Advertisements

ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮನೆಯಲ್ಲಿ ವರಮಹಾಲಕ್ಮೀ ಹಬ್ಬದ ಸಂಭ್ರಮ? ಹಬ್ಬದ ದಿನ ಬಾಲ್ಯದ ದಿನಗಳನ್ನ ನೆನಪು ಮಾಡಿಕೊಂಡು ರಾಧಿಕಾ ಹೇಳಿದ್ದೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ನಮ್ಮ ಭಾರತೀಯ ಹೆಣ್ಣು ಮಕ್ಕಳಿಗೆ ಅತ್ಯಂತ ಪ್ರೀತಿಯಾವಾದ ಹಬ್ಬ ಅಂದ್ರೆ ಅದು ವರಮಹಾಲಕ್ಮೀ ಹಬ್ಬ ಅಂತ ಹೇಳಬಹುದು. ಶ್ರಾವಣ ಮಾಸದ ಉಳಿದೆಲ್ಲಾ ಹಬ್ಬಗಳಿಗಿಂತ ಹೆಚ್ಚಾಗಿ ಶ್ರದ್ಧ ಭಕ್ತಿಯಿಂದ ಆಚರಣೆ ಮಾಡುವ ವರಮಹಾಲಕ್ಮೀ ಹಬ್ಬವನ್ನ ಎಲ್ಲರೂ ತುಂಬಾನೇ ಖುಷಿಯಿಂದ ಸಡಗರದಿಂದ ಆಚರಣೆ ಮಾಡುತ್ತಾರೆ.. ಅದರಲ್ಲೂ ನಮ್ಮ‌ ಸ್ಯಾಂಡಲ್ವುಡ್ ನಟಿಯರಿಗೆ‌ ವರಮಹಾಲಕ್ಮೀ ಹಬ್ಬ ಅಂದ್ರೆ ಅದೇನೂ ಸಂಭ್ರಮ ಸಡಗರ, ವರಮಹಾಲಕ್ಮೀ ಹಬ್ಬದ ಆಚರಣೆಯಿಂದ ಕನ್ನಡದ ಕೆಲ‌ ನಟಿಯರು ಹಬ್ಬವನ್ನ ಬಹಳಷ್ಟು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ.. ಅದರಲ್ಲೂ ನಮ್ಮ ಯಶ್ ಮತ್ತು ರಾಧಿಕಾ ಪಂಡಿತ್ ಅವರು ತಮ್ಮ‌ ಇಬ್ಬರೂ ಮಕ್ಕಳ ಜೊತೆಗೆ ಹೊಸ ಮನೆಯಲ್ಲಿ‌ ವರಮಹಾಲಕ್ಮೀ ಹಬ್ಬವನ್ನ ತುಂಬಾನೇ ಅದ್ದೂರಿಯಾಗಿ ವಿಶೇಷವಾಗಿ ಆಚರಣೆ ಮಾಡಿದ್ದಾರೆ..

Advertisements
Advertisements

ವರಮಹಾಲಕ್ಮೀ ಹಬ್ಬಕ್ಕೆ ಯಶ್ ಮಗಳಾದ ಐರಾಗೆ ಯಶ್ ತಾಯಿಯ ಕೂಡ ಮುದ್ದಿನ ಮೊಮ್ಮಗಳಿಗೆ ಬಟ್ಟೆಗಳನ್ನ ಕೊಡಿಸಿ ತುಂಬಾನೇ ಖುಷಿ ಪಟ್ಟಿದ್ದಾರೆ.. ಇನ್ನೂ ವರಮಹಾಲಕ್ಮೀ ಹಬ್ಬದ ಸಂದರ್ಭದ ಬಗ್ಗೆ ರಾಧಿಕಾ ಪಂಡಿತ್ ಅವರು ಮಾತಾನಾಡಿದ್ದು ಏನೆಂದರೆ. ವರ್ಷದಲ್ಲಿ ತುಂಬಾ ಅದ್ದೂರಿಯಾಗಿ ಹಾಗು ಸಂಭ್ರಮದಿಂದ ಆಚರಣೆ ಮಾಡುವ ಹಬ್ಬ ಅಂದ್ರೆ ಅದು ಈ ವರಮಹಾಲಕ್ಮೀ ಹಬ್ಬ ಮಾತ್ರವೇ.. ದೇವಿಗೆ ಲಕ್ಷ್ಮೀ ಮುಖವಾಡ ಧರಿಸಿ ಹಬ್ಬದ ದಿನದಂದು ಮುಂಜಾನೆಯಿಂದ ಸಂಜೆಯವರೆಗೂ ದೇವಿಯ ಆರಾಧನೆ ಮಾಡುತ್ತೇವೆ..‌ ಅಪ್ಪ ಅಮ್ಮ ಅತ್ತೆ ಮಾವ ಎಲ್ಲರ ಜೊತೆಗೆ ಪ್ರತಿ ವರ್ಷ ಹಬ್ಬವನ್ನ ಆಚರಣೆ ಮಾಡುತ್ತಿದ್ದೆ ಆದರೆ‌ ‌ಈ‌ ಬಾರಿ‌ ನಾವು ಹೊಸ ಮನೆ ವರಮಹಾಲಕ್ಮೀ ಹಬ್ಬ ಆಚರಣೆ ಮಾಡುವುದು ತುಂಬಾನೇ ವಿಶೇಷವಾಗಿದೆ.. ನಾನು ಬಾಲ್ಯದಿಂದ‌ ಕಾಲೇಜಿಗೆ ಹೋಗುವಾಗ ಅಜ್ಜಿಯನ್ನ ತುಂಬಾನೇ ಪ್ರೀತಿಸುತ್ತಿದ್ದೇ..

ಆಗಾಗಿ ಅಜ್ಜಿ ನನಗೆ ಪ್ರತಿ ವರ್ಷ ಏನಾದರೂ ಉಡುಗೊರೆ ಕೊಡುತ್ತಿದ್ದರು.‌ ಅಪ್ಪ ಅಮ್ಮ ನನಗೆ ಕಿವಿಯೋಲೆಯನ್ನ ಉಡುಗೊರೆಯಾಗಿ ಕೊಡಿಸಿದರು. ಆದರೆ‌ ಈಗ ನಾವೇ ಉಡುಗೊರೆ ಕೊಡುವಷ್ಟು ಸಮರ್ಥವಾಗಿದೇವೆ ಎಲ್ಲಾ ಆ ತಾಯಿಯ ಮಹಿಮೆ ಅಂತ ರಾಧಿಕಾ ಅವರು ಹಬ್ಬದ ಸಂದರ್ಭದಲ್ಲಿ ಹೇಳಿದ್ದರು.. ಇನ್ನೂ ರಾಧಿಕಾ ಅವರು ನಾನು ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಈ‌ ಹಬ್ಬವನ್ನ ನೋಡುತ್ತಿದ್ದೆ ಆದರೆ‌ ಈ ಹಬ್ಬವನ್ನ ಮನೆಯಲ್ಲಿ ಯಾಕೆ ಆಚರಣೆ ಮಾಡುತ್ತಾರೆ ಅಂತ ತಿಳಿದಿರಲಿಲ್ಲ.. ನಂತರ ನಿಧಾನವಾಗಿ ವರಮಹಾಲಕ್ಮೀ ಹಬ್ಬದ ವಿಶೇಷತೆ ಮತ್ತು ಮಹತ್ವ ತಿಳಿಯಿತು. ಶುಕ್ರವಾರ ನಾವು ಎಲ್ಲರೂ ಎಲ್ಲಿಗೂ ಹೋಗದೆ ಮನೆಯಲ್ಲಿ ಹಬ್ಬವನ್ನ ಆಚರಣೆ ಮಾಡುತ್ತೇವೆ ಎಂದು ನಟಿ‌ ರಾಧಿಕಾ ಪಂಡಿತ್ ಅವರು ಹೇಳಿಕೊಂಡಿದ್ದಾರೆ..