ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ನಾವು ರಸ್ತೆಯಲ್ಲಿ ಪ್ರಯಣ ಮಾಡುವಾಗ ತುಂಬಾ ಜನ ಭಿಕ್ಷಕರು ಹೊಟ್ಟೆ ಹಸಿವಿನಿಂದ ಬಳಲುತ್ತಿರುತ್ತಾರೆ ಆಗ ಅವರನ್ನು ನೋಡಿ ನಾವು ಅವರಿಗೆ ಏನು ಸಹಾಯ ಮಾಡದೇ ಹೊರಟು ಹೋಗುತ್ತೇವೆ.. ಆದರೆ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ತಾಯಿ ಮತ್ತು ಎರಡು ವರ್ಷ ವಯಸ್ಸಿನ ಮಗುವಿನ ಕಥೆಯ ಬಗ್ಗೆ ಇಲ್ಲಿ ನೋಡೋಣ ಬನ್ನಿ.. ಹೌದು ಸ್ನೇಹಿತರೆ ಈ ಒಂದು ಘ’ಟನೆ ನಡೆದಿರೋದು ಚೆನ್ನೈ ನಲ್ಲಿ, ಪ್ರಮೀಳಾ ಎನ್ನುವ ಹುಡುಗಿ ತನ್ನ ಕುಟುಂಬದ ಜೊತೆಗೆ ಚೆನ್ನೈ ಬೀಚ್ ಗೆ ಹೋಗಿದ್ದಳು.. ಇನ್ನೂ ಬೀಚ್ ನ ಬಳಿ ಇದ್ದ ಒಂದು ಪಾನಿ ಪೂರಿ ಅಂಗಡಿಯ ಬಳಿ ಒಬ್ಬ ತಾಯಿ ಹಾಗು ಮಗು ಕುಳಿತ್ತಿದ್ದರು..
[widget id=”custom_html-2″]

ಆ ತಾಯಿಯ ಕೈಯಲ್ಲಿ ಎರಡು ವರ್ಷದ ಮಗು ಹೊಟ್ಟೆ ಹಸಿವಿನಿಂದ ಅಳುತ್ತಿತ್ತು, ಆದರೆ ಆ ತಾಯಿಯ ಬಳಿ ಹಣ ಕೂಡ ಇರಲಿಲ್ಲ ಆಗ ಪ್ರಮೀಳಾ ಆ ಮಹಿಳೆ ಹಾಗು ಮಗುವನ್ನು ಕೆಲವು ಸಮಯ ಗಮನಿಸುತ್ತಿದ್ದಳು.. ಯಾಕೆಂದರೆ ಆ ಭಿಕ್ಷುಕಿ ಮಹಿಳೆಗೆ ಯಾರಾದರೂ ಸಹಾಯ ಮಾಡುತ್ತಾರೋ ಆಗ ಆ ತಾಯಿ ಏನು ಮಾಡುತ್ತಾಳೆ ಎಂದು.. ಇನ್ನೂ ಆ ಪಾನಿ ಪೂರಿ ಅಂಗಡಿಯ ಬಳಿ ಸುಮಾರು 50ಕ್ಕೂ ಹೆಚ್ಚಿನ ಜನರು ಅಲ್ಲಿಗೆ ಬಂದು ಪಾನಿ ಪೂರಿ ತಿಂದು ಹೋಗುತ್ತಿದ್ದರು.. ಆದರೆ ಅಲ್ಲಿಯೇ ಇದ್ದ ಭಿಕ್ಷುಕಿಗೆ ಯಾರು ಕೂಡ ಸಹಾಯ ಮಾಡಲಿಲ್ಲ, ವಾಹನ ಚಾಲಕರು ದಾರಿಯಲ್ಲಿ ಓಡಾಡುವವರು ಎಲ್ಲರೂ ಕೂಡ ಆ ಮಹಿಳೆಯನ್ನು ನೋಡುತ್ತಿದ್ದರು ಸಹ ಯಾರೂ ಕೂಡ ಆ ಮಹಿಳೆಗೆ ಸಹಾಯ ಮಾಡಲಿಲ್ಲ..
[widget id=”custom_html-2″]

ನಂತರ ಪ್ರಮೀಳಾ ಹೊಟ್ಟೆ ಪಾಡಿಗಾಗಿ ಭಿಕ್ಷೆ ಬಿಡುತ್ತಿದ್ದ ಆ ಮಹಿಳೆಯ ಬಳಿ ಹೋಗಿ ಈ ರೀತಿ ಹೇಳಿದಳು ‘ ಅಮ್ಮ ನಿಮಗೆ ಏನು ಬೇಕೋ ತಿನ್ನು ನಾನು ಹಣವನ್ನು ಕೊಡುತ್ತೇನೆ ಎಂದು ಹೇಳಿದಳು.. ಆಗ ಆ ಮಹಿಳೆ ನನಗೆ ಏನು ಬೇಡ ನೀವು ನನ್ನ ಮಗುವಿಗೆ ಏನಾದರೂ ತಿನ್ನಲು ಕೊಡಿಸಿ ಎಂದು ಕೇಳಿದಾಗ ಆಗ ಪ್ರಮೀಳಾಗೆ ಹೃದಯ ಕಲಕುವಂತೆ ಆಯಿತು. ನಂತರ ಭಿಕ್ಷುಕಿ ಮಹಿಳೆ ಬಳಿ ನೀನು ಯಾರು ಭಿಕ್ಷೆ ಬೇಡಲು ಕಾರಣವಾದರೂ ಏನು ಎಂದು ಆಕೆಯ ಕಷ್ಟಗಳು ಬಗ್ಗೆ ಪ್ರಮೀಳಾ ಕೇಳಿದಳು.. ಆಗ ಭಿಕ್ಷುಕಿ ಮಹಿಳೆ ಈ ರೀತಿ ಹೇಳಿದಳು ಕೆಲವು ತಿಂಗಳುಗಳ ಹಿಂದೆ ನನ್ನ ಗಂಡ ರಸ್ತೆಯ ಅ’ಪಘಾತದಲ್ಲಿ ಸಾ’ವನ್ನಪ್ಪಿದರು ಇನ್ನೂ ಮನೆಯ ಬಾಡಿಗೆಯನ್ನು ಕಟ್ಟಲಾಗಿದೆ ಮನೆಯ ಓನರ್ ನಮ್ಮನ್ನು ಮನೆಯಿಂದ ಹೊರ ಹಾಕಿದರು.. ನಾವು ಪ್ರೀತಿಸಿ ಮದುವೆ ಆದವರು ಅದರಿಂದ ನಮ್ಮ ಕುಟುಂಬದವರು
[widget id=”custom_html-2″]

ಯಾರೂ ಕೂಡ ನಮ್ಮ ಸಹಾಯಕ್ಕೆ ಮುಂದಾಗಲಿಲ್ಲ ಆಗಾಗಿ ಮಗುವನ್ನು ಬಿಟ್ಟು ನಾನು ಬೇರೆ ಕಡೆ ಕೆಲಸಕ್ಕೆ ಹೋಗಲು ಹಾಗುತ್ತಿಲ್ಲ ಆಗ ನಾನು ಕೂಡ ಸಾಯೋಣ ಎಂದರೆ ಈ ಮಗು ಅನಾಥವಾಗುತ್ತದೆ ಎನ್ನುವ ಭಯ ನನಗೆ ಈಗಲೂ ಕಾಡುತ್ತದೆ ಎಂದು ತನ್ನ ಕಷ್ಟವನ್ನು ಪ್ರಮೀಳಾ ಹುಡುಗಿಯ ಬಳಿ ಹೇಳಿಕೊಂಡಳ್ಳು.. ಈ ಮಹಿಳೆಯ ಕಷ್ಟವನ್ನು ಕೇಳಿದ ಪ್ರಮೀಳಾ ಆ ಮಹಿಳೆಗೆ ಹೊಟ್ಟೆ ತುಂಬಾ ಊಟವನ್ನು ಕೊಡಿಸಿ ಅನಂತರ ತನ್ನ ಕೈಯಲ್ಲಿ ಇದ್ದ ಒಂದಷ್ಟು ಹಣವನ್ನು ಆ ಭಿಕ್ಷುಕಿ ಮಹಿಳೆಗೆ ನೀಡಿ ಅಲ್ಲಿಂದ ಹೊರಟು ಹೋದಳು.. ಸ್ನೇಹಿತರೆ ನಾವು ನಮ್ಮ ಜೀವನದಲ್ಲಿ ಬರುವಾಗ ಮತ್ತು ಹೋಗುವಾಗ ಎನ್ನನ್ನು ಹೊತ್ತುಕೊಂಡು ಹೋಗುವುದಿಲ್ಲ.. ಆದರೆ ಈ ಸಮಾಜದಲ್ಲಿ ನಾವು ನಮ್ಮ ಸ್ವಾರ್ಥಿಗಳಾಗಿ ಜೀವಿಸುತ್ತಿದ್ದೇವೆ

ಬದಲಿಗೆ ನಮ್ಮ ಸ್ವಲ್ಪ ಮಟ್ಟಿಗೆ ಸಮಯವನ್ನು ಅವರೊಂದಿಗೆ ಕಳೆದು ಅವರ ಕಷ್ಟ ಅರಿತು ನಮ್ಮ ಕೈಲಾದ ಸಹಾಯವನ್ನ ಮಾಡಿದರೆ ನಾವು ಕಳೆದುಕೊಳ್ಳುವುದು ಏನು ಇಲ್ಲ ಅಲ್ಲವೇ.. ನಾವು ಇನ್ನೂ ಮುಂದೆ ಆದರೂ ರಸ್ತೆಯಲ್ಲಿ ಯಾರಾದರೂ ಹೊಟ್ಟೆ ಹಸಿದವರು ಕಂಡರೆ ಅವರಿಗೆ ಹಣ ನೀಡುವ ಬದಲು 20 ಅಥವಾ 30 ರೂಪಾಯಿ ಖರ್ಚು ಮಾಡಿ ಒಂದು ಹೊತ್ತಿನ ಊಟವನ್ನು ಕೊಡಿಸಿ ಯಾಕೆಂದರೆ ಮತ್ತೊಬ್ಬರಿಗೆ ಅನ್ನ ನೀಡುವ ಭಾಗ್ಯ ದೇವರು ಪ್ರತಿಯೊಬ್ಬರಿಗೂ ನೀಡುವುದಿಲ್ಲ ಒಂದು ವೇಳೆ ಅಂತಹ ಅವಕಾಶ ಸಿಕ್ಕಿದ ಮೇಲೆ ಉಪಯೋಗಿಸಿಕೊಳ್ಳುವುದು ಮನುಷ್ಯನ ಧರ್ಮ ಕೂಡ ಹೌದು.. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನ ತಿಳಿಸಿ..