Advertisements

ನೀವು ಎಂದೂ ನೋಡಿರದ ವಿ’ಚಿತ್ರ ಗ್ರಾಮ! 500 ಮನೆ ಇರುವ ಈ ಗ್ರಾಮದಲ್ಲಿ ಎಲ್ಲರಿಗೂ ಒಂದೇ ರೀತಿಯ ಹೆಸರು ಯಾಕೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ನೀವು ಇಂದೆಂದು ನೋಡಿರದ ವಿಶೇಷ ಗ್ರಾಮವಿದೆ.. ಈ‌ ಗ್ರಾಮ‌‌ ಅಂತಿಂಥ ಗ್ರಾಮವಲ್ಲ‌, ಈ ಗ್ರಾಮ ಭಕ್ತಿಗೆ ಮತ್ತೊಂದು ರೂಪ ಅಂತಾನೇ ಹೇಳಬಹುದು.. ಯಾಕೆಂದರೆ ಈ ಗ್ರಾಮದಲ್ಲಿ ಹುಟ್ಟುವ ಪ್ರತಿಯೊಬ್ಬರಿಗೂ ಕೂಡ ಒಂದೇ ಹೆಸರನ್ನು ಇಡುತ್ತಾರೆ.. ಅಷ್ಟೇ ಯಾಕೆ ಈ‌ ಗ್ರಾಮಕ್ಕೆ ಸೊಸೆಯಾಗಿ ಬರುವ ಮಹಿಳೆಗೂ ಕೂಡ ಅದೇ ಹೆಸರು ಇಟ್ಟು ಕರೆಯಲಾಗುತ್ತದೆ.. ಅಷ್ಟಕ್ಕೂ ಈ ಒಂದು ಗ್ರಾಮದ ವಿಶೇಷತೆ ಆದರೂ ಏನು! ಯಾಕೆ ಇಲ್ಲಿ ಒಂದೇ ರೀತಿಯ ಹೆಸರು ಇಡುತ್ತಾರೆ ಗೊತ್ತಾ? ನೋಡೋಣ ಬನ್ನಿ.. ಹೌದು ಸ್ನೇಹಿತರೆ ಈ ಗ್ರಾಮ ಇರೋದು ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ಹೆಸರು ಹುಲಿಕೆರೆ ಇನಾಮ್ ಗ್ರಾಮ‌ ಈ ಒಂದು ಗ್ರಾಮದ ದೇವತೆ ಗದ್ದೆಮ್ಮ ದೇವಿ‌ ಅಂತ..

[widget id=”custom_html-2″]

Advertisements
Advertisements

ಇನ್ನೂ ಈ ಒಂದು ಗ್ರಾಮದಲ್ಲಿ 500ಕ್ಕೂ‌ ಹೆಚ್ಚಿನ ಮನೆಗಳಿಂದು ಇಲ್ಲಿ 2500ಕ್ಕೂ ಹೆಚ್ಚಿನ ಜನರು ಇಲ್ಲಿ ವಾಸ ಮಾಡುತ್ತಿದ್ದಾರೆ.. ಇಲ್ಲಿ ಯಾವುದೇ ಮನೆಯಲ್ಲಿ ಆದರೂ ಹುಟ್ಟುವ ಮಗು ಗಂಡು ಮಗು ಆದರೆ ಗದ್ದೆಪ್ಪ ಎಂದು ಹೆಣ್ಣು ಮಗು ಆದರೆ ಗದ್ದೆಮ್ಮ ಎಂದು ಹೆಸರಿಟ್ಟು ನಾಮಕರಣ ಮಾಡುತ್ತಾರೆ.. ಅಷ್ಟೇ ಅಲ್ಲದೆ ಈ‌ ಗ್ರಾಮಕ್ಕೆ ಸೊಸೆಯಾಗಿ ಬರುವ ಮಹಿಳೆಗೂ ಕೂಡ ಗದ್ದೆಮ್ಮ ಎಂದು ಹೆಸರಿಟ್ಟು ಕರೆಯುತ್ತಾರೆ.. ಈ ಗ್ರಾಮದಲ್ಲಿ ದೇವಿಯ ಹೆಸರು ಇಡದಿದ್ದರೆ ಗದ್ದೆಮ್ಮ ನಮ್ಮ ಮನೆ ಮನೆತನವನ್ನು ಕಾಡುತ್ತಾಳೆ ಎಂದು ಹಿಂದಿನ ಕಾಲದಿಂದಲೂ ನಂಬಿಕೊಂಡು ಬಂದಿದ್ದಾರೆ ಈ ಕಾರಣಕ್ಕಾಗಿ ಆ ಗ್ರಾಮದಲ್ಲಿ ಹುಟ್ಟುವ ಪ್ರತಿಯೊಂದು ಮಗುವಿಗು ಕೂಡ ಗ್ರಾಮದೇವತೆಯ ಹೆಸರನ್ನು ಇಡಲಾಗುತ್ತದೆ..

[widget id=”custom_html-2″]

ಈ ಗ್ರಾಮದಲ್ಲಿ ಮತ್ತೊಂದು ವಿಶೇಷ ಏನೆಂದರೆ ಮಕ್ಕಳು ಇಲ್ಲದವರು ಈ ದೇವಿಯ ಬಳಿ ಹೋಗಿ ಕೇಳಿಕೊಂಡಾಗ ಅವರಿಗೆ ಮಕ್ಕಳು ಹಾಗಿರುವ ಉದಾಹರಣೆ‌ ಸಾಕಷ್ಟು ಇದೇ ಅಂತೆ.. ಈ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಕೂಡ ಇಂತಹ ಗ್ರಾಮ ಇಂದಿಗೂ ಇದೇ ಅನ್ನೊಂದು ಮತ್ತೊಂದು ಆಶ್ಚರ್ಯ ಕರ ಸಂಗತಿಯಾಗಿದೆ.. ನೀವು ಯೋಚಿಸ‌ಬಹುದು ಬಹುಶಃ ಈ ದೇವಿಯನ್ನು ನಂಬಿರುವ ಮತ್ತು ಗ್ರಾಮದಲ್ಲಿ ಹುಟ್ಟುವ ಪ್ರತಿಯೊಬ್ಬರಿಗೂ ಒಂದೇ ಹೆಸರು ಇಡುವ ಗ್ರಾಮ ನಮ್ಮ ದೇಶದಲ್ಲಿ ಅಲ್ಲ ಪ್ರಪಂಚದ ಎಲ್ಲಿಯೂ ಕೂಡ ಇಲ್ಲ ಎಂದು.. ಇನ್ನೂ‌ ಇಂತಹ ಸಂಪ್ರದಾಯವನ್ನು ಇಂದಿಗೂ ಕೂಡ ಮುಂದುವರೆಸಿಕೊಂಡು ಬರುವುದು ಅಷ್ಟು ಸುಲಭದ ಮಾತಲ್ಲ.. ಇವರ ಗಾಢವಾದ ನಂಬಿಕೆಗೆ ಸೆಲ್ಯೂಟ್ ಮಾಡಲೇಬೇಕು.. ಸ್ನೇಹಿತರೆ ಈ ಗ್ರಾಮದ ವಿಶೇಷತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..