Advertisements

ಒಂದೇ ಮುಹೂರ್ತದಲ್ಲಿ ಅಕ್ಕ ತಂಗಿಯನ್ನು ಮದುವೆಯಾದ ಮದುಮಗ! ಈ ರೀತಿ ಮದುವೆ ಆಗಲು ಅಸಲಿ ಕಾರಣ ಏನು ಗೊತ್ತಾ?

News

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಅಕ್ಕ ತಂಗಿಯನ್ನ ಒಂದೇ ಮುಹೂರ್ತದಲ್ಲಿ ಹುಡುಗ ಮದುವೆ ಆಗಿರುವ ದೃಶ್ಯಗಳನ್ನ ನಾವು ಹೆಚ್ಚಾಗಿ ಸಿನಿಮಾದಲ್ಲಿ ನೋಡಿರುತ್ತೇವೆ.. ಸಿನಿಮಾದಲ್ಲಿ ಇಂತಹ ಸನ್ನಿವೇಶಗಳನ್ನ ಕಲ್ಪನೆಗೆ ತಕ್ಕಂತೆ ಸೃಷ್ಟಿಸಿರುತ್ತಾರೆ. ಅದರೆ ಇಲ್ಲಿ ಮಾತ್ರ ತಂತಾನೆ ಸೃಷ್ಟಿಯಾಗಿ ಅಪರೂಪದ ಮದುವೆ ಒಂದು ನಡೆದಿದೆ.. ಈ ಮದುವೆ ನಡೆದಿರೋದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಎನ್ನುವ ಗ್ರಾಮದಲ್ಲಿ. ‌ ಸುಪ್ರಿಯಾ ಹಾಗು ಲಲಿತ ಎನ್ನುವ ಅಕ್ಕ ತಂಗಿಯನ್ನ ಉಮಾಪತಿ ಎನ್ನುವವರು ಒಂದೇ ಮುಹೂರ್ತದಲ್ಲಿ ಮದುವೆ ಆಗಿದ್ದಾರೆ.. ಇದಕ್ಕೆ ಕಾರಣ ಎನೆಂದರೆ ಅಕ್ಕ ಸುಪ್ರಿಯಾಗೆ ಮಾತು ಬರುತ್ತಿರಲಿಲ್ಲ, ಅಕ್ಕನಿಗೆ ಮದುವೆ ಆಗದೆ ತಂಗಿಯಾದ ಲಲಿತ ಕೂಡ ಮದುವೆ ಆಗುತ್ತಿರಲಿಲ್ಲ..

Advertisements
Advertisements

ಇಂತಹ ಸಂದರ್ಭಗಳಲ್ಲಿ ತಂಗಿಯಾದ ಲಲಿತಾಳನ್ನು ಮದುವೆಯಾಗುಲು ಸಲುವಾಗಿ ಉಮಾಪತಿ ಇವರ ಮನೆಗೆ‌ ಹೆಣ್ಣು ನೋಡುವ ಸಲುವಾಗಿ ಮನೆಗೆ ಬಂದಿದ್ದರು.. ಆದರೆ ಆ ಸಮಯದಲ್ಲಿ ತಂಗಿಯಾದ ಲಲಿತ ಯೋಚನೆ ಮಾಡಿ ಒಂದು‌ ಷರತ್ತನ್ನು ಹಾಕಿದಳು.. ಅದೇನೆಂದರೆ ನನ್ನನ್ನು ಮದುವೆ ಆಗಬೇಕು ಎಂದರೆ ನನ್ನ ಅಕ್ಕನನ್ನು ಮದುವೆ ಆಗಬೇಕು ಎನ್ನುವ ನಿಬಂಧನೆಯನ್ನು ಉಮಾಪತಿಗೆ ಹೇಳಿದಳು.. ಇದಕ್ಕೆ ಹೆಣ್ಣಿನ ತಂದೆ ಕೂಡ ಒಪ್ಪಿಗೆಯನ್ನು ನೀಡಿ‌ ಉಮಾಪತಿ ಅವರಿಗೆ ಷರತ್ತನ್ನು ಹಾಕುತ್ತಾರೆ.. ಮೊದಲ ಮಗಳನ್ನು ಮದುವೆಯಾದರೆ ಮಾತ್ರ ಎರಡನೇ ಮಗಳನ್ನು ಕೊಟ್ಟು ಮದುವೆ ಮಾಡಿ ಕೊಡುತ್ತೇವೆ ಎಂದು ತಿಳಿಸುತ್ತಾರೆ.. ಇನ್ನೂ ಈ ಷರತ್ತಿಗೆ ಒಪ್ಪಿಗೆ ನೀಡಿದ ಉಮಾಪತಿ ಅಕ್ಕ ಸುಪ್ರಿಯಾ ಹಾಗು ತಂಗಿ ಲಲಿತ ಇಬ್ಬರನ್ನೂ

ಒಂದೇ ಮುಹೂರ್ತದಲ್ಲಿ ಮದುವೆ ಆಗುತ್ತಾರೆ..‌ ಇನ್ನೂ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಸಹ ವಧುವಿನ ಇಬ್ಬರ ಹೆಸರಿನ ಜೊತೆಗೆ ಉಮಾಪತಿ ಅವರ ಹೆಸರನ್ನು ಹಾಕಿದ್ದರು.. ಈ ರೀತಿಯ ಮದುವೆ ಈ ಕುಟುಂಬದಲ್ಲಿ ಹಾಗಿರುವುದು ಹೊಸದೇನು ಅಲ್ಲ ಹೆಣ್ಣಿನ ತಂದೆ ಕೂಡ ಇದೆ ರೀತಿ ಒಂದೇ ಕುಟುಂಬದಲ್ಲಿ ಅಕ್ಕ ತಂಗಿಯನ್ನು ಒಂದೇ ಮುಹೂರ್ತದಲ್ಲಿ ಮದುವೆ ಆಗಿದ್ದರು.. ಅದರಲ್ಲಿ ಅಕ್ಕನಿಗೆ ಮಾತು ಬರುತ್ತಿರಲಿಲ್ಲ ಅವರ ಮಗಳೇ ಮಾತು ಬರದ ಸುಪ್ರಿಯಾ ಎನ್ನಲಾಗಿದೆ.. ಅದೇನೇ ಆಗಲಿ ಅಕ್ಕನ ಭವಿಷ್ಯದ ಬಗ್ಗೆ ಯೋಜನೆ ಮಾಡಿ ಈ ತ್ಯಾಗಕ್ಕೆ ಸಿದ್ದಳಾದ ಲಲಿತಾಳ ಮನಸ್ಸು ನಿಜಕ್ಕೂ ದೊಡ್ಡದು.. ಸ್ನೇಹಿತರೆ ಏನೇ ಆಗಲಿ ಇವರ ಮುಂದಿನ ದಾಂಪತ್ಯ ಜೀವನ ಸುಖವಾಗಿರಲ್ಲಿ ಎಂದು ನಾವು ಕೂಡ ಹಾರೈಸೋಣ..