Advertisements

ಇಂಜಿನಿಯರಿಂಗ್‌ ಮಾಡಿ ವ್ಯವಸಾಯ ಮಾಡುತ್ತಿರುವ ಇಬ್ಬರು ಹುಡುಗಿಯರು.! ಆದರೆ ಕೃಷಿಯಲ್ಲಿ ಇಬ್ಬರು ಹುಡುಗಿಯರು ಮಾಡಿದ ಕೆಲಸ ಏನು ಗೊತ್ತಾ.?

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ವಿಜ್ಞಾನದ ಯುಗದಲ್ಲಿ ಯಾರು ತಾನೇ ವ್ಯವಸಾಯದ ಕಡೆ ಹೆಚ್ಚು ಗಮನ ಹರಿಸುತ್ತಾರೆ, ಅದರಲ್ಲೂ ವಿದ್ಯಾವಂತರು ಕೃಷಿಯಲ್ಲಿ ಕೆಲಸ ಮಾಡುವ ಬದಲಿಗೆ ಬೇರೆ ಬೇರೆ ಕಂಪನಿಗಳಲ್ಲಿ ಅವರು ಕೊಡುವ ಟಾರ್ಗೆಟ್ ಅನ್ನು ಪೂರ್ತಿ ಮಾಡುತ್ತಾ ಬೆಳಗ್ಗೆ ಹೋಗಿ ಸಂಜೆ ಬರುವಂತಹ ವ್ಯಕ್ತಿಗಳು ಕೂಡ ಈ ವ್ಯವಸಾಯ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ.. ಅದರಲ್ಲೂ ಕೂಡ ತೋಟಗಳಲ್ಲಿ, ಗದ್ದೆಗಳಲ್ಲಿ ಕೃಷಿ ಮಾಡಲು ಯಾರು ತಾನೇ ಮುಂದೆ ಬಂದು ಈ ಕೆಲಸ ಮಾಡುತ್ತಾರೆ,? ಆದರೆ ಈ ಇಬ್ಬರು ಈ ಹುಡುಗಿಯರು ಮಾತ್ರ ಇಂಜಿನಿಯರಿಂಗ್ ಮಾಡಿ ತಿಂಗಳಿಗೆ ಲಕ್ಷ-ಲಕ್ಷ ಕೊಡುವಂತಹ ಕಂಪನಿಯಲ್ಲಿ ಕೆಲಸ ಮಾಡಬಹುದಿತ್ತು,

[widget id=”custom_html-2″]

Advertisements
Advertisements

ಆದರೆ ಈ ಇಬ್ಬರು ಹುಡುಗಿಯರು ಆ ರೀತಿ ಮಾಡಿದೆ ನಮಗೆ ಬೇರೆಯವರ ಬಳಿ ಹೋಗಿ ಮಾಡುವಂತಹ ಕೆಲಸ ನಮಗೆ ಬೇಡ ಎಂದು ಬಸ್ ಹತ್ತಿ ಸುಂದರವಾದ ಆಕಾಶದಷ್ಟು ನೆಮ್ಮದಿ ಸಿಗುವಂತಹ ತಮ್ಮ ಊರಿಗೆ ಹೊರಟರು.. ಆದರೆ ಇಂಜಿನಿಯರಿಂಗ್ ಮಾಡಿ ವ್ಯವಸಾಯ ಕೆಲಸ ಮಾಡಲು ಬಂದ ಇವರ ಹೆಸರು ಗಗನ ಮತ್ತು ಮೇಘ ಇಬ್ಬರು ಅವಳಿ ಜವಳಿ ಮಕ್ಕಳಾಗಿ ಜನಿಸಿದರು, ಅಲ್ಲದೆ ಇಬ್ಬರು ಒಟ್ಟಿಗೆನ್ನೆ ಇಂಜಿನಿಯರಿಂಗ್ ಮಾಡಿ, ವಿದ್ಯಾಭ್ಯಾಸದಲ್ಲಿ ರಾಂಕ್ ಸಹಾ ಪಡೆದಿದ್ದರು.. ಇವರು ಪ್ರಯತ್ನಿಸಿದರೆ ತಿಂಗಳಿಗೆ ಲಕ್ಷ ಗಟ್ಟಲೆ ಸಂಬಳ ಕೊಡುವಂತಹ ದೊಡ್ಡ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುಬಹುದಿತ್ತು.. ಆದರ ಜೊತೆಗೆ ಫಾರಿನ್ ಗೂ ಹೋಗಬಹುದಾಗಿತ್ತು. ಆದರೆ ಇಬ್ಬರು ಹುಡುಗಿಯರು ತಮ್ಮ ಜೀವನದಲ್ಲಿ ಆಯ್ಕೆ ಮಾಡಿಕೊಂಡ ಕೆಲಸವೇ ಬೇರೆಯಾಗಿತ್ತು..

[widget id=”custom_html-2″]

ಹೌದು ಸ್ನೇಹಿತರೆ, ಜೀವನದಲ್ಲಿ ವ್ಯವಸಾಯ ಮಾಡುವುದು ಇವರ ಉದ್ದೇಶವಾಗಿತ್ತು. ಲ್ಯಾಪ್ ಟಾಪ್ ಜೊತೆ ಸದಾ ತಮ್ಮ ಸಮಯವನ್ನು ಕಳೆಯುವಂತಹ ಯಾಂತ್ರಿಕ ಜೀವನ ಇವರಿಗೆ ಬೇಕಿರಲಿಲ್ಲ.. ಅದಕ್ಕಾಗಿ ದೇಹಕ್ಕೆ ಆರೋಗ್ಯ ಮತ್ತು ಮನಸ್ಸಿಗೆ ನೆಮ್ಮದಿ ಕೊಡುವಂತಹ ವ್ಯವಸಾಯ ಮಾಡಲು ಗಗನ ಮತ್ತು ಮೇಘ ಹೊರಟರು.. ಮೂಲತಃ ಇವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಸಳ್ಳಿ ಗ್ರಾಮದವರು.. ಇನ್ನು ಇವರ ತಂದೆಯ ಹೆಸರು ರಾಜೇಂದ್ರ ಅವರು ಕೃಷಿ ಕೆಲಸದಲ್ಲಿ ಹೆಚ್ಚು ಪ್ರವಿಣ್ಯತೆ ಪಡೆದಿದ್ದರು, ಗಗನ ಮತ್ತು ಮೇಘ ಅವರ ತಂದೆ ಹೆಚ್ಚಾಗಿ ಔಷಧಿ ಗಿಡಗಳನ್ನು ಬೆಳೆಸುವುದರಲ್ಲಿ ಯಶಸ್ವಿಯಾಗಿದ್ದಾರೆ. ತನ್ನ ತಂದೆಯವರು ಮಾಡುತ್ತಿದ್ದ ಕೆಲಸವನ್ನು ಆದರ್ಶವಾಗಿ ಮಾಡಿಕೊಂಡ ಗಗನ ಮತ್ತು ಮೇಘ, ಕಲಿತ ಜ್ಞಾನವನ್ನು ಕೃಷಿಯಲ್ಲಿ ತೊಡಗಿಸಿಕೊಂಡರು.. ನಂತರ ಕೃಷಿಯಲ್ಲಿ ಇಸ್ರೇಲ್ ಮಾದರಿಯ ಔಷಧಿ ಗಿಡಗಳನ್ನು ಬೆಳೆಯಲು ಪ್ರಾರಂಭಿಸಿದರು..

[widget id=”custom_html-2″]

ಕೃಷಿಯಲ್ಲಿ ಪ್ರಾರಂಭಿಸಿದ ಇಸ್ರೇಲ್ ಮಾದರಿಯ ಔಷಧೀ ಗಿಡಗಳನ್ನು ಬೆಳೆಸಿ ಮಾರಾಟ ಮಾಡುವುದರಲ್ಲಿ ಯಶಸ್ಸು ಸಾಧಿಸಿದರು.. ವಿವಿಧ ಔಷಧಿ ಗಿಡಗಳನ್ನು ಬೆಳೆಯುವುದನ್ನು ಚೆನ್ನಾಗಿ ಕಲಿತಿದ್ದ ಗಗನ ಮತ್ತು ಮೇಘ ವ್ಯವಸಾಯ ಮಾಡುವುದರಲ್ಲಿ ತಮ್ಮ ಉನ್ನತ ಜೀವನ ನಡೆಸುವ ಕಡೆಗೆ ಹೆಜ್ಜೆ ಇಡುತ್ತಿದ್ದರು.. ಈಗೆ ಕೃಷಿ ಮಾಡುತ್ತಾ ತನ್ನ ತಂದೆ-ತಾಯಿಯ ಜೊತೆ ನೆಮ್ಮದಿಯ ಬದುಕನ್ನು ನಡೆಸುತ್ತಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದಲ್ಲಿ ಬೇರೆ ಕಂಪನಿಯಲ್ಲಿ ಕೆಲಸ ಮಾಡಿ ಬೇರೆ ಕಂಪನಿಯಲ್ಲಿ ಬಳಸುವ ಅರ್ಧ ಬುದ್ಧಿಯನ್ನು ಕೃಷಿಯಲ್ಲಿ ಬಳಸಿದರೆ, ಹತ್ತಾರು ಜನರಿಗೆ ಅವರೆ ಕೆಲಸ ಕೊಡಬಹುದು.. ಸ್ನೇಹಿತರೆ ಇಂಜಿನಿಯರಿಂಗ್ ಮಾಡಿ ತನ್ನ ತಂದೆಯ ಹಾಗೆ ಕೃಷಿ ಕೆಲಸ ಮಾಡುತ್ತಿರುವ ಈ ಇಬ್ಬರು‌ ಹುಡುಗಿಯರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..