Advertisements

ಮನುಷ್ಯರ ಹಾಗೆ ರಾತ್ರೋರಾತ್ರಿ ಸಕ್ಕತ್ ಫೇಮಸ್ ಆದ ವಿಶ್ವದ ಅತ್ಯಂತ ಸಣ್ಣ ಆಕಳು! ರಾಣಿ ನೋಡಲು ಬಂದ ಜನಸಾಗರ! ಆದರೆ ಈ ಹಸುವಿನ ವಿಶೇಷ ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ನಮ್ಮಗೆ ತಿಳಿದಿರುವಂತೆ ಇತ್ತಿಚೀನ ದಿನಗಳಲ್ಲಿ ರಾತ್ರೋರಾತ್ರಿ ದೊಡ್ಡ ಮಟ್ಟದಲ್ಲಿ ಸ್ಟಾರ್ ಆಗುವಂತಹ ಜನರನ್ನ ಹೆಚ್ಚಾಗಿ ನೋಡಿರುತ್ತೇವೆ.. ಆದರೆ‌ ಈಗಿನ ಕಾಲದಲ್ಲಿ ಮೂಖ ಪ್ರಾಣಿಗಳು ಕೂಡ ಸ್ಟಾರ್ ಆಗುವಂತಹ ಯೋಗ ಬಂದಿದೆ ಅಂತಾನೇ ಹೇಳಬಹುದು.. ಯಾಕೆಂದರೆ ಇದ್ದು ನೂರಕ್ಕೂ ನೂರು ಸತ್ಯ ಅಂತಾನೇ ಹೇಳಬಹುದು, ಹೌದು ಈ ಒಂದು ಸಣ್ಣ ಹಸು ರಾತ್ರೋರಾತ್ರಿ ಮೀಡಿಯಾ ಮುಂದೆ ದೊಡ್ಡ ಸ್ಟಾರ್ ಆಗಿ ನಿಂತಿದೆ.. ಅಯ್ಯಾ ಹಸು ಹೇಗೆ ಸ್ಟಾರ್ ಆಗಲು ಸಾಧ್ಯವಾಯಿತು ಅಂತ ಅಂದುಕೊಂಡಿದ್ದೀರಾ? ಅದರ ಪೂರ್ತಿ ಮಾಹಿತಿಯನ್ನು ನೋಡೋಣ ಬನ್ನಿ‌..

Advertisements
Advertisements

ನೀವು ಈ ಪೋಟೋದಲ್ಲಿ ಇರುವ ಹಸುವನ್ನು ನೋಡುತ್ತಿರಬಹುದು ಈ ಹಸು ನೋಡುವುದಕ್ಕೆ ಎಷ್ಟು ಮುದ್ದಾಗಿದೆ ಅಲ್ವಾ.. ಈ ಮುದ್ದಾದ ಪುಟ್ಟ ಹಸು ಹುಟ್ಟಿದ್ದು ಬಾಂಗ್ಲಾದೇಶದಲ್ಲಿ.. ಈ ಹಸುವಿನಲ್ಲಿ‌ ಆಕರ್ಷಣೆಯ ವಿಶೇಷತೆ ಏನೆಂದರೆ ಈ ಪುಟಾಣಿ ಹಸು ಇರುವುದು ಕೇವಲ 26 ಕೆ.ಜಿ ತೂಕ ಮತ್ತು 56 ಸೆಂಟಿಮೀಟರ್ ಎತ್ತರ ಅಷ್ಟೇ.. ಆದರೆ‌ ಈಗ‌ ಈ ಹಸು ಒಂದೇ ದಿನಕ್ಕೆ ರಾತ್ರೋರಾತ್ರಿ ಪ್ರತಿಯೊಬ್ಬರೂ ಮಾತಾನಾಡುವ ರೀತಿಯಲ್ಲಿ ಸಕ್ಕತ್ ಫೇಮಸ್ ಆಗಿದೆ.. ಹೌದು ಇತ್ತಿಚೀನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ‌ ಈ‌ ಸಣ್ಣ ಹಸುವಿನ ಒಂದಷ್ಟು ಪೋಟೋಗಳು ಸಕ್ಕತ್ ವೈ’ರಲ್ ಆಗಿದ್ದವು.. ಈ ಹಸುವನ್ನು ನೋಡಿದ ಅಲ್ಲಿನ ಸಾಕಷ್ಟು ಜನರು ಆಶ್ಚರ್ಯ ಪಟ್ಟು

ಈ‌ ಹಸುವನ್ನ ಹೇಗಾದರೂ ಮಾಡಿ ಒಮ್ಮೆಯಾದರೂ ನೋಡಲೇಬೇಕು ಎಂದು ಈ ಹಸು ಹುಟ್ಟಿದ ಗ್ರಾಮಕ್ಕೆ ಜನರು ಓಡೋಡಿ ಬರುತ್ತಿದ್ದಾರೆ.. ಈಗ ಈ ಹಸು ಗಿನ್ನಿಸ್ ವರ್ಡ್ ದಾಖಲೆಯಲ್ಲಿ ಇರುವ ಹಸುವಿಗಿಂತ ಹತ್ತು ಸೆಂಟಿಮೀಟರ್ ಚಿಕ್ಕದಾಗಿದ್ದು ಈ ಹಸುವನ್ನ‌ ಗಿನ್ನಿಸ್ ದಾಖಲೆಗೆ ಸೇರಿಸಲು ಮೂರು ತಿಂಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.. ಇದರ ಜೊತೆಗೆ ಕೋ’ರೋನ ಲಾಕ್ ಡೌನ್ ನಡುವೆಯೂ ಈಗಾಗಲೇ 15 ಸಾವಿರಕ್ಕೂ ಹೆಚ್ಚು ಜನ ದೇಶ ವಿದೇಶಗಳಿಂದ ಬಂದು ಈ‌ ಹಸುವನ್ನ ನೋಡಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.. ಸ್ನೇಹಿತರೆ ಇನ್ನೂ ಈ ಪುಟ್ಟ ಹಸುವಿನ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..