Advertisements

ಈ ನಾಯಿ ಮಾಡಿದ ಕೆಲಸ ನೋಡಿ ಇಡೀ ಪ್ರಪಂಚವೇ ತಲೆ ತಗ್ಗಿಸಿದೆ! ಈ ನಾಯಿ ಬಗ್ಗೆ ಕೇಳಿದ್ರೇ ಆಶ್ಚರ್ಯ ಪಡ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ನಿಯತ್ತಿಗೆ ಪ್ರತಿರೂಪ ನಾಯಿ ಎಂಬುದು ನಮಗೆ ತಿಳಿದಿರುವ ವಿಷಯ, ತನಗೆ ಏನಾದರೂ ಪರವಾಗಿಲ್ಲ ಆದರೆ ತನಗೆ ಊಟ ಆಗಿದ ವ್ಯಕ್ತಿಗೆ ಕೊನೆಯ ತನಕ ಪ್ರಾಣ ಕೊಡುವಷ್ಟು ಆಭಾರಿಯಾಗಿರುತ್ತದೆ.. ಹೌದು ಸ್ನೇಹಿತರೆ ಜಪಾನಿನಲ್ಲಿ ನಡೆದ ಒಂದು ಘಟನೆ ಪ್ರಪಂಚದ ಜನರ ಹೃದಯ ಕದಲುವಂತೆ ಮಾಡಿದೆ.. ಜಪಾನ್ ರಾಜ್ಯದ ಟೋಕಿಯೋ ಯೂನಿವರ್ಸಿಟಿಯಲ್ಲಿ ಯುನೋ ಎಂಬ ಉಪನ್ಯಾಸಕರು ಕೆಲಸ ಮಾಡುತ್ತಿದ್ದರು, ಇವರು ಪ್ರತಿನಿತ್ಯ ಯೂನಿವರ್ಸಿಟಿಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು.. . ಒಂದು ದಿನ ಇವರಿಗೆ ರಸ್ತೆಯಲ್ಲಿ ನಾಯಿಮರಿ ಕಾಣಿಸಿಕೊಂಡಿತು, ಆದರೆ ಆ ನಾಯಿ ಮರಿಗೆ ಪ್ರತಿನಿತ್ಯ ಏನಾದರೂ ಊಟವನ್ನು ಯುನೋ ಕೊಡುತ್ತಿದ್ದನ್ನು..

Advertisements
Advertisements

ನಂತರ ಇವರಿಬ್ಬರ ನಡುವೆ ಸ್ನೇಹ ಬೆಳೆಯಿತು,‌ ಕೆಲವು ದಿನದ ನಂತರ ಯುನೋ ಆ ನಾಯಿ ಮರಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದು ಮನೆಯಲ್ಲಿ ಈ ನಾಯಿಯನ್ನು ಸಾಕುತ್ತಿದ್ದನ್ನು ನಂತರ ಆ ನಾಯಿಗೆ ಹಚ್ಚಿಕೋ ಎಂದು ಹೆಸರಿಟ್ಟರು, ಪ್ರತಿನಿತ್ಯ ಯುನೋ ಜೊತೆ ರೈಲ್ವೆ ಸ್ಟೇಷನ್ ಗೆ ಹೋಗುತ್ತಿದ್ದ ಹಚ್ಚಿಕೋ, ಹಗಲೆಲ್ಲ ಅಲ್ಲೇ ಇದ್ದು ಸಾಯಂಕಾಲ ಯುನೋ ಜೊತೆ ಒಟ್ಟಿಗೆ ಮನೆಗೆ ಬರುತ್ತಿದ್ದರು.. ಇದೇ ರೀತಿ ಇವರಿಬ್ಬರ ಪ್ರಯಾಣ ವರ್ಷಗಟ್ಟಲೆ ನಡೆಯುತ್ತಿತ್ತು.. ಆದರೆ ಒಂದು ದಿನ ಯೂನಿವರ್ಸಿಟಿಗೆ ಹೋದ ಯುನೋ ಸಂಜೆಯಾದರೂ ಹಿಂದಿರುಗಲಿಲ್ಲ, ಎಷ್ಟೊತ್ತಾದರೂ ಯುನೋ ಬರದಿದ್ದ ಕಾರಣ ಹಚ್ಚಿಕೋ ನಾಯಿ ಮರಿ..

ಪ್ರತಿಯೊಂದು ರೈಲು ಹಳಿಯ ಬಳಿ ಹೋಗಿ ಹುಡುಕಾಡುತ್ತಿತ್ತು.. ಯುನೋಗಾಗಿ ಪ್ರತಿದಿನ ಕಾಯುತ್ತಿದ್ದ ಹಚ್ಚಿಕೋ ಎಂಬ ನಾಯಿ, ಕೆಲವು ದಿನಗಳು, ತಿಂಗಳುಗಳು, ಹಾಗೂ ವರ್ಷಗಳೇ ಕಳೆದು ಹೋಯಿತು, ಆದರೆ ಯುನೋ ಬರಲಿಲ್ಲ.. ಆದರೂ ಸಹಾ ಹಚ್ಚಿಕೋ ತನ್ನ ಗೆಳೆಯ ಯುನೋ ಬರಲಿಲ್ಲ ಎಂದು ಅದೆಷ್ಟೋ ರೈಲುಹಳಿ ಬಳಿ ಹೋಗಿ ಯುನೋಗಾಗಿ ಹುಡುಕಾಡುತ್ತಿತ್ತು.. ಆದರೆ ಯುನೋ ವಾಪಸ್ ಬರಲಿಲ್ಲ ಆದರೆ ಯುನೋ ಇರುವ ಹಾಗೆ ಯಾರಾದರೂ ಕಂಡರೆ, ಅವರ ಬಳಿ ಹೋಗಿ ಸುತ್ತಾಡುತ್ತಿತ್ತು ಈ ಹಚ್ಚಿಕೋ.. ಆದರೆ ಅಲ್ಲಿನ ಜನರಿಗೆ ಈ ನಾಯಿಯ ವರ್ತನೆ ಯಾರಿಗೂ ಸಹಾ ಇಷ್ಟವಾಗಲಿಲ್ಲ, ನಂತರ ಅದರ ಭಾವನೆ ಬಗ್ಗೆ ಅರ್ಥಮಾಡಿಕೊಂಡ ಜನ ನಂತರ ಆ ನಾಯಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು..

ಈ ನಾಯಿ ಸುಮಾರು ಹತ್ತು ವರ್ಷಗಳ ಕಾಲ ರೈಲ್ವೆ ಸ್ಟೇಷನ್ ನಲ್ಲಿ ತನ್ನ ಗೆಳೆಯನಿಗಾಗಿ ಕಾಯುತ್ತಿತ್ತು.. ಆದರೆ ತನ್ನ ಗೆಳೆಯನ ಹುಡುಕಾಟದಲ್ಲಿ ಆನಾರೋಗ್ಯದಿಂದ ಈ ನಾಯಿ ಮರಣ ಹೊಂದಿತು, ಆದರೆ ಈ ನಾಯಿಗೆ ಅಂದು ತಿಳಿದಿರಲಿಲ್ಲ ಯೂನಿವರ್ಸಿಟಿಗೆ ಹೋದ ತನ್ನ ಗೆಳೆಯ ಹೃದಯಾಘಾತದಿಂದ ಅಲ್ಲೇ ಕುಸಿದು ಬಿದ್ದು ಸಾವನ್ನಪ್ಪಿ ಎಂದು.. ನಂತರ ಯುನೋ ಹಾಗೂ ಹಚ್ಚಿಕೋ ಇವರಿಬ್ಬರ ಬಗ್ಗೆ ಸಾಕಷ್ಟು ಸಿನಿಮಾಗಳು ಕೂಡ ಬಂದಿದ್ದವು ಇನ್ನು ಹಚ್ಚಿಕೋ ಪ್ರೀತಿಗೆ ಮೆಚ್ಚಿ ಜಪಾನ್ ನಲ್ಲಿ ಅವರಿಬ್ಬರ ವಿಗ್ರಹವನ್ನು ಕೂಡ ನಿರ್ಮಾಣ ಮಾಡಲಾಯಿತು.. ಸ್ನೇಹಿತರೆ ಈ ನಾಯಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯವನ್ನು ತಿಳಿಸಿ..‌