Advertisements

ನಟ ರಮೇಶ್ ಅರವಿಂದ್ ಮಗಳು ನಿಹಾರಿಕ ಅದ್ದೂರಿ ಮದುವೆ! ಹುಡುಗ ಯಾರು ಮತ್ತು ಸಂಬಳ ಕೇಳಿದ್ರೆ ಶಾಕ್!

Kannada Mahiti

ನಮಸ್ತೆ ಸ್ನೇಹಿತರೆ, ಕನ್ನಡದ ಚಿತ್ರರಂಗದ ಹಿರಿಯ ನಟ ರಮೇಶ್ ರವರು ಯಾರಿಗೆ ತಾನೆ ಗೊತ್ತಿಲ್ಲ, ಇವರು ಸಿನಿಮಾಗಳಲ್ಲಿ ಅಲ್ಲದೆ ಅನೇಕ ಶೋಗಳಲ್ಲಿ ಕೂಡ ಕೆಲಸ ಮಾಡಿದ್ದಾರೆ ಇವರು ನಡೆಸಿಕೊಡುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವು ಜನ ಮೆಚ್ಚುಗೆಯನ್ನು ಪಡೆದಿದೆ ಈ ಕಾರ್ಯಕ್ರಮದಲ್ಲಿ ನಟ ರಮೇಶ್ ಅವರು ಹಲವು ಕಲಾವಿದರು ನಟ-ನಟಿಯರು ಇನ್ನೂ ಅನೇಕ ಗಣ್ಯ ವ್ಯಕ್ತಿಗಳನ್ನು ಇಂಟರ್ವ್ಯೂ ಮಾಡುವ ಮೂಲಕ ಅವರು ಬೆಳೆದು ಬಂದ ಹಾದಿಯನ್ನು ಜನತೆಗೆ ತಿಳಿಸುವ ಕಾರ್ಯವನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಇಂದಿಗೂ ಸಹ ಮಾಡುತ್ತಿದ್ದಾರೆ.. ಆದರೆ ಚಂದನವನದ ನಟ ರಮೇಶ್ ರವರ ಮನೆಯಲ್ಲಿ ಮದುವೆ ಸಂಭ್ರಮ ತುಂಬಿ ತುಳುಕಾಡುತ್ತಿದೆ, ಹೌದು ರಮೇಶ್ ಹಾಗೂ ಅರ್ಚನ ದಂಪತಿಗಳ ಪುತ್ರಿ ನಿಹಾರಿಕಾರವರ ಮದುವೆ ಇದೇ ಡಿಸೆಂಬರ್ 28 ರಂದು ಅಕ್ಷಯ್ ಅವರ ಜೊತೆ ನಡೆಯಲಿದೆ..

Advertisements
Advertisements

ನಿಹಾರಿಕಾ ಹಾಗೂ ಅಕ್ಷಯ್ ಇವರಿಬ್ಬರು ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು ಈಗ ಇಬ್ಬರೂ ಸಹಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಇವರ ವಿವಾಹ ಮಹೋತ್ಸವದ ಕಾರ್ಯಕ್ರಮವನ್ನು ಎರಡು ಕುಟುಂಬದ ಸಮ್ಮುಖದಲ್ಲಿ ಕೋವಿಡ್ ನಿಯಮದ ಅನುಸಾರವಾಗಿ ಇವರಿಬ್ಬರ ವಿವಾಹ ಮಹೋತ್ಸವವನ್ನು ನಡೆಸಲಿದ್ದಾರೆ, ಜನವರಿ 2ರಂದು ಆರತಕ್ಷತೆ ಆಯೋಜಿಸಿದ್ದು, ಅಂದು ಚಿತ್ರರಂಗ ಸೇರಿದಂತೆ ಅನೇಕ ಗಣ್ಯರನ್ನು ಸಹ ಈ ವಿವಾಹ ಮಹೋತ್ಸವಕ್ಕೆ ಆಗಮಿಸಲಿದ್ದಾರೆ‌ ಎಂದು ನಟ ರಮೇಶ್ ರವರು ತಿಳಿಸಿದ್ದಾರೆ, ಹೌದು ಅಂದು ನಾನು ಚಿತ್ರರಂಗಕ್ಕೆ ಬಂದ ದಿನದಿಂದಲೂ ಕರ್ನಾಟಕದ ಜನತೆ ಚಿತ್ರರಸಿಕರು ಹಾಗೂ ಮಾಧ್ಯಮದವರು ನನಗೆ ನೀಡಿರುವ ಪ್ರೋತ್ಸಾಹ ಅಷ್ಟಿಷ್ಟಲ್ಲ ಅಲ್ಲದೆ ನಿಮ್ಮ ಪ್ರೀತಿ ವಿಶ್ವಾಸ ವಧು-ವರರ ಮೇಲೆ ಹೀಗೆ ಇರಲಿ ಎಂದು ನಟ ರಮೇಶ್ ರವರು ಹೇಳಿದ್ದಾರೆ..

ನಿಹಾರಿಕಾ ಹಾಗೂ ಅಕ್ಷಯ್ ಇವರಿಬ್ಬರೂ ಒಂದೇ ಸಂಸ್ಥೆಯಲ್ಲಿ ಸುಮಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು ನಂತರ ಇಬ್ಬರ ನಡುವೆ ಪ್ರೀತಿಯಾಗಿ ಆ ವಿಷಯವನ್ನು ತಮ್ಮ ಮನೆಯವರ ಮುಂದೆ ಪ್ರೀತಿಯನ್ನು ಹೇಳಿಕೊಂಡು ನಂತರ ಇವರಿಬ್ಬರ ಮನೆಯಲ್ಲಿ ಕೂಡ ಇವರ ಪ್ರೀತಿಗೆ ಸಮ್ಮತಿ ನೀಡಿದ್ದರು, ಈಗ ರಮೇಶ್ ಅವರ ಅಳಿಯ ಒಂದು ದೊಡ್ಡ ಹುದ್ದೆಯಲ್ಲಿದ್ದು ತಿಂಗಳಿಗೆ ಸುಮಾರು ಆರು ಲಕ್ಷದವರೆಗೂ ಸಂಪಾದನೆ ಮಾಡುತ್ತಿದ್ದಾರೆ ಅಲ್ಲದೆ ಇವರ ಮನೆಯವರು ಕೂಡ ಹಣಕಾಸಿನಲ್ಲಿ ಚೆನ್ನಾಗಿದ್ದಾರೆ ಎಂದು ತಿಳಿದುಬಂದಿದೆ.. ಇನ್ನು ನಟ ರಮೇಶ್ ಅವರ ಮಗಳು ದಾಂಪತ್ಯ ಜೀವನ ಸದಾಕಾಲ ಸುಖವಾಗಿರಲೆಂದು ಹಾರೈಸೋಣ..