Advertisements

ಅರ್ಚಕರು ಇಲ್ಲದ ಈ ದೇವಾಲಯಕ್ಕೆ ಒಂದು ಗಂಟೆಯಲ್ಲಿ ಅರ್ಚಕನನ್ನು ಆಯ್ಕೆ ಮಾಡಿದ ಬಸವಪ್ಪ! ಅಷ್ಟಕ್ಕೂ ಅರ್ಚಕನ ಆಯ್ಕೆ ಹೇಗಾಯಿತು ಗೊತ್ತಾ? ನೀವೇ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಕಾಲದಲ್ಲಿ ದೇವಸ್ಥಾನಗಳಲ್ಲಿ ಪೂಜೆ ಮಾಡಲು ಮತ್ತು ಮಡಿ ಶುದ್ಧತೆ ಆಚಾರ ವಿಚಾರದ ಬಗ್ಗೆ ಯಾರೂ ಕೂಡ ಯೋಚಿಸುವುದಿಲ್ಲ.. ಅಲ್ಲದೆ ದೇವರ ಕಾರ್ಯಕ್ಕೆಂದು ಯಾರು ಸಹ ಅಷ್ಟೊಂದು ಉತ್ಸಾಹದಿಂದ ಹೋಗುವುದಿಲ್ಲ.. ಇನ್ನು ದೇವಸ್ಥಾನ ಅರ್ಚಕರಾಗಿ ಪ್ರತಿನಿತ್ಯ ಮಡಿ ಮೈಲಿಗೆ ಎಂದು ಯಾರು ತಾನೆ ಕೆಲಸ ಮಾಡುತ್ತಾರೆ.. ಅಲ್ಲದೆ ದೇವಸ್ಥಾನಗಳಿಂದ ನಮಗೆ ಯಾವುದೇ ರೀತಿಯ ಹಣ ಸಿಗುವುದಿಲ್ಲ ಎಂದು ಯಾರು ಸಹ ಈ ಕೆಲಸಕ್ಕೆ ಹೋಗುವುದಿಲ್ಲ.. ಆದರೆ ಈ ಊರಿನಲ್ಲಿ ಸುಮಾರು ಐದು ವರ್ಷಗಳಿಂದ ದೇವಸ್ಥಾನಕ್ಕೆ ಅರ್ಚಕರು ಇಲ್ಲದೆ ಒದ್ದಾಡುತ್ತಿದ್ದ ಊರಿನ ಜನಕ್ಕೆ ಒಂದೇ ದಿನದಲ್ಲಿ ಅರ್ಚಕರನ್ನು ಹುಡುಕಿ ಕೊಟ್ಟ ಕಾಲಭೈರವೇಶ್ವರಸ್ವಾಮಿ ದೇವಸ್ಥಾನದ ಬಸವಪ್ಪ..

[widget id=”custom_html-2″]

Advertisements
Advertisements

ಹೌದು, ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದಲ್ಲಿ ಸುಮಾರು ಐದು ವರ್ಷಗಳಿಂದ ಉರುಗಮ್ಮ ದೇವಿ ದೇವಸ್ಥಾನಕ್ಕೆ ಅರ್ಚಕನನ್ನು ನೇಮಕ ಮಾಡಲು ಗೊಂದಲದಲ್ಲಿದ್ದ ಜನರಿಗೆ ದೇವರ ಸ್ವರೂಪಿಯಾದ ಬಸವಪ್ಪ ಒಂದೇ ಗಂಟೆಯಲ್ಲಿ ದೇವಸ್ಥಾನಕ್ಕೆ ಅರ್ಚಕನು ಉಡುಕಿ ಕೊಟ್ಟು ಜನರಿಗೆ ಉತ್ತರ ನೀಡಿದೆ.. ಆದರೆ ಇದಕ್ಕೂ ಮೊದಲು ಈ ಒಂದು ದೇವಸ್ಥಾನದಲ್ಲಿ ಮಸಣಯ್ಯ ಎಂಬ ಅರ್ಚಕರು ದಿನ ನಿತ್ಯ ದೇವಿಗೆ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದರು ಆದರೆ ಅರ್ಚಕರು ಅ’ಕಾಲಿಕವಾಗಿ ಮ’ರಣ ಹೊಂದಿದ್ದರು.. ನಂತರ ಸುಮಾರು ಐದು ವರ್ಷಗಳಿಂದ ಈ ದೇವಸ್ಥಾನದಲ್ಲಿ ದೇವಿಗೆ ಅಲಂಕಾರ ಹಾಗೂ ನಿತ್ಯ ಪೂಜೆ ಪುನಸ್ಕಾರಗಳು ನಡೆಯದ ಕಾರಣ ದೇವಾಲಯ ಪೂರ್ತಿಯಾಗಿ ಹಾಳಾಗಿತ್ತು..

[widget id=”custom_html-2″]

ಇನ್ನು ಈ ಗೊಂದಲವನ್ನು ಬಗೆಹರಿಸಿಕೊಳ್ಳಲು ಆ ಊರಿನ ಜನ ಚಿಕ್ಕರಸಿನಕೆರೆಯಿಂದ ಕಾಲಭೈರವೇಶ್ವರಸ್ವಾಮಿ ದೇವಾಲಯದಲ್ಲಿರುವ ಬಸವಪ್ಪನನ್ನು ಗ್ರಾಮಕ್ಕೆ ಊರಿನ ಜನರು ಪೂಜೆ ಮಾಡಿ ಕರೆಸಿಕೊಂಡರು.. ನಂತರ ಗ್ರಾಮದ ಸುತ್ತಮುತ್ತಲಿನ ಸಾವಿರಾರು ಜನರು ಆ ಊರಿನ ಹೊರ ಭಾಗದಲ್ಲಿರುವ ಕಲ್ಯಾಣದ ಬಳಿ ದೇವಸ್ಥಾನದ ಅರ್ಚಕರ ನೇಮಕಾತಿ ಮಾಡಲಾಯಿತು.. ಇನ್ನು ಆರ್ಚಕನನ್ನು ನೋಡಲು ಕುತೂಹಲದಿಂದ ಸಾವಿರಾರು ಜನರು ಅಲ್ಲಿ ಕಾಯುತ್ತಿದ್ದರು.. ಅದೇ ಸಮಯದಲ್ಲಿ ಸಾವಿರಾರು ಜನಗಳ ಮಧ್ಯೆ ಇದ್ದ ಶಿವಣ್ಣ ಎನ್ನುವವರನ್ನು ಬಸವಣ್ಣ ತನ್ನ ಕೊಂಬಿನಿಂದ ಎಳೆದುತಂದು ಕಲ್ಯಾಣಿ ಒಳಗೆ ತಳ್ಳಿ ಆಯ್ಕೆಯ ಸೂಚನೆಯನ್ನು ಅಲ್ಲಿನ ಜನರಿಗೆ ತಿಳಿಸಿತು.. ಈ ಮೂಲಕ ಐದು ವರ್ಷದ ಅರ್ಚಕನ ಸಮಸ್ಯೆಗೆ ಕೇವಲ ಒಂದು ಗಂಟೆಯಲ್ಲಿ ಬಸವಪ್ಪ ಬಗ್ಗೆ ಹರಿಸಿದ್ದಕ್ಕೆ ಅಲ್ಲಿನ ಜನರು ಉಘೇ ಉಘೇ ಎಂದು ಕೂಗಿ ತಮ್ಮ ಧನ್ಯವಾದವನ್ನು ತಿಳಿಸಿದರು.. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..