Advertisements

ಬೇಸಗೆ ಸಮಯದಲ್ಲಿ ಕುಡಿಯುವ ನೀರಿಗಾಗಿ ಕಾರವಾರದ ಈ ರೈತ ಮಾಡಿದ ಸೂಪರ್ ಪ್ಲಾನ್ ಏನು ಗೊತ್ತಾ? ನಿಜಕ್ಕೂ ಈ ರೈತ ಗ್ರೇಟ್..

Kannada Mahiti

ನಮಸ್ತೆ ಸ್ನೇಹಿತರೆ, ನಮ್ಮ‌ ಹಿಂದಿನ ಕಾಲದಲ್ಲಿ ಪೂರ್ವಜರು ಅಷ್ಟಿಲ್ಲದೆ ತಮ್ಮ ಅನುಭವದ ಮಾತುಗಳನ್ನ ನುಡಿ ಮುತ್ತುಗಳಾಗಿ ಮಾಡಲಿಲ್ಲ ಅದಕ್ಕೆ ಹೇಳುವುದು ‘ಒಂದು ವೇಳೆ ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ ಅಂತ’ ಜೀವನದಲ್ಲಿ ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದರೆ ಮುಂದೊಂದು ದಿನ ಸುಖವಾಗಿ ಕುಳಿತು ತಿನ್ನಬಹುದು ಅದೇರೀತಿ ಕಷ್ಟಪಟ್ಟು ದುಡಿದರೆ ಕಲ್ಲು ಬಂಡೆಯನ್ನು ಕೂಡ ಕರಗಿಸಿ ನೀರು ಹರಿಸಬಹುದು.. ಹೌದು ಈಗೆ ಒಬ್ಬ ವ್ಯಕ್ತಿ ಉತ್ತರ ಕನ್ನಡದಲ್ಲಿ ಕೂಲಿ ಕಾರ್ಮಿಕರೊಬ್ಬರು ಈಗ ತನ್ನ ಊರಿನಲ್ಲಿ ಕುಡಿಯುವ ನೀರಿನ ದಾಹವನ್ನು ನೀಗಿಸಿ ಆಧುನಿಕ ಭಗೀರಥ ಅನಿಸಿಕೊಂಡಿದ್ದಾರೆ.. ಆದ‌ರೆ ನೀರು ಬಾವಿಯನ್ನು ಕೊರೆಯಲು ಇವರು ಪಟ್ಟ ಕಷ್ಟವನ್ನ ಕೇಳಿದ್ರೆ ನಿಜಕ್ಕೂ ನೀವು ಕೂಡ ಗ್ರೇಟ್ ಅಂತೀರಾ..

Advertisements
Advertisements

ಹೌದು ಈ ಕೊ’ರೋನ ಮ’ಹಾಮಾರಿ ದೇಶದಲ್ಲಿ ಕಾಣಿಸಿಕೊಂಡಾಗಿನಿಂದ ಕೆಲವರ ಬದುಕು ಅಸ್ತವ್ಯಸ್ತವಾಯಿತ್ತು ಅದರಲ್ಲೂ ಕೂಲಿ ಕಾರ್ಮಿಕರು ಕೆಲಸ ಇಲ್ಲದೆ ಒಂದು ಒತ್ತಿನ‌ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು ಇದೇರೀತಿ ಕೂಲಿ ಕೆಲಸವನ್ನ ಕಳೆದುಕೊಂಡು ಮನೆಯಲ್ಲೇ ಇದ್ದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಮಂಜುಗುಣಿ ಎಂಬ ಕೂಲಿ ಕಾರ್ಮಿಕ ಕುಡಿಯುವ ನೀರಿಗಾಗಿ ಯಾರೊಬ್ಬರ ಸಹಾಯವನ್ನ ಪಡೆಯದೆ ಕಷ್ಟಪಟ್ಟು ಒಬ್ಬನೇ ಏಕಾಂಗಿಯಾಗಿ ಬಾವಿತೋಡಲು ಶುರುಮಾಡಿದರು.. ಉತ್ತರ ಕನ್ನಡದ ಹಲವು ಊರಿನಲ್ಲಿ ಬೇಸಿಗೆ ಕಾಲ ಬಂತು ಎಂದರೆ ಸಾಕು ಕುಡಿಯುವ ನೀತಿಗೆ ತುಂಬಾ ಕಷ್ಟಕರವಾಗಿರುತ್ತದೆ..

ಈ ಕಷ್ಟವನ್ನ ಗಮನಿಸಿದ ಕೂಲಿ ಕಾರ್ಮಿಕ ಮಹಾದೇವ ಮಂಕಾಳು ನಾಯ್ಕ ತನ್ನ ಊರಿನಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆಯನ್ನು ನೀಗಿಸಲು ತನ್ನ ಮನೆಯ ಹಿಂಭಾಗದಲ್ಲಿ ಒಂದು ಜಾಗ ಮಾಡಿಕೊಂಡು ಗುದ್ದಲಿ ಹಿಡಿದು ಬಾವಿ ತೊಡಲು ಮುಂದಾದರು ಎಂಟು ತಿಂಗಳುಗಳ ಕಾಲ ಕಷ್ಟಪಟ್ಟು ಬಾವಿ ತೋಡಿದ ಫಲವಾಗಿ 32 ಆಳ ಇರುವ ಬಾವಿಯನ್ನ ತೋಡಿದರು.‌ ಅಷ್ಟರಲ್ಲಿ ಈ ಕೊರೋನ ಲಾಕ್ ಡೌನ್ ಸಡಿಲಿಕೆಯಾಗಿ ಮತ್ತೆ ಕೆಲಸಕ್ಕೆ ಹೊರಟ ಮಹದೇವ ಅವರಿಗೆ ಮತ್ತೆ ಲಾಕ್ ಡೌನ್ ಆದ ಕಾರಣದಿಂದ ಪುನಃ ಊರಿಗೆ ವಾಪಸು ಬಂದು 32 ಅಡಿ ಆಳ ಇರುವ ಬಾವಿಯನ್ನ 4 ಅಡಿ ಬಾವಿಯನ್ನ ಮತ್ತೆ ಕೊರೆಯಲು ಶುರುಮಾಡುತ್ತಾರೆ‌

ಇವರ ಪ್ರಯತ್ನಕ್ಕೆ ಫಲವಾಗಿ ಹತ್ತು ಅಡಿಯಲ್ಲಿ ನೀರು ಮೇಲೆ ಬರಲು ಶುರುವಾಯಿತು.. ಇನ್ನೂ ಒಂದು ಬಾವಿಯನ್ನು ಕೊರೆಯವುದು‌ ಅಷ್ಟು ಸುಲಭದ ಮಾತಲ್ಲ ಅದರಲ್ಲಿ ನಾಲ್ಕು ಅಡಿ ಕಲ್ಲನ್ನು ಕೊರೆದ ಮಹದೇವ ಅವರ ಭಗೀರಥ ಪ್ರಯತ್ನಕ್ಕೆ ಕುಟುಂಬದವರು ಮಾತ್ರವಲ್ಲದೆ ಇಡೀ ಊರಿನ ಜನತೆ ಎಲ್ಲರೂ ಕೂಡ ತಮ್ಮ‌ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.. ತಮ್ಮಗೆ ಮಾತ್ರವಲ್ಲದೆ ಇಡೀ ಊರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ ಆಧುನಿಕ ಭಗೀರಥ ಎಂದು ಕರೆಸಿಕೊಂಡಿರುವ ಮಹದೇವ ಅವರ ಈ ಪರಿಶ್ರಮಕ್ಕೆ ನಿಮ್ಮ ಅಭಿಪ್ರಾಯವನ್ನ ತಿಳಿಸಿ..