Advertisements

ಪ್ರಪಂಚದಲ್ಲಿ ಈ ಎರಡು ಸಮುದ್ರದ ನೀರು ಏಕೆ ಬೆರೆಯುವುದಿಲ್ಲ ಗೊತ್ತಾ..! ಈ ಸಮುದ್ರದ ನೀರಿನಲ್ಲಿ ಏನಿದೆ ಎಂಬುದನ್ನು ಎಂದಾದರೂ ತಿಳಿದಿದ್ದೀರಾ..

News

ನಮಸ್ತೆ ಸ್ನೇಹಿತರೆ ನಾವು ಈ ಪ್ರಪಂಚದಲ್ಲಿ ಜೀವಿಸುವುದಕ್ಕೆ ಮುಖ್ಯ ಕಾರಣ ಪ್ರಕೃತಿ ಕೊಡುವ ನೀರು, ಮನುಷ್ಯ ಊಟ ಇಲ್ಲದಿದ್ದರೂ ಸಹ ಬದುಕುತ್ತಾನೆ ಆದರೆ ಒಂದು ಹನಿ ನೀರು ಇಲ್ಲದಿದ್ದರೂ ಮನುಷ್ಯ ಭೂಮಿಯ ಮೇಲೆ ಉಳಿಯೋದು ತುಂಬಾನೇ ಕಷ್ಟ.. ಇನ್ನು ಈ ಭೂಮಿಯ ಮೇಲೆ ಪ್ರತಿಯೊಂದು ಜೀವರಾಶಿ, ಮರ,ಗಿಡ ಹಾಗೂ ಮನುಷ್ಯ ಜೀವಿಸಲು ಮುಖ್ಯ ಕಾರಣವೇ ನೀರು ಇನ್ನು ನಮ್ಮ ಭೂಮಿಯಲ್ಲಿ 70.8% ನೀರು ಮತ್ತು 29.2% ನಷ್ಟು ಭೂಮಿಯನ್ನು ಹೊಂದಿದೆ..

Advertisements
Advertisements

ಕೇವಲ ಭೂಮಿ ಮೇಲೆ ಅಲ್ಲದೆ ಮನುಷ್ಯನ ದೇಹದಲ್ಲಿ ಕೂಡ ಶೇಕಡಾ 50 ರಿಂದ 70ರಷ್ಟು ನೀರಿನಿಂದ ಕೂಡಿದೆ.. ಆದರೆ ನಮ್ಮ ಭೂಮಿಯ ಮೇಲೆ ಇರುವ ನೀರು 97ರಷ್ಟು ಉಪ್ಪು ನೀರಿನಿಂದ ಕೂಡಿದೆ ಇನ್ನುಳಿದ ಅಂದರೆ 3 ರಷ್ಟು ನೀರು ಕೇವಲ ಮನುಷ್ಯನ ಜೀವನದ ಉಪಯೋಗಕ್ಕೆ ಯೋಗ್ಯವಾಗಿದೆ.. ನಮಗೆ ಗೊತ್ತಿರುವ ಹಾಗೆ ನಮ್ಮ ಈ ಭೂಮಿಯ ಮೇಲೆ 5 ಸಮುದ್ರಗಳು ಇವೆ ಆದರೆ ಅದರಲ್ಲಿ ಕೇವಲ ಎರಡು ಸಮುದ್ರಗಳು ಮಾತ್ರ ಒಂದಕ್ಕೊಂದು ಬೆರೆಯುವುದಿಲ್ಲ.. ಇದಕ್ಕೆ ಮುಖ್ಯ ಕಾರಣ ಏನೆಂದರೆ, ಆ ಒಂದು ಸಮುದ್ರದಲ್ಲಿರುವ ಲವಣಾಂಶಗಳ ಏರುಪೇರಿನಿಂದ ಸಮುದ್ರದಲ್ಲಿರುವ ನೀರನ್ನು ಬೇರೆ ಸಮುದ್ರಕ್ಕೆ ಬೆರೆಯಲು ಸಾಧ್ಯವಾಗುವುದಿಲ್ಲ..

ಆದರೆ ಸಮುದ್ರದಲ್ಲಿ ಬೇರೆ ಬೇರೆ ರೀತಿಯ ಉಪ್ಪಿನ ಅಂಶ ಇರುತ್ತದೆ.. ಉಪ್ಪಿನ ಅಂಶ ಹೆಚ್ಚಿರುವ ಸಮುದ್ರದ ನೀರು ಮಂದವಾಗಿರುತ್ತದೆ, ಆದರೆ ಉಪ್ಪಿನ ಅಂಶ ಕಡಿಮೆ ಇರುವ ನೀರು ತೆಳುವಾಗಿರುತ್ತದೆ, ಈ ಒಂದು ಕಾರಣದಿಂದ ಸಮುದ್ರದ ನೀರು ಮತ್ತೊಂದು ಸಮುದ್ರದ ನೀರಿಗೆ ಬೆರೆಯುವುದಿಲ್ಲ ಉದಾಹರಣೆಗೆ ಡೀಸೆಲ್ ಗೆ ನೀರು ಮಿಕ್ಸ್ ಮಾಡಿದಾಗ ಹೇಗೆ ನೀರು ಮತ್ತು ಡೀಸೆಲ್ ಬೇರ್ಪಡೆ ಯಾಗುತ್ತದೆಯೋ ಅದೇ ರೀತಿ ಈ ಸಮುದ್ರದ ನೀರು ಕೂಡ ಇರುತ್ತದೆ ಇನ್ನು ಲವಣಂಶಗಳು ಹೆಚ್ಚಿರುವ ನೀರಿನಲ್ಲಿ ಯಾವ ವಸ್ತು ಕೂಡ ಬೇಗನೆ ಮುಳುಗುವುದಿಲ್ಲ ಮತ್ತೊಂದು ಕಾರಣ ಸಮುದ್ರದ ನೀರು ಹರಿಯುವುದಿಲ್ಲ ಸ್ಟೇಬಲ್ ಆಗಿ ಇರುತ್ತದೆ.. ಈ ಕಾರಣದಿಂದ ನೀರು ಬೆರೆಯುವುದಿಲ್ಲ ಒಂದು ವೇಳೆ ನೀರು ಬೇರೆಯಬೇಕೆಂದರೆ ನೀರು ಹರಿಯುತ್ತಿರಬೇಕು..

ದೊಡ್ಡ ದೊಡ್ಡ ಅಲೆಗಳು, ಚಂಡಮಾರುತಗಳು, ಸೃಷ್ಟಿಯಾಗಬೇಕು ಅಥವಾ ಸಮುದ್ರದ ಒಳಗೆ ಭೂಕಂಪವಾಗಬೇಕು, ಈ ರೀತಿ ಆದರೆ ಮಾತ್ರ ಒಂದು ಸಮುದ್ರದ ನೀರು ಮತ್ತೊಂದು ಸಮುದ್ರದ ನೀರಿಗೆ ಬೆರೆಯುತ್ತದೆ ಈ ಒಂದು ಕಾರಣಗಳಿಂದ ಎರಡು ಸಮುದ್ರ ಒಂದಕ್ಕೊಂದು ಸೇರುವುದಿಲ್ಲ ಇನ್ನು ನಮ್ಮ ಭೂಮಿಯ ಮೇಲೆ 97ರಷ್ಟು ನೀರು ಬಂದಿದೆ ಅದರಲ್ಲಿ ಕೇವಲ ಮೂರು ಎಷ್ಟು ನೀರು ನಾವು ಕುಡಿಯಲು ಯೋಗ್ಯವಾಗಿರುತ್ತದೆ ಇನ್ನು ಆ ನೀರನ್ನು ನಾವು ಹಾಳುಮಾಡದೆ ಮಿತವಾಗಿ ಬಳಸುವುದು ಮನುಷ್ಯರ ಕರ್ತವ್ಯ ಭೂಮಿಯಲ್ಲಿ ಸಿಗುವ ಮೂರರಷ್ಟು ನೀರನ್ನು ಹೆಚ್ಚಾಗಿ ವ್ಯರ್ಥ ಮಾಡುತ್ತಿದ್ದರೆ ಒಂದಲ್ಲ ಒಂದು ದಿನ ಆ ನೀರಿಗೂ ಕೂಡ ತುಂಬಾ ಕಷ್ಟ ಬರುತ್ತದೆ…