು ರಾಗಿ ಬೆಳೆಯುವುದರ‌ ಜೊತೆಗೆ ಪ್ರಾಯೋಗಿಕವಾಗಿ ಕಿತ್ತಲೆ ಮತ್ತು ಬೆಣ್ಣೆ ಹಣನ್ನ ಬೆಳೆದು ಅದರಲ್ಲಿ ಕೂಡ ಯಶಸ್ಸನ್ನ ಕಂಡಿದ್ದಾರೆ.. ಇನ್ನೂ ಬೆಂಗಳೂರಿನ ಮತ್ತು ಹಂಕಾಕ್ ಸೇರಿದಂತೆ ಹಲವೆಡೆ ಸ್ವಂತ ಮಾರುಕಟ್ಟೆ ಮಾಡಿರುವ ಇವರು ವರ್ಷಕ್ಕೆ ಏನಿಲ್ಲ ಆದರೂ ಎರಡರಿಂದ ನಾಲ್ಕು ಲಕ್ಷದಷ್ಟು ಆದಾಯ ಪಡೆಯುತ್ತಿದ್ದಾರೆ.. ಶಾಲೆಯಲ್ಲಿ ಪಾಠ ಮಾಡುವ ಉಪನ್ಯಾಸಕರ ಈ‌ ವಿಭಿನ್ನವಾದ ಪ್ರಯತ್ನ ಹಾಗು ಯಶಸ್ಸಿನ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..