ನಮಸ್ತೆ ಸ್ನೇಹಿತರೆ, ವೀರಾಸ್ವಾಮಿ ರವಿಚಂದ್ರನ್ ಕನ್ನಡ ಚಿತ್ರರಂಗದಲ್ಲಿ ವಿ.ರವಿಚಂದ್ರನ್ ಎನ್ನುವ ಹೆಸರಿನಲ್ಲಿ ಪ್ರಸಿದ್ಧರಾದ ಇವರು ಕನ್ನಡ ಚಿತ್ರರಂಗಕ್ಕೆ ಶ್ರೀಮಂತಿಕೆ ಮತ್ತು ಬೆಳ್ಳಿಪರದೆಗೆ ಹೊಸರಂಗು ತಂದ ಹೆಗ್ಗಳಿಕೆ ರವಿಚಂದ್ರನ್ ಅವರದ್ದು.. ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ತಮ್ಮ 60 ನೇ ವರ್ಷದ ಹುಟ್ಟು ಹಬ್ಬವನ್ನ ಸರಳ ರೀತಿಯಲ್ಲಿ ಆಚರಿಣೆ ಮಾಡಿಕೊಂಡಿದ್ದಾರೆ. ಇನ್ನೂ ಈ ಕೋ’ರೋನ ಸೋಂ’ಕಿನ ಸಂಕಷ್ಟದಲ್ಲಿ ಲಾಕ್ ಡೌನ್ ಇರುವ ಕಾರಣದಿಂದ ತಮ್ಮ ಅಭಿಮಾನಿಗಳು ಮನೆಯ ಬಳಿ ಬರದಂತೆ ರವಿಚಂದ್ರನ್ ಅವರು ಕಾಮೆಂಟ್ ಮಾಡುವ ಮೂಲಕ ಅಭಿಮಾನಿಗಳ ಬಳಿ ಮನವಿಯನ್ನು ಮಾಡಿಕೊಂಡಿದ್ದರು.. ಅಲ್ಲದೆ ನೀವು ಇರುವ ಜಾಗದಲ್ಲೇ ನನಗೆ ಶುಭ ಹಾರೈಸಿ ಎಂದು ಕೇಳಿಕೊಂಡಿದ್ದರು.

ಇನ್ನೂ ತಂದೆಯ ಹುಟ್ಟು ಹಬ್ಬವನ್ನು ರವಿಚಂದ್ರನ್ ಅವರ ಮಕ್ಕಳು ಸಂಭ್ರಮದಿಂದ ಆಚರಣೆ ಮಾಡಿದರು. ಮಕ್ಕಳಾದ ಮನೋರಂಜನ್ ವಿಕ್ರಮ್ ಮಗಳು ಸಂಗೀತ ಅವರು ತಂದೆಯ ಹುಟ್ಟು ಹಬ್ಬವನ್ನು ಒಂದು ವಾರದ ಮುಂಚೆಯೇ ವಿಶೇಷ ರೀತಿಯಲ್ಲಿ ಹೇಗೆ ಮಾಡಬಹುದು ಎಂದು ಯೋಚಿಸಿ ತಂದೆಯ ಹುಟ್ಟು ಹಬ್ಬವನ್ನು ಆಚರಣೆ ಮಾಡುತ್ತಿದ್ದರು.. ಮಗನಾದ ಮನೋರಂಜನ್ ಅವರು ಪ್ರತಿ ವರ್ಷದಂತೆ ತನ್ನ ಪ್ರೀತಿಯ ತಂದೆಗೆ ಒಂದು ಶರ್ಟ್ ಅನ್ನು ಉಡುಗೊರೆಯಾಗಿ ತಂದು ಕೊಡುತ್ತಿದ್ದರಂತೆ ಅದನ್ನು ತಂದೆಯ ಕೈಗೆ ಕೊಡದೆ ಅವರ ವಾರ್ಡ್ ರೋಮ್ ನಲ್ಲಿ ಇಡುತ್ತಿದ್ದರಂತೆ.. ಈ ಬಾರಿ ಸಂಗೀತ ಜೊತೆಗೆ ಅಳಿಯ ಕೂಡ ತಮ್ಮ ಮಾವನವರ ಹುಟ್ಟು ಹಬ್ಬದ ದಿನ ಬಿಗಿಯಾಗಿದರು. ಇನ್ನೂ ಅಭಿಮಾನಿಗಳು ಕೂಡ ಕೇಕ್ ಹೂವಿನ ಹಾರ ಬ್ಯಾನರ್ ಪೋಸ್ಟರ್ ಗಳ

ಜೊತೆಗೆ ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಆಚರಣೆ ಮಾಡಲು ಬೇರೆ ಬೇರೆ ಊರುಗಳಿಂದ ರವಿಚಂದ್ರನ್ ಅವರ ಮನೆಯ ಬಳಿ ಬರುತ್ತಿದ್ದರು.. ಆದರೆ ಈ ಬಾರಿ ಅದೆಲ್ಲ ಮಿಸ್ ಆದರೂ ಅಭಿಮಾನಿಗಳು ತಾವು ಇರುವ ಜಾಗದಲ್ಲಿ ಜೋಪಾನವಾಗಿ ಹಾಗು ಕ್ಷೇಮವಾಗಿ ಇರಲಿ ಎಂದು ರವಿಚಂದ್ರನ್ ಅವರು ಆಶಿಸಿದ್ದರು.. ಇನ್ನೂ ರವಿಚಂದ್ರನ್ ಅವರು ತಾವು ಮಾಡುವಂತಹ ಪ್ರತಿಯೊಂದು ಸಿನಿಮಾಗಳು ಸೋತರು ಅಥವಾ ಗೆದ್ದರು ಕೂಡ ಸಿನಿಮಾ ಮಾಡುವುದನ್ನ ನಿಲ್ಲಿಸುತ್ತಿರಲಿಲ್ಲ.. ಕನ್ನಡ ಸಿನಿಮಾ ರಂಗಕ್ಕೆ ತಮ್ಮ ತಾಂತ್ರಿಕತೆ ಸಂಗೀತ ಮತ್ತು ಹಾಡುಗಳ ಮೂಲಕ ಹೊಸ ಲೋಕವನ್ನು ಸೃಷ್ಟಿಸಿದರು.. ಸ್ನೇಹಿತರೆ ನಟ ರವಿಚಂದ್ರನ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..