ನಮಸ್ತೆ ಸ್ನೇಹಿತರೆ, ಕಿರುತೆರೆಯ ನಂದ ಗೋಕುಲ ಸೀರಿಯಲ್ ನಿಂದ ಸಿನಿ ಪಯಣವನ್ನ ಆರಂಭ ಮಾಡಿ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ನಾಯಕ ನಟನಾಗಿ ಇಂದು ಪ್ಯಾನ್ ಇಂಡಿಯಾ ನಾಯಕ ನಟನಾಗಿ ಬೆಳೆದು ನಿಂತಿದ್ದಾರೆ ನಟ ರಾಕಿಂಗ್ ಸ್ಟಾರ್ ಯಶ್.. ಒಂದು ದಶಕಕ್ಕಿಂತ ತಮ್ಮ ಸಿನಿ ಜೀವನದಲ್ಲಿ 20 ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಇನ್ನೂ ಅತಿಹೆಚ್ಚು ಹಣ ಗಳಿಸಿದ ಯಶ್ ಅವರು ನಟನೆ ಮಾಡಿರುವ ಟಾಪ್ ಎಂಟು ಸಿನಿಮಾಗಳು ಯಾವುದೆಂದು ನೋಡೋಣ ಬನ್ನಿ.. ಹೌದು ನಟ ಯಶ್ ಅವರು ಅದ್ಭುತವಾಗಿ ಮಾಡಿ ಇಂದು ಎಂಟನೇ ಸ್ಥಾನದಲ್ಲಿ ಪೈಲ್ವಾನ್ ಕೃಷ್ಣ ಅವರು ಮೊದಲ ಬಾರಿಗೆ ನಿರ್ದೇಶನ ಮಾಡಿದ ಗಜಕೇಸರಿ ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ನಟನೆ ಮಾಡಿದ್ದಾರೆ ಇನ್ನೂ ಈ ಸಿನಿಮಾ ಸುಮಾರು ನಾಲ್ಕು ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿ 15ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ..

ಇನ್ನೂ ಏಳನೇ ಸ್ಥಾನದಲ್ಲಿ ಯೋಗರಾಜ್ ಭಟ್ ಅವರು ನಿರ್ದೇಶನ ಮಾಡಿದ ಡ್ರಾಮಾ ಸಿನಿಮಾ ಸುಮಾರು 4 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿದ್ದು 20 ಕೋಟಿ ಬಾಕ್ಸ್ ಆಫೀಸ್ ನಷ್ಟು ಹಣವನ್ನ ಕಲೆಕ್ಷನ್ ಮಾಡಿದೆ. ಆರನೇ ಸ್ಥಾನದಲ್ಲಿ ಯಾಶ್ ಮತ್ತು ಕೃತಿ ಕರಬಂಧ ಮುಖ್ಯ ಭೂಮಿಕೆಯಲ್ಲಿ ತೆರೆಕಂಡ ರೋಮ್ಯಾಂಟಿಕ್ ಹಾಗು ಕಾಮಿಡಿ ಸಿನಿಮಾವಾಗಿದ್ದ ಗೂಗ್ಲಿ ಸಿನಿಮಾ ಸುಮಾರು ಐದು ಕೋಟಿಯಷ್ಟು ಬಜೆಟ್ ನಲ್ಲಿ ನಿರ್ಮಾಣವಾಗಿ 25 ಕೋಟಿ ಬಾಕ್ಸ್ ಆಫೀಸ್ ಹಣವನ್ನ ಕಲೆಕ್ಷನ್ ಮಾಡಿದೆ.. ಇನ್ನೂ ಐದನೇ ಸ್ಥಾನದಲ್ಲಿ ರಾಜಹುಲಿ ಸಿನಿಮಾ ಆಗಿದ್ದು ಈ ಸಿನಿಮಾ ಆರು ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿ ಮೂವತ್ತು ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ.. ಇನ್ನೂ ನಾಲ್ಕನೇ ಸ್ಥಾನದಲ್ಲಿ ಸಂತು ಸ್ಟೇಟ್ ಫಾರ್ವರ್ಡ್ ಸಿನಿಮಾ ಇದ್ದು ಈ ಸಿನಿಮಾ ಸುಮಾರು 38 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ.

ಮೂರನೇ ಸ್ಥಾನದಲ್ಲಿ ಮಾಸ್ಟರ್ ಪೀಸ್ ಸಿನಿಮಾ ಇದ್ದು ಈ ಸಿನಿಮಾ ಸುಮಾರು 45 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ. ಎರಡನೇ ಸ್ಥಾನದಲ್ಲಿ ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ ಸಿನಿಮಾವಿದ್ದು ಈ ಸಿನಿಮಾ ಸುಮಾರು 7 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿ 50 ಕೋಟಿಯಷ್ಟು ಹಣ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ.. ಇನ್ನೂ ಈ ಎಲ್ಲಾ ಸಿನಿಮಾಗಳನ್ನ ಹಿಂದೇಟು ಹಾಕಿ ಮೊದಲ ಸ್ಥಾನವನ್ನು ಪಡೆದ ನಂಬರ್ ಒನ್ ಸಿನಿಮಾ ಕೆ.ಜಿ.ಎಪ್ ಸಿನಿಮಾವಾಗಿದೆ ಈ ಸಿನಿಮಾ ಸುಮಾರು 80 ಕೋಟಿ ಬಜೆಟ್ ನಲ್ಲಿ ನಿರ್ಮಾಣ ವಾಗಿ 250 ಕೋಟಿಯಷ್ಟು ಹಣ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ದಾಖಲೆ ಸೃಷ್ಟಿಸಿದೆ.. ಇದರಲ್ಲಿ ನಟ ಯಶ್ ನಟನೆ ಮಾಡಿದ ಯಾವ ಸಿನಿಮಾ ನಿಮಗೆ ತುಂಬಾ ಇಷ್ಡವಾಗಿದದ್ದೂ..