Advertisements

12 ಮಾವಿನ ಹಣ್ಣನ್ನು 1.2 ಲಕ್ಷಕ್ಕೆ ಮಾರಟ ಮಾಡಿದ ಈ ಹುಡುಗಿ ಅದು ಹೇಗೆ ಗೊತ್ತಾ? ನೋಡಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ನಾವು ಮಾವಿನ ಹೆಣ್ಣಿನ ವ್ಯಾಪಾರಗಳನ್ನ ನೋಡಿರುತ್ತೇವೆ ಅಲ್ಲದೆ ಆ ಮಾವಿನ ಹಣ್ಣನ್ನ ಸರಿಸುಮಾರು ಅಂದ್ರೆ ಎಷ್ಟು ರೂಪಾಯಿಗೆ ಮಾರಬಹುದು ಅಥವಾ ಕೊಂಡುಕೊಳ್ಳಬಹುದು ನೂರು ಅಥವಾ ಇನ್ನೂರು ರೂಪಾಯಿ ಮಾತ್ರವೇ. ಆದರೆ ಇಲ್ಲಿ ಈ ಒಂದು ಮಾವಿನ ಹಣ್ಣಿನ ಬೆಲೆ ಬರೋಬ್ಬರಿ ಹತ್ತು ಸಾವಿರ ರೂಪಾಯಿಯಂತೆ ಹನ್ನೆರಡು ಮಾವಿನ ಹಣ್ಣಿಗೆ ಒಂದು‌ ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗೆ ಮಾರಟ ಮಾಡಿದ್ದಾಳೆ ಈ ಬಾಲಕಿ.. ಹೌದು ನೀವು ಯೋಚಿಸಬಹುದು ಈ ಒಂದು ಮಾವಿನ ಹಣ್ಣು ಇಷ್ಟು ದುಬಾರಿನ ಅಂತ ಇದನ್ನು ನಂಬುವುದು ಸ್ವಲ್ಪ ಕಷ್ಟ ಎನಿಸಬಹುದು ಆದರೆ ಇದು ಸತ್ಯ.. ಈ ವಿಚಾರ ನಿಜಕ್ಕೂ ನಿಮಗೆ ಆಶ್ಚರ್ಯ ಅನಿಸಬಹುದು ಆದರೆ ಖಂಡಿತ ಇದು ಸಾಧ್ಯ..

Advertisements
Advertisements

ಹೌದು ಇದ್ದನ್ನ ಜೆಮ್ ಶೆಟ್ ಪುರದ ಈ ಹುಡುಗಿ‌ ಸಾಧಿಸಿ ತೋರಿಸಿದ್ದಾಳೆ.‌ ಹೌದು ಐದನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಈ ಹುಡುಗಿಯ ಹೆಸರು ತುಳಸಿ ಕುಮಾರಿ ಅಂತ ಈಕೆಗೆ ಓದುವುದು ಎಂದರೆ ತುಂಬಾನೇ ಇಷ್ಟವಂತೆ. ಆದರೆ ಈ ಕೊ’ರೋನ ಕಾರಣದಿಂದ ಇಡೀ ರಾಜ್ಯವೇ ಲಾಕ್ ಡೌನ್ ನಿಂದಾಗಿ ಶಾಲೆಗಳು ಬಂದ್ ಆಗಿದ್ದವು.. ಇದರಿಂದ ಆನ್ ಲೈನ್ ತರಗತಿಗಳಲ್ಲಿ ಪಾಲ್ಗೊಳ್ಳುವುದಕ್ಕೆ ಈ ಹುಡುಗಿಯ ಬಳಿ ಯಾವುದೇ ರೀತಿಯ ಸ್ಮಾರ್ಟ್ ಫೋನ್ ಕೂಡ ಇರಲಿಲ್ಲ ಈಗಾಗಿ ಸ್ಥಳೀಯ ಮಾದ್ಯಮ ಒಂದರಲ್ಲಿ ತನಗೆ ಒಂದು ಮೊಬೈಲ್ ಕೂಡಿಸುವಂತೆ ಕೇಲವು ದಾನಿಗಳ ಬಳಿ ಕೇಳಿಕೊಂಡಿದ್ದಳು ಆದರೆ ಯಾರೊಬ್ಬರೂ ಕೂಡ ಈ ಪುಟ್ಟ ಹುಡುಗಿಯ ಬೇಡಿಕೆಗೆ‌ ಸಂಧಿಸಿಲ್ಲ ಈಗಾಗಿ ಮಾವಿನ ಹಣ್ಣನ್ನು ಮಾರಟ ಮಾಡಿ ದುಡ್ಡು ಸಂಪಾದನೆ ಮಾಡಿ ಮೊಬೈಲ್ ಅನ್ನು ತೆಗೆದುಕೊಳ್ಳುವುದಕ್ಕೆ ಮುಂದಾಗಿದ್ದಾಳೆ

ಇನ್ನೂ ಈ ವಿಷಯ ತಿಳಿದ ಶಿಕ್ಷಣ ಸಂಸ್ಥೆ ಒಂದರ ವ್ಯವಸ್ಥಾಪಕ ನಿರ್ದೇಶಕನಾದ ಆಮೇಯ ಏಟೆ ಎನ್ನುವ ವ್ಯಕ್ತಿ ಈ‌ ಹುಡುಗಿಗೆ ಸಹಾಯ ಮಾಡಲು ಮುಂದಾದ.. ನಂತರ ತುಳಸಿ ಕುಮಾರಿ ಮಾವಿನ ಹಣ್ಣು ಮಾರಾಟ ಮಾಡುತ್ತಿದ್ದ ಜಾಗಕ್ಕೆ ಹೋಗಿ ಒಂದು ಹಣ್ಣಿಗೆ ಹತ್ತು ಸಾವಿರದಂತೆ ಒಟ್ಟು ಒಂದು ಲಕ್ಷದ ಇಪ್ಪತ್ತು ಸಾವಿರದಂತೆ ಹನ್ನೆರಡು ಮಾವಿನ ಹಣ್ಣನ್ನು ಖರೀದಿ ಮಾಡಿದರು ಇನ್ನೂ ಆ ಸಮಯದಲ್ಲೇ ಆ ಹುಡುಗಿಯ ತಂದೆಯ ಖಾತೆಗೆ ಹಣವನ್ನು ಕೂಡ ವರ್ಗಾವಣೆ ಮಾಡಿದ್ದರು.. ಆಗ ಅವರ ತಂದೆ ತನ್ನ ಮಗಳಾದ ತುಳಸಿ ಕುಮಾರಿಗೆ ಒಂದು ಸ್ಮಾರ್ಟ್ ಫೋನ್ ಅನ್ನು ಕೊಡಿಸಿದ್ದರು ಇನ್ನೂ ತುಳಸಿ ಕುಮಾರಿಯ ಉದ್ದೇಶ ಮತ್ತು ಅದಕ್ಕಾಗಿ ಆಕೆ ಪಟ್ಟ ಶ್ರಮ ಇದಕ್ಕೆಲ್ಲ ಒಳ್ಳೆಯ ಬೆಲೆ ಸಿಕ್ಕಿತು ಆಕೆಯ ಶಿಕ್ಷಣಕ್ಕೆ ಮತ್ತಷ್ಟು ನೆರವು ನೀಡುತ್ತೆನೇ ಎಂದು ಆಮೆಯ ತಿಳಿಸಿದರು.. ಇನ್ನೂ ಇಂತಹ ಒಳ್ಳೆಯ ಪ್ರಯತ್ನ ಹಾಗು ಅನೇಕ ಮಕ್ಕಳಿಗೆ ತಮ್ಮ ಕೈಲಾದ ಸಹಾಯ ಮಾಡುವ ಅಮೇಯರಂತಹ ಒಳ್ಳೆಯ ವ್ಯಕ್ತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..